Bhagya Lakshmi Serial: ತನ್ವಿ ಮಿಸ್ಸಿಂಗ್: ಟೆನ್ಶನ್ನಲ್ಲಿ ಭಾಗ್ಯ, ಆದೀಗೆ ಕಾಲ್ ಮಾಡಿದ ಕುಸುಮಾ
ಟೆನ್ಶನ್ನಲ್ಲಿದ್ದ ಭಾಗ್ಯಾಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಕುಸುಮಾ ತಕ್ಷಣ ಆದೀಶ್ವರ್ಗೆ ಕಾಲ್ ಮಾಡಿ ಬರಹೇಳಿದ್ದಾಳೆ. ಆತ ಖಂಡಿತ ನಮಗೆ ಸಹಾಯ ಮಾಡುತ್ತಾನೆ ಎಂದಿದ್ದಾಳೆ. ಸದ್ಯ ಆದೀ ಬಂದು ಏನಾಗುತ್ತೆ?, ತಾಂಡವ್ ಮನೆಯಲ್ಲಿ ತನ್ವಿ ಇರುವ ವಿಷಯ ಗೊತ್ತಾದರೆ ಅಲ್ಲಿಗೆ ಆದೀಯೂ ಹೋಗಬಹುದು.

Bhagya Lakshmi serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ಮಗಳು ತನ್ವಿ ಸದ್ಯ ಯಾರಿಗೂ ಹೇಳದೆ ಶ್ರೇಷ್ಠಾ ಜೊತೆ ತಾಂಡವ್ ಮನೆಗೆ ಹೋಗಿ ಕೂತಿದ್ದಾಳೆ. ಅತ್ತ ಭಾಗ್ಯ ಮನೆಯವರು ತನ್ವಿ ಮಿಸ್ಸಿಂಗ್ ಆಗಿದ್ದಾಳೆ ಅಂದುಕೊಂಡಿದ್ದಾರೆ. ಇದೆಲ್ಲ ಭಾಗ್ಯಾಳ ನೆಮ್ಮದಿ ಹಾಳು ಮಾಡಲು ಶ್ರೇಷ್ಠಾ ಮಾಡಿರುವ ಮಾಸ್ಟರ್ ಪ್ಲ್ಯಾನ್ ಆಗಿದೆ. ಭಾಗ್ಯಾಳನ್ನು ಹೇಗಾದರು ಮಾಡಿ ಕುಗ್ಗಿಸಬೇಕೆಂದು ಒಂದರ ಹಿಂದೆ ಒಂದರಂತೆ ಶ್ರೇಷ್ಠಾ ಬಾಣ ಬಿಡುತ್ತಿದ್ದಾಳೆ.
ಇಷ್ಟೆಲ್ಲ ಅವಾಂತರಕ್ಕೆ ಕಾರಣ ತನ್ವಿಯೇ.. ತನ್ವಿ ಕ್ಲಾಸ್ಗೆ ಬಂಕ್ ಹಾಕಿದ ಕಾರಣ ಕಾಲೇಜ್ನಿಂದ ಸಸ್ಪೆಂಡ್ ಆಗಿದ್ದಳು. ಪುನಃ ಕಾಲೇಜ್ಗೆ ಬರಬೇಕು ಅಂದ್ರೆ ಪೇರೆಂಟ್ಸ್ನ ಕರ್ಕೊಂಡು ಬರಬೇಕು ಎಂದು ಪ್ರಿನ್ಸಿ ಆರ್ಡರ್ ಮಾಡಿದ್ದರು. ಆದರೆ ಅಮ್ಮ ಎಲ್ಲಿ ಬೈತಾಳೋ ಅಂತ ತನ್ವಿ ಈ ವಿಷಯವನ್ನು ಭಾಗ್ಯಾಗೆ ಹೇಲಿರಲ್ಲ.. ಬದಲಾಗಿ ತಂದೆ ತಾಂಡವ್ಗೆ ಹೇಳುತ್ತಾಳೆ. ಆತ ಹಾಗೂ ಶ್ರೇಷ್ಠಾ ಬಂದು ಪ್ರಿನ್ಸಿ ಜೊತೆ ಮಾತಾಡಿ ಎಲ್ಲವೂ ಸರಿ ಆಗುತ್ತದೆ.
