Rakesh Poojary: ತಂಗಿಯ ಮದುವೆ ಅದ್ಧೂರಿಯಾಗಿ ಮಾಡಬೇಕೆಂದು ಅಂದುಕೊಂಡಿದ್ದ ರಾಕೇಶ್: ಆದರೆ..
ರಾಕೇಶ್ ಪೂಜಾರಿ ಸಾವಿಗೆ ನಟಿ ರಕ್ಷಿತಾ, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ರಾಕೇಶ್ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೆ ಒಳಗಾಗಿದೆ. ರಾಕೇಶ್ ಪೂಜಾರಿ ಅವರು ತಮ್ಮ ತಂಗಿಯ ಮದುವೆ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡಿದ್ದರಂತೆ. ಅಲ್ಲದೇ ಅದ್ಧೂರಿಯಾಗಿ ಮದುವೆ ಮಾಡುವ ತಯಾರಿ ನಡೆಸಿದ್ದರಂತೆ.

Rakesh Poojary Death

ಕಾಮಿಡಿ ಕಿಲಾಡಿಗಳು ಮೂಲಕ ಜನಮನ ಗೆದಿದ್ದ ರಾಕೇಶ್ ಪೂಜಾರಿ (Rakesh Poojary) ನಿಧನರಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ -3 ವಿನ್ನರ್ ಆಗಿದ್ದ ಇವರು ಮೇ 12 ರ ಬೆಳಗ್ಗಿನ ಜಾವ 1.30ಗೆ ಹೃದಯಾಘಾತದಿಂದ ಸಾವನ್ನಪ್ಪಿದರು. ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದ ಈ ನಟನ ನಿಧನ ಅವರ ಅಭಿಮಾನಿಗಳು ಮಾತ್ರವಲ್ಲದೇ ರಾಜ್ಯದ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ನಿನ್ನೆಯತನಕವೂ ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದ ಯುವ ನಟ ರಾಕೇಶ್ ನಿಧನ ಯುವಜನರಲ್ಲಿ ಆತಂಕ ಮೂಡಿಸಿದೆ.
ರಾಕೇಶ್ ಪೂಜಾರಿ ಅವರ ಆಪ್ತರು ಹೇಳುವ ಪ್ರಕಾರ, ಕಾಂತಾರ-2 ಸಿನಿಮಾದಲ್ಲಿ ಬ್ಯುಸಿ ಆಗಿರುವ ರಾಕೇಶ್ ನಿನ್ನೆಯಷ್ಟೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಬಳಿಕ ರಾತ್ರಿ ಸ್ನೇಹಿತರೊಬ್ಬರ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಂಜಾಯ್ ಮಾಡಿದ್ದರು. ಬಹುಶಃ ರಾಕೇಶ್ ಈ ಮೆಹಂದಿ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿ ಅವರಿಗೆ ಲೋಪಿ ಬಿಪಿ ಉಂಟಾಗಿದೆ. ಬಳಿಕ ಹೃದಯಾಘಾತ ಸಂಭವಿಸಿ ನಿಧನ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಹೀರೋ ದಿಲೀಪ್ ರಾಜ್ ಅವರ ಪಿಎ ಪಾತ್ರದಲ್ಲಿ ನಟಿಸುತ್ತಿದ್ದರು. ತೆರೆ ಮೇಲೆ ಬಂದರೆ ಸಾಕು, ಅವರು ನಗುವಿನ ಹೊಳೆ ಹರಿಸುತ್ತಿದ್ದರು. ರಾಕೇಶ್ ಪೂಜಾರಿ ಸಾವಿಗೆ ನಟಿ ರಕ್ಷಿತಾ, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ರಾಕೇಶ್ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೆ ಒಳಗಾಗಿದೆ.
ರಾಕೇಶ್ ಪೂಜಾರಿ ಅವರು ತಮ್ಮ ತಂಗಿಯ ಮದುವೆ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡಿದ್ದರಂತೆ. ಅಲ್ಲದೇ ಅದ್ಧೂರಿಯಾಗಿ ಮದುವೆ ಮಾಡುವ ತಯಾರಿ ನಡೆಸಿದ್ದರಂತೆ. ತಂಗಿ ಮದುವೆಯ ನಂತರ ತಾನು ಮದುವೆಯಾಗುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡಿದ್ದರಂತೆ. ಆದರೆ ಮನೆಗೆ ಆಧಾರವಾಗಿದ್ದ ರಾಕೇಶ್ ಪೂಜಾರಿ ತಾಯಿ ಮತ್ತು ತಂಗಿಯನ್ನ ಅಗಲಿದ್ದಾರೆ.
ಸದ್ಯ ನಟ ರಾಕೇಶ್ ಪೂಜಾರಿ ಅವರ ಮೃತದೇಹವನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮಲ್ಪೆ ಸಮೀಪದ ಹೂಡೆಯಲ್ಲಿರುವ ಸ್ವಗೃಹದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ರಾಕೇಶ್ ಅವರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ರಾಕೇಶ್ ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ತುಳು ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ತುಯಿನಾಯೆ ಪೋಯೆ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ.