Lakshmi Baramma: ‘ನಿಮ್ಮ ಸಮಾಧಿನ ನೀವೆ ತೋಡಿಕೊಳ್ಳಬೇಕು’: ಅಕ್ಷರಶಃ ನಿಜವಾಯಿತು ಅಂದು ಲಕ್ಷ್ಮೀ ಹೇಳಿದ್ದ ಮಾತು
ಮಗನಿಗೆ ನಿಜ ವಿಚಾರ ತಿಳಿಯಿತು ಎಂದು ಬೇರೆ ದಾರಿ ಕಾಣದೆ, ಗುಡ್ಡದಿಂದ ಕೆಳಗೆ ಬೀಳೋಕೆ ಹೋದಳು ಕಾವೇರಿ. ಇದನ್ನು ಅವಳು ಹೆದರಿಸೋಕೆ ಮಾಡಿದ್ದಿರಬಹುದು. ಆದರೆ, ಕಾಲಿಗೆ ಕಲ್ಲು ಎಡವಿ ಕಾವೇರಿ ಬೆಟ್ಟದಿಂದ ಬಿದ್ದೇ ಹೋಗಿದ್ದಾಳೆ. ಈ ಮೂಲಕ ಅಂದು ಲಕ್ಷ್ಮೀ ಹೇಳಿದ್ದ ಮಾತು ಈಗ ಅಕ್ಷರಶಃ ನಿಜವಾಗಿ ಹೋಗಿದೆ.


ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಮುಕ್ತಾಯಕಂಡಿದೆ. ಕಳೆದ ವಾರ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ನೀಡಿತ್ತು. ಅದರಂತೆ ಅಂತಿಮ ಸಂಚಿಕೆಗಳು ಈ ವಾರ ಪ್ರಸಾರ ಆದವು. ಅದರಂತೆ ನಿನ್ನೆ ಶುಕ್ರವಾರ ಫೈನಲ್ ಎಪಿಸೋಡ್ ಟೆಲಿಕಾಸ್ಟ್ ಆಗಿದ್ದು, ಕಾವೇರಿ ಸಾವಿನ ಮೂಲಕ ಧಾರಾವಾಹಿ ಕೊನೆಗೊಂಡಿದೆ. ಬರೋಬ್ಬರಿ 600ಕ್ಕೂ ಅಧಿಕ ಎಪಿಸೋಡ್ಗಳನ್ನು ಪೂರ್ಣಗೊಳಿಸಿರುವ ಈ ಧಾರಾವಾಹಿಯನ್ನು ಟ್ವಿಸ್ಟ್ ಮೂಲಕ ಕೊನೆಗೊಳಿಸಲು ನಿರ್ದೇಶಕರು ಮುಂದಾಗಿದ್ದರು. ಅದೇರೀತಿ ಲಕ್ಷ್ಮೀ ಅಂದು ಹೇಳಿದ ಮಾತಿನ ಮೂಲಕವೇ ಸೀರಿಯಲ್ ಕೊನೆಗೊಳಿಸಲಾಗಿದೆ.
ಕಾವೇರಿ ಇದುವರೆಗೂ ಮಾಡಿರುವ ಕೇಡು ಕೆಲಸಗಳು ಒಂದೆರಡಂತೂ ಅಲ್ಲ. ಕೀರ್ತಿ ಹಾಗೂ ಲಕ್ಷ್ಮೀ ಬಾಳನ್ನೇ ಹಾಳು ಮಾಡಿದ ಕಾವೇರಿ ಇಬ್ಬರನ್ನೂ ಕೊಲ್ಲೋಕೆ ಸಂಚು ರೂಪಿಸಿದ್ದಳು. ಆದರೆ, ಕರ್ಮ ಯಾರನ್ನು ಬಿಡುವುದಿಲ್ಲ ಎಂಬ ಮಾತಿನ ಪ್ರಕಾರ, ಕಾವೇರಿ ಕೊನೆಯಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾಳೆ. ತನ್ನ ಅಹಂಕಾರ ಬಿಡದ ಕಾವೇರಿ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಬೆಟ್ಟದ ಮೇಲೆ ಇಡೀ ಕುಟುಂಬದ ಮುಂದೆ ಕಾವೇರಿಯ ಮುಖವಾಡ ಕಳಚಿ ಬಿತ್ತು. ಕುಡಿದ ನಶೆಯಲ್ಲಿ ಸುಬ್ಬಿ ಅಲಿಯಾಸ್ ಚಿಂಗಾರಿ ಮುಂದೆ ಕಾವೇರಿ ತಾನು ಮಾಡಿದ ಎಲ್ಲಾ ಕೇಡು ಕೆಲಸಗಳನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದಳು. ಅದನ್ನೆಲ್ಲಾ ಕೇಳಿಸಿಕೊಂಡ ವೈಷ್ಣವ್‌ಗೆ ಸತ್ಯದ ಅನಾವರಣವಾಗುತ್ತದೆ.