ಆದರೆ, ಈ ಎಲ್ಲ ವಿಚಾರ ಸರಿ ಆದ ಬಳಿಕ ಭಾಗ್ಯಾಗೆ ಗೊತ್ತಾಗಿದೆ. ಇದನ್ನು ಗೊತ್ತು ಮಾಡಿಸಿದ್ದು ಮತ್ಯಾರು ಅಲ್ಲ ಶ್ರೇಷ್ಠಾ. ಶ್ರೇಷ್ಠಾ ತನ್ನ ಫ್ರೆಂಡ್ನ ಸಹಾಯದಿಂದ ಭಾಗ್ಯಾಗೆ ಕಾಲ್ ಮಾಡಿ, ನಿಮ್ಮ ಮಗಳು ತನ್ವಿ ಕಾಲೇಜ್ ಇಂದ ಸಸ್ಪೆಂಡ್ ಆಗಿರುವ ವಿಷಯ ನಿಮಗೆ ಗೊತ್ತೇ ಇಲ್ವಾ ಎಂದು ಕೇಳಿದ್ದಾನೆ. ಈ ಸುದ್ದಿ ಕೇಳಿ ಭಾಗ್ಯಾಗೆ ಶಾಕ್ ಆಗಿದೆ. ಮನೆಗೆ ಬಂದವಳೇ ತನ್ವಿಯನ್ನು ವಿಚಾರಿಸಿದ್ದಾಳೆ.. ಇದೇವೇಲೆ ತನ್ವಿಯ ಕೆನ್ನೆಗೆ ಒಂದೇಟು ಕೂಡ ಹೊಡೆದಿದ್ದಾಳೆ. ಭಾಗ್ಯ ಹೊಡೆದಿರುವುದು ತನ್ವಿಗೆ ತುಂಬಾ ಸಿಟ್ಟು ತರಿಸಿದೆ.
ಮರುದಿನ ಕಾಲೇಜ್ಗೆ ತೆರಳಿದರೂ ಕ್ಲಾಸ್ಗೆ ಹೋಗದೆ ಕ್ಯಾಂಪಸ್ನಲ್ಲಿ ಕುಳಿತಿರುವಾದ ಶ್ರೇಷ್ಠಾ ಕಾಲ್ ಮಾಡಿ ಏನಾಯಿತು ಎಂದು ನಯವಾಗಿ ಕೇಳಿದ್ದಾಳೆ. ಶ್ರೇಷ್ಠಾಳ ಮಾತಿಗೆ ಕರಗಿದ ತನ್ವಿ ಅಳುತ್ತ ಅಮ್ಮ ಹೊಡೆದಿರುವ ವಿಚಾರ ಹೇಳಿದ್ದಾಳೆ. ಆಗ ಶ್ರೇಷ್ಠಾ ತನ್ವಿಯ ತಲೆಯಲ್ಲಿ ಭಾಗ್ಯ ಬಗ್ಗೆ ಇಲ್ಲಸಲ್ಲದ ಸುಳ್ಳು ತುಂಬಿದ್ದಾಳೆ. ಏನು ನಿನ್ಗೆ ಹೊಡೆದ್ಳ ಇಷ್ಟು ಸಿಲ್ಲಿ ವಿಷಯಕ್ಕೆ.. ಮಗು ನೀನು ನಿನ್ನ ಮೇಲೆ ಕೈ ಎತ್ತೊದಕ್ಕೆ ಹೇಗೆ ಮನಸ್ಸು ಬಂತು ಅವಳಿಗೆ.. ನೀನು ನಿನ್ನ ಪಪ್ಪನ ಜೊತೆ ಟೈಮ್ ಸ್ಪೆಂಡ್ ಮಾಡು ಆಗ ಎಲ್ಲ ಸರಿ ಆಗುತ್ತೆ ನಿನ್ನ ಕರ್ಕೊಂಡು ಹೋಗೋಕೆ ನಾನು ಕಾಲೇಜ್ ಹತ್ರ ಬರ್ತೀನಿ ಈಗ ಎಂದಿದ್ದಾಳೆ.
ಅದರಂತೆ ಶ್ರೇಷ್ಠಾ ತಕ್ಷಣವೇ ತನ್ವಿ ಕಾಲೇಜ್ ಹತ್ರ ಬಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ ತಾಂಡವ್ ಆಫೀಸ್ನಿಂದ ಮನೆಗೆ ಬಂದೊಡನೆ ತನ್ವಿಯನ್ನು ನೋಡಿ ಖುಷಿ ಪಟ್ಟು ತಬ್ಬಿಕೊಂಡಿದ್ದಾನೆ. ತನ್ವಿ ಕೂಡ ಅಳುತ್ತ ಹಗ್ ಮಾಡಿದ್ದಾಳೆ. ಯಾಕೆ ಅಳುತ್ತಿದ್ದೀಯಾ?, ಏನಾಯಿತು ಎಂದು ತಾಂಡವ್ ಕೇಳಿದಾಗ, ಈ ಭಾಗ್ಯ ಇದ್ದಾಳಲ್ಲ ಅವಳು ತನ್ವಿಗೆ ಸರಿಯಾಗಿ ಹೊಡೆದು ಕಳುಹಿಸಿದ್ದಾಳೆ ಎಂದು ಶ್ರೇಷ್ಠಾ ಹೇಳಿದ್ದಾಳೆ. ಇದನ್ನ ಕೇಳಿ ತಾಂಡವ್ಗೆ ಎಲ್ಲಿಲ್ಲದ ಕೋಪ ಬಂದಿದೆ. ಆ ಭಾಗ್ಯಾಳ ಗ್ರಹಚಾರ ಬಿಡುಸುತ್ತೇನೆ ಹೋಗೋಣ ಎಂದು ತನ್ವಿಯನ್ನು ಕರೆದುಕೊಂಡು ಭಾಗ್ಯ ಮನೆಗೆ ಹೋಗಲು ತಯಾರಾಗುತ್ತಾನೆ.
