Shraddha Kapoor: ನಟಿ ಶ್ರದ್ಧಾ ಕಪೂರ್ ಡ್ಯಾನ್ಸ್ ವಿಡಿಯೊ ಶೂಟ್ ಮಾಡಿದ ರಾಹುಲ್ ಮೋದಿ! ಗಾಸಿಪ್ ನಿಜವಾಗೋಯ್ತಾ?..
ಶ್ರದ್ಧಾ ಮತ್ತು ರಾಹುಲ್ ಇಬ್ಬರೂ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ವರ್ಷ ದಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಈ ಬಗ್ಗೆ ನಟಿ ಶ್ರದ್ಧಾ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ನಟಿ ಶ್ರದ್ಧಾ ಕಪೂರ್ ಹಾಗೂ ರಾಹುಲ್ ಅವರು ಹಾಲಿಡೇ ಟೂರ್, ಏರ್ ಪೋರ್ಟ್, ಪಾರ್ಟಿ ಇವೆಂಟ್‌ನಲ್ಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಇವರಿಬ್ಬರು ಡೇಟಿಂಗ್ ಮಾಡುವುದು ನಿಜವೆಂದು ಹೇಳಲಾಗುತ್ತಿತ್ತು. ಇದೀಗ ಅವರ ಡ್ಯಾನ್ಸ್ ವಿಡಿಯೋವನ್ನು ಚಿತ್ರೀಕರಿಸಿದ್ದು ಕೂಡ ರಾಹುಲ್ ಎಂದೇ ಹೇಳಲಾಗುತ್ತಿದೆ..


ನವದೆಹಲಿ: ಆಶಿಕ್ 2, ಎಬಿಸಿಡಿ 2, ಬಾಗಿ, ಚಿಚೊರೆ, ಸ್ತ್ರೀ ಇತ್ಯಾದಿ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಶ್ರದ್ಧಾ ಕಪೂರ್ (Shraddha Kapoor) ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿ ಯಲ್ಲಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲೂ ಹೆಚ್ಚು ಆ್ಯಕ್ಟಿವ್ ಆಗಿರುವ ನಟಿ ಶ್ರದ್ದಾ ಕಪೂರ್ ಅವರು ಇತ್ತೀಚೆಗಷ್ಟೇ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಡ್ಯಾನ್ಸ್ ವಿಡಿಯೊ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಕಾಮಿಡಿ ಐಕಾನಿಕ್ ಸ್ಟೆಪ್ ಹಾಕುವ ಇವರ ಈ ವಿಡಿಯೋ ಸಖತ್ ಫನ್ನಿ ಯಾಗಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಆದರೆ ವಿಶೇಷ ಏನೆಂದರೆ ನಟಿ ಶ್ರದ್ಧಾ ಕಪೂರ್ ಅವರ ಈ ಡ್ಯಾನ್ಸ್ ವಿಡಿಯೋವನ್ನು ರಾಹುಲ್ ಮೋದಿ ಅವರೇ ತಮ್ಮ ಕ್ಯಾಮರಾ ದಲ್ಲಿ ಚಿತ್ರಿಕರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಡಿಯೊ ಕಂಡು ನೆಟ್ಟಿಗರೇ ಶಾಕ್ ಆಗಿದ್ದಾರೆ.
ಶ್ರದ್ಧಾ ಮತ್ತು ರಾಹುಲ್ ಇಬ್ಬರೂ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ವರ್ಷದಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಈ ಬಗ್ಗೆ ನಟಿ ಶ್ರದ್ಧಾ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ನಟಿ ಶ್ರದ್ಧಾ ಕಪೂರ್ ಹಾಗೂ ರಾಹುಲ್ ಅವರು ಹಾಲಿಡೇ ಟೂರ್, ಏರ್ ಪೋರ್ಟ್, ಪಾರ್ಟಿ ಇವೆಂಟ್ ನಲ್ಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಇವ ರಿಬ್ಬರು ಡೇಟಿಂಗ್ ಮಾಡುವುದು ನಿಜವೆಂದು ಹೇಳಲಾಗುತ್ತಿತ್ತು. ಇದೀಗ ಅವರ ಡ್ಯಾನ್ಸ್ ವಿಡಿಯೋವನ್ನು ಚಿತ್ರೀಕರಿಸಿದ್ದು ಕೂಡ ರಾಹುಲ್ ಎಂದೇ ಹೇಳಲಾಗುತ್ತಿದೆ.