ಮಗನಿಗೆ ನಿಜ ವಿಚಾರ ತಿಳಿಯಿತು ಎಂದು ಬೇರೆ ದಾರಿ ಕಾಣದೆ, ಗುಡ್ಡದಿಂದ ಕೆಳಗೆ ಬೀಳೋಕೆ ಹೋದಳು ಕಾವೇರಿ. ಇದನ್ನು ಅವಳು ಹೆದರಿಸೋಕೆ ಮಾಡಿದ್ದಿರಬಹುದು. ಆದರೆ, ಕಾಲಿಗೆ ಕಲ್ಲು ಎಡವಿ ಕಾವೇರಿ ಬೆಟ್ಟದಿಂದ ಬಿದ್ದೇ ಹೋಗಿದ್ದಾಳೆ. ಈ ಮೂಲಕ ಅಂದು ಲಕ್ಷ್ಮೀ ಹೇಳಿದ್ದ ಮಾತು ಈಗ ನಿಜವಾಗಿ ಹೋಗಿದೆ. ‘‘ನಿಮ್ಮ ಹೆಣನ ನೀವೇ ಹೊರಬೇಕು. ನಿಮ್ಮ ಸಮಾಧಿನ ನೀವೆ ತೋಡಿಕೊಳ್ಳಬೇಕು. ನಿಮ್ಮ ಅಹಂಕಾರದ ಸಂಸ್ಕಾರ ನೀವೇ ಮಾಡಿಕೊಳ್ಳಬೇಕು. ಸತ್ತರೂ ಮಣ್ಣು ಹಾಕೋಕೆ ಯಾರೂ ಇರಲ್ಲ’’ ಎಂದು ಲಕ್ಷ್ಮೀ ಹೇಳಿದ್ದರು. ಈ ಮಾತು ಅಕ್ಷರಶಃ ನಿಜವಾಗಿ ಹೋಗಿದೆ.
ಈ ಧಾರಾವಾಹಿ ಶುರುವಿನಲ್ಲಿ ಭಾಗ್ಯಲಕ್ಷ್ಮೀಯಾಗಿ ಒಂದು ಗಂಟೆ ಪ್ರಸಾರ ಕಾಣುತ್ತಿತ್ತು. ಆ ಬಳಿಕ ಅಕ್ಕ ಭಾಗ್ಯಾಳ ಕಥೆ ಬೇರೆ ಹಾಗೂ ತಂಗಿ ಲಕ್ಷ್ಮೀ ಕಥೆ ಬೇರೆ ಬೇರೆಯಾಗಿ ಮಾಡಿ ಎರಡು ಧಾರಾವಾಹಿ ಮಾಡಲಾಯಿತು. ಈಗ ಭಾಗ್ಯ ಲಕ್ಷ್ಮೀ ರಾತ್ರಿ 7 ಗಂಟೆಗೆ ಪ್ರಸಾರ ಕಾಣುತ್ತಿದ್ದರೆ, ಲಕ್ಷ್ಮೀ ಬಾರಮ್ಮ 7.30ಕ್ಕೆ ಪ್ರಸಾರ ಕಾಣುತ್ತಿತ್ತು. ಲಕ್ಷ್ಮೀ ಬಾರಮ್ಮ ಮುಕ್ತಾಯವಾಗಿದ್ದು, ಆ ಸ್ಥಾನದಲ್ಲಿ ಬಿಗ್ ಬಾಸ್ ಕನ್ನಡ 11 ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಪ್ರಸಾರ ಕಾಣಲಿದೆ.
Dali Dhananjay: ಭರ್ಜರಿ ಬ್ಯಾಚುಲರ್ಸ್ನಲ್ಲಿ ಸುಕೃತಾ ಜೊತೆ ಡಾಲಿ ಧನಂಜಯ್ ಭರ್ಜರಿ ಡ್ಯಾನ್ಸ್