ಆಗ ಶ್ರೇಷ್ಠಾ ನೀನು ಈಗ ಭಾಗ್ಯ ಮನೆಗೆ ಹೋದರೆ ತನ್ವಿಗೆ ತೊಂದರೆ, ಅವಳು ನಾಳೆಯಿಂದ ಪುನಃ ಅದೇ ಮನೆಯಲ್ಲಿ ಇರಬೇಕು.. ನೀನು ಹೋಗಿ ಗಲಾಟೆ ಮಾಡಿದರೆ ಸರಿ ಆಗಲ್ಲ ಎಂದಿದ್ದಾಳೆ. ಆಗ ತಾಂಡವ್, ನೀನು ಅಲ್ಲಿಗೆ ಹೋಗೋದು ಬೇಡ.. ಇಲ್ಲೇ ಇರು ಅದೇನು ಆಗುತ್ತೊ ನೋಡೋಣ ಎಂದಿದ್ದಾರೆ. ಇತ್ತ ಟೆನ್ಶನ್ನಲ್ಲಿದ್ದ ಭಾಗ್ಯಾಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಕುಸುಮಾ ತಕ್ಷಣ ಆದೀಶ್ವರ್ಗೆ ಕಾಲ್ ಮಾಡಿ ಬರಹೇಳಿದ್ದಾಳೆ. ಆತ ಖಂಡಿತ ನಮಗೆ ಸಹಾಯ ಮಾಡುತ್ತಾನೆ ಎಂದಿದ್ದಾಳೆ. ಸದ್ಯ ಆದೀ ಬಂದು ಏನಾಗುತ್ತೆ?, ತಾಂಡವ್ ಮನೆಯಲ್ಲಿ ತನ್ವಿ ಇರುವ ವಿಷಯ ಗೊತ್ತಾದರೆ ಅಲ್ಲಿಗೆ ಆದೀಯೂ ಹೋಗಬಹುದು. ಆಗ ತಾಂಡವ್ನೇ ಭಾಗ್ಯಾಳ ಮಾಜಿ ಗಂಡ ಎಂಬ ಸತ್ಯ ಗೊತ್ತಾಗುವ ಸಾಧ್ಯತೆ ಇದೆ.. ಸದ್ಯ ಮುಂದಿನ ಎಪಿಸೋಡ್ ರೋಚಕತೆ ಸೃಷ್ಟಿಸಿದೆ.
Shobha Shetty: ನವರಾತ್ರಿಗೆ ಸ್ಪೆಷಲ್ ವಿಡಿಯೋ ಹಂಚಿಕೊಂಡು ಶೋಭಾ ಶೆಟ್ಟಿ
ಮತ್ತೊಂದೆಡೆ ರಾತ್ರಿ ಆಗುತ್ತ ಬಂದರೂ ತನ್ವಿ ಮನೆಗೆ ಬಂದಿಲ್ಲ.. ಭಾಗ್ಯ ಆಫೀಸ್ನಿಂದ ಬಂದೊಡನೆ ಈ ವಿಚಾರವನ್ನು ಮನೆಯವರು ಗಾಬರಿಯಲ್ಲಿ ಹೇಳಿದ್ದಾರೆ. ಅದಕ್ಕೆ ಭಾಗ್ಯ, ಅವಳು ಬರ್ತಾಳೆ.. ಕೋಪದಲ್ಲಿ ಯಾರದ್ದೊ ಫ್ರೆಂಡ್ ಮನೆಗೆ ಹೋಗಿರ್ತಾಳೆ, ಕೋಪ ತಣ್ಣಗಾದ ನಂತರ ಅವಳಾಗಿಯೇ ಬರ್ತಾಳೆ.. ನನ್ನ ಮಗಳ ಬಗ್ಗೆ ನನಗೆ ಗೊತ್ತು.. ನೀವು ಟೆನ್ಶನ್ ಮಾಡಬೇಡಿ ಎಂದಿದ್ದಾಳೆ. ಸದ್ಯ ತನ್ವಿ ಶ್ರೇಷ್ಠಾ-ತಾಂಡವ್ ಮನೆಯಲ್ಲಿ ಇರುವ ವಿಚಾರ ಭಾಗ್ಯಾಗೆ ಗೊತ್ತಿಲ್ಲ.. ಗೊತ್ತಾದ್ರೆ ಏನು ಮಾಡುತ್ತಾಳೆ ಎಂಬುದು ನೋಡಬೇಕಿದೆ.. ಮತ್ತೊಂದೆಡೆ ತನ್ನ ಮಗಳ ಮೇಲೆ ಭಾಗ್ಯ ಹೊಡೆದಿದ್ದಕ್ಕೆ ತಾಂಡವ್ಗೆ ಕೋಪ ಬಂದಿದೆ.. ಇವನು ಏನು ಮಾಡುತ್ತಾನೆ ಎಂಬುದು ಕುತೂಹಲ ಮೂಡಿಸಿದೆ.