ನಟಿ ಶ್ರದ್ಧಾ ಕಪೂರ್ ಅವರೇ ಈ ವಿಡಿಯೋ ಹಂಚಿಕೊಂಡಿದ್ದು ನನ್ನನ್ನು ಯಾರು ತಡೆಯಲು ಸಾಧ್ಯ? ಎಂದು ಬರೆದು ಕೊಂಡಿದ್ದಾರೆ..ಅಭಿಮಾನಿಗಳು ಈ ವಿಡಿಯೋ ಕಂಡು ನಾನಾ ತರನಾಗಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ರಾಹುಲ್ ಸರ್ ಅವರು ಶೂಟ್ ಮಾಡಿದ್ದಾರಾ ಎಂದು ನೆಟ್ಟಿಗರೊಬ್ಬರು ವಿಡಿಯೋ ಕಂಡು ಪ್ರತಿಕ್ರಿಯೆ ನೀಡಿದ್ದಾರೆ. ನಿಮಿಬ್ಬರ ಜೋಡಿ ಕ್ಯೂಟ್ ಆಗಿದೆ ಬೇಗ ಗುಡ್ ನ್ಯೂಸ್ ನೀಡಿ ಎಂದು ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ:Jockey 42 Movie: ನಟ ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ಗುಡ್‌ನ್ಯೂಸ್ ಕೊಟ್ಟ ನಿರ್ದೇಶಕ ಗುರುತೇಜ್ ಶೆಟ್ಟಿ
ರಾಹುಲ್ ಮೋದಿ ಕೂಡ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿ ಪಡೆದಿದ್ದಾರೆ. ರಾಹುಲ್ ಅವರು ಒಬ್ಬ ಪ್ರಸಿದ್ಧ ಬರಹ ಗಾರರಾಗಿದ್ದಾರೆ. ಅದರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ. ತೂ ಜೂಥಿ ಮೈನ್ ಮಕ್ಕರ್ ಚಿತ್ರದಲ್ಲಿ ಕೆಲಸ ಮಾಡಿದ್ದು ಇದೇ ಸಿನಿಮಾದಲ್ಲಿ ನಟಿ ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಆರ್ಯನ್ ಅವರ ಪ್ಯಾರ್ ಕಾ ಪಂಚನಾಮಾ 2 ಮತ್ತು ಸೋನು ಕೆ ಟಿಟು ಕಿ ಸ್ವೀಟಿ ಇತರ ಚಿತ್ರ ಗಳಲ್ಲಿಯೂ ಕೆಲಸ ಮಾಡಿದ್ದಾರೆ. ಈ ಮೂಲಕ ಅವರಿಬ್ಬರೂ ಸಿನಿಮಾದಿಂದ ಪರಸ್ಪರ ಪರಿಚಯವಾಗಿ ಇದೀಗ ಲವ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.
ನಟಿ ಶ್ರದ್ಧಾ ಕಪೂರ್ ಅವರ ಸ್ತ್ರೀ 2 ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡ ಬಳಿಕ ಇವರ ಸಂಭಾವನೆ ಕೂಡ ಹೆಚ್ಚಾಗಿದೆ. ಸದ್ಯ ಅವರಿಗೆ ಆಶಿಮಾ ಚಿಬ್ಬರ್ ನಿರ್ದೇಶನದ ಕೆಟಿನಾ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಇದಾದ ಬಳಿಕ ಪಂಕಜ್ ಪರಾಶರ್ ನಿರ್ದೇಶನದ ಚಾಲ್‌ಬಾಜ್ ಇನ್ ಲಂಡನ್, ಬಳಿಕ ಸ್ತ್ರೀ 3 ಹಾಗೂ ನೋ ಎಂಟ್ರಿ ಸಿಕ್ವೇಲ್ ನಲ್ಲಿ ಕೂಡ ಅಭಿನಯಿಸಲಿದ್ದಾರೆ.