ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಲರ್ಸ್-ಝೀ ಮಧ್ಯೆ ಮಹಾಯುದ್ಧ: ಬಿಗ್ ಬಾಸ್​ಗೆ ಟಕ್ಕರ್ ಕೊಡಲು ಶುರುವಾಗುತ್ತಿದೆ ಪ್ಯಾಟೆ ಹುಡು ಹುಡುಗೀರ್ ಹಳ್ಳಿ ಲೈಫು

ಬಿಗ್ ಬಾಸ್ಗು ಮೊದಲೇ ಝೀ ಕನ್ನಡ ವಾಹಿನಿ ಈ ಕುರಿತ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಕುತೂಹಲ ಹೆಚ್ಚಿಸಿದೆ. ಈ ಪ್ರೋಮೋದಲ್ಲಿ ಹಳ್ಳಿ ಜೀವನ ನಡೆಸಲು ರೆಡಿ ಇರೋ ಮಾಡರ್ನ್ ಹುಡುಗಿಯರಿಗೆ ಆಹ್ವಾನ ನೀಡಲಾಗಿದೆ. ಅಕುಲ್ ಬಾಲಾಜಿ ಶೋನ ನೇತೃತ್ವ ವಹಿಸಲಿದ್ದಾರೆ. ಸದ್ಯ ಶೋ ಪ್ರಾರಂಭಿಕ ಹಂತದಲ್ಲಿದ್ದು, ಆಡಿಷನ್ಗೆ ಎಲ್ಲ ತಯಾರಿ ನಡೆದಿದೆ.

ಶುರುವಾಗುತ್ತಿದೆ ಪ್ಯಾಟೆ ಹುಡು ಹುಡುಗೀರ್ ಹಳ್ಳಿ ಲೈಫು

Akul Balaji

Profile Vinay Bhat Jul 17, 2025 7:38 AM

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲವೇ ವಾರಗಳಲ್ಲಿ ಶುರುವಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಸೆಪ್ಟೆಂಬರ್ ಅಂತ್ಯದಲ್ಲಿ ಪ್ರಾರಂಭವಾಗಲಿದೆ ಎಂಬ ಸುದ್ದಿಹೊರಬಿದ್ದಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರೊಮೋ ಶೂಟ್ ಕೂಡ ನಡೆದಿದ್ದು, ಸದ್ಯದಲ್ಲೇ ಇದು ಹೊರಬೀಳಲಿದೆ. ಹೀಗಿರುವಾಗ ಝೀ ಕನ್ನಡ ಬಿಗ್ ಬಾಸ್​ಗೆ ಟಕ್ಕರ್ ಕೊಡಲು ಹೊಸ ರಿಯಾಲಿಟಿ ಶೋ ಪ್ಯಾಟೆ ಹುಡು ಹುಡುಗೀರ್ ಹಳ್ಳಿ ಲೈಫು ಮೂಲಕ ಮತ್ತೆ ಬಂದಿದೆ.

ಬಿಗ್ ಬಾಸ್​ಗು ಮೊದಲೇ ಝೀ ಕನ್ನಡ ವಾಹಿನಿ ಈ ಕುರಿತ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಕುತೂಹಲ ಹೆಚ್ಚಿಸಿದೆ. ಈ ಪ್ರೋಮೋದಲ್ಲಿ ಹಳ್ಳಿ ಜೀವನ ನಡೆಸಲು ರೆಡಿ ಇರೋ ಮಾಡರ್ನ್​ ಹುಡುಗಿಯರಿಗೆ ಆಹ್ವಾನ ನೀಡಲಾಗಿದೆ. ಅಕುಲ್ ಬಾಲಾಜಿ ಶೋನ ನೇತೃತ್ವ ವಹಿಸಲಿದ್ದಾರೆ. ಸದ್ಯ ಶೋ ಪ್ರಾರಂಭಿಕ ಹಂತದಲ್ಲಿದ್ದು, ಆಡಿಷನ್​​ಗೆ ಎಲ್ಲ ತಯಾರಿ ನಡೆದಿದೆ.

ಹಿಂದೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಸುವರ್ಣ ವಾಹಿನಿಯಲ್ಲಿ ನಡೆಯುತ್ತಿತ್ತು. ರಿಯಾಲಿಟಿ ಶೋ ಈಗಾಗಲೇ ನಾಲ್ಕು ಸೀಸನ್ ಮುಗಿಸಿದೆ. ಅದರಲ್ಲಿ ಅಕುಲ್ ಬಾಲಾಜಿ ಅವರೇ ನಿರೂಪಕರಾಗಿ ಪ್ರಮುಖ ಪಾತ್ರ ವಹಿಸಿದ್ದರು. ಈ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿತ್ತು. ಹಳ್ಳಿ ಜೀವನ, ಹಳ್ಳಿ ಬದುಕು ಹೇಗಿರುತ್ತದೆ ಎಂಬುದನ್ನು ಸಿಟಿ ಹುಡುಗಿಯರಿಗೆ ಮನದಟ್ಟು ಮಾಡಿಕೊಟ್ಟ ಈ ಶೋ ಬಹಳ ಚೆನ್ನಾಗಿ ಮೂಡಿಬಂದಿತ್ತು. ಈಗ ಅಕುಲ್ ಮತ್ತೆ ಈ ರಿಯಾಲಿಟಿ ಶೋ ಮೂಲಕ ಕಮ್​ಬ್ಯಾಕ್ ಮಾಡುತ್ತಿದ್ದಾರೆ.

‘ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ’ ಎಂದು ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ನಿಮ್ಮ ಫೇವರಿಟ್ ರಿಯಾಲಿಟಿ ಶೋನಲ್ಲಿ ಅಕುಲ್ ಬರ್ತಿದಾನೆ ಎಂದರೆ ಸುನಾಮಿ-ಸುಂಟರಗಾಳಿ ಎಲ್ಲ ಆಗಲೇಬೇಕು ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ. ಈ ಮೂಲಕ ವೀಕೆಂಡ್​ನಲ್ಲಿ ಮಸ್ತ್ ಮನರಂಜನೆ ನೀಡಲು ಒಂದು ಶೋ ರೆಡಿ ಆಗುತ್ತಿದೆ. ಈ ಶೋಗೆ ಆಡಿಷನ್ ಕೂಡ ನಡೆಯುತ್ತಿದೆ. ಅದರ ವಿವರವನ್ನು ಝೀ ಕನ್ನಡ ವಾಹಿನಿ ಹಂಚಿಕೊಂಡಿದೆ.

ಜುಲೈ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ. ಆಡಿಷನ್​ನಲ್ಲಿ ಭಾಗವಹಿಸುವವರಿಗೆ ಕೆಲವು ಷರತ್ತುಗಳು ಇವೆ. ನಿಮ್ಮ ವಯಸ್ಸು 18ರಿಂದ 28 ವರ್ಷ ಆಗಿರಬೇಕು. ನೀವು ನಗರದಲ್ಲೇ ಹುಟ್ಟಿ ಬೆಳೆದು, ಸಖತ್ ಮಾಡರ್ನ್ ಆಗಿರಬೇಕು. ಬರುವಾಗ ಆಧಾರ್ ಕಾರ್ಡ್ ಹಾಗೂ ಪಾಸ್​ಪೋರ್ಟ್ ಸೈಜ್ ಫೋಟೋ ತರಬೇಕು ಎಂದಿದೆ.

Vaishnavi Gowda: ಮದುವೆಯಾದ್ರೂ ತಾಳಿ ಯಾಕೆ ಹಾಕಿಲ್ಲ ಎಂದವರಿಗೆ ಸ್ಪಷ್ಟನೆ ಕೊಟ್ಟ ವೈಷ್ಣವಿ ಗೌಡ