Bhagya Lakshmi Serial: ಸಿಕ್ಕಿದ್ದೆ ಚಾನ್ಸ್ ಅಂತ ಭಾಗ್ಯ ಮನೆಗೆ ಬಂದು ಮನಬಂದಂತೆ ಮಾತನಾಡಿದ ತಾಂಡವ್
ಭಾಗ್ಯ ನಿನಗೆ ಒಳ್ಳೆಯ ಹುಡುಗನ ಹುಡುಕಿ ನಾನೇ ಮದುವೆ ಮಾಡಿಸುತ್ತೇನೆ ಎಂದು ಪೂಜಾಗೆ ಮಾತು ಕೊಟ್ಟಿದ್ದಾಳೆ. ಅತ್ತ ತಾಂಡವ್ ಪೂಜಾಳ ಮದುವೆ ಆಗಲು ನಾನು ಬಿಡೋದೆ ಇಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಪೂಜಾ ಕಿಶನ್ ಜೊತೆ ಪಾರ್ಕ್ನಲ್ಲಿ ಮಾತನಾಡಿದ ವಿಚಾರ ಹಾಗೂ ಅವರಿಬ್ಬರು ಲವ್ ಮಾಡುತ್ತಾ ಇದ್ದಾರೆ ಎಂದು ತಾಂಡವ್ ಭಾಗ್ಯ ಮನೆಗೆ ಬಂದು ಕಿರುಚಾಡಿದ್ದಾನೆ.

Bhagya Lakshmi Serial

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ತಂಗಿ ಪೂಜಾಳ ಮದುವೆಯ ಕುರಿತು ಇಂಟ್ರೆಸ್ಟಿಂಗ್ ಎಪಿಸೋಡ್ ಸಾಗುತ್ತಿದೆ. ಒಂದುಕಡೆ ಪೂಜಾಳ ಮದುವೆ ಮಾಡಲು ಭಾಗ್ಯ ಎಲ್ಲಿಲ್ಲದ ಕಷ್ಟ ಪಡುತ್ತಿದ್ದಾಳೆ. ಬಂದಿದ್ದ ಒಂದು ಸಂಬಂಧವೂ ಮುರಿದು ಹೋಯಿತು. ಮತ್ತೊಂದೆಡೆ ತಾಂಡವ್ ಮದುವೆ ವಿಚಾರದಲ್ಲಿ ಹುಳಿ ಹಿಂಡುತ್ತಿದ್ದಾನೆ. ಭಾಗ್ಯ ನಿನಗೆ ಒಳ್ಳೆಯ ಹುಡುಗನ ಹುಡುಕಿ ನಾನೇ ಮದುವೆ ಮಾಡಿಸುತ್ತೇನೆ ಎಂದು ಪೂಜಾಗೆ ಮಾತು ಕೊಟ್ಟಿದ್ದಾಳೆ. ಅತ್ತ ತಾಂಡವ್ ಪೂಜಾಳ ಮದುವೆ ಆಗಲು ನಾನು ಬಿಡೋದೆ ಇಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಸದ್ಯ ಪೂಜಾ ಕಿಶನ್ ಜೊತೆ ಪಾರ್ಕ್ನಲ್ಲಿ ಮಾತನಾಡಿದ ವಿಚಾರ ಹಾಗೂ ಅವರಿಬ್ಬರು ಲವ್ ಮಾಡುತ್ತಾ ಇದ್ದಾರೆ ಎಂದು ತಾಂಡವ್ ಭಾಗ್ಯ ಮನೆಗೆ ಬಂದು ಕಿರುಚಾಡಿದ್ದಾನೆ. ಪೂಜಾ ಕೆಲಸ ಮಾಡುವ ಆಫೀಸ್ನ ಎಂಡಿ, ಕಾಲೇಜು ಸೀನಿಯರ್ ಕಿಶನ್ ಪ್ರಪೋಸ್ ಮಾಡಿದ್ದಕ್ಕೆ ಬೇಸರಗೊಂಡು ಪೂಜಾ ಆಫೀಸ್ ತೊರೆದು ಹೊರಬಂದಿದ್ದಾಳೆ. ಬಳಿಕ ದಾರಿಯಲ್ಲಿ ಪೂಜಾ ಹೋಗುತ್ತಿರುವಾಗ ಕಿಶನ್ ಬಂದು ಪೂಜಾ ನಿನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಾನೆ. ರೋಡ್ನಲ್ಲಿ ಕಿಶನ್ ಹೀಗೆ ಹೇಳುತ್ತಿರುವಾಗ ಇದನ್ನು ತಾಂಡವ್ ಗಮನಿಸಿದ್ದಾನೆ.
ಅರೇ.. ಇದು ಪೂಜಾ ಅಲ್ವಾ.. ಹೋ ಇದೆಲ್ಲ ನಡಿತಿದ್ಯಾ ಇವಾಗ.. ಒಳ್ಳೆ ಟೈಮ್ನಲ್ಲಿ ಸಿಕ್ಕಾಕಿಕೊಂಡಳು ಎಂದು ಹೇಳುತ್ತಾ ಅವರಿಬ್ಬರು ತಾಂಡವ್ ಫಾಲೋ ಮಾಡಿದ್ದಾನೆ. ಪೂಜಾ-ಕಿಶನ್ ಇಬ್ಬರೂ ಮಾತನಾಡಲು ಅಲ್ಲೇ ಇದ್ದ ಪಾರ್ಕ್‌ಗೆ ತೆರಳಿದ್ದಾರೆ. ಕಿಶನ್ ಪೂಜಾ ಬಳಿ ಕ್ಷಮೆ ಕೇಳಿದ್ದಾನೆ. ಇವರಿಬ್ಬರ ಮಾತುಕತೆ ಕೇಳಿ ತಾಂಡವ್ ನೇರವಾಗಿ ಭಾಗ್ಯ ಮನೆಗೆ ಬಂದಿದ್ದಾನೆ.
ಮನೆಗೆ ಬಂದ ತಕ್ಷಣ ಭಾಗ್ಯ ಮೇಲೆ ಮನಬಂದಂತೆ ರೇಗಾಡಿದ್ದಾನೆ. ಪೂಜಾ ನಿಮ್ಮ ಮನೆಯ ಮರಿಯಾದೆಯನ್ನು ಹರಾಜು ಹಾಕ್ತಾ ಇದ್ದಾಳೆ. ನೀವು ನೋಡಿದ್ರೆ ಪೂಜಾಗೆ ಮದುವೆ ಮಾಡಿಸಬೇಕೆಂದು ಪುರೋಹಿತರಿಗೆ, ಬ್ರೋಕರ್ಗೆ ಕಾಲ್ ಮೇಲೆ ಕಾಲ್ ಮಾಡ್ತಾ ಇದ್ದೀರ.. ಆದ್ರೆ ಅವಳು ಪಾರ್ಕ್ನಲ್ಲಿ ಯಾರ ಜೊತೆನೋ ಸುತ್ತಾಡ್ತಾ ಇದ್ದಾಳೆ. ಯಾರಿಗೊತ್ತು ಭಾಗ್ಯನೇ ಪೂಜಾಳ ಬಳಿ ನಂಗೆ ಒಳ್ಳೆ ಸಂಬಂಧ ಹುಡುಕೋಕೆ ಆಗ್ತಾ ಇಲ್ಲ ಹೋಗಮ್ಮ ನೀನೇ ಯಾರ ಜೊತೆನಾದ್ರು ಸುತ್ತಾಡು ಅಂತ ಕಳಿಸಿರಬೇಕು. ನನ್ನ ಮಾತನ್ನ ತಡಿಯೋಕೆ ಬರ್ಬೇಡ, ಸಾಧ್ಯ ಆದ್ರೆ ನಿನ್ ತಂಗಿ ಯಾವನ್ ಜೊತೆನೋ ಸುತ್ತಾಡ್ತಾ ಇದ್ದಾಳೆ ಅಲ್ವಾ.. ಅವಳನ್ನು ತಡಿ ಎಂದು ಹೇಳಿದ್ದಾನೆ.
ಈ ಮಾತು ಕೇಳಿ ಭಾಗ್ಯಾಗೆ ಎಲ್ಲಿಲ್ಲದ ಕೋಪ ಬಂದಿದೆ. ಸದ್ಯ ಪೂಜಾ ಮನೆಗೆ ಬಂದ ಕೂಡಲೇ ಏನೇನು ಮಾತುಕತೆ ಆಗುತ್ತದೆ.. ಜಗಳವಾಗುತ್ತ ಅಥವಾ ಸಮಾಧಾನದಿಂದ ಯಾರು ಆತ?, ಏನು ಮಾಡುತ್ತಿದ್ದಾನೆ ಎಂದು ಕೇಳಿ ಮದುವೆ ಮಾತುಕತೆ ಮುಂದುವರೆಸುತ್ತಾರ ಎಂಬುದು ನೋಡಬೇಕಿದೆ.
Gauthami Jadav: ಕೊನೆಗೂ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಗೌತಮಿ ಜಾಧವ್: ಫ್ಯಾನ್ಸ್ಗೆ ಬಿಗ್ ಸರ್ಪ್ರೈಸ್