ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Assembly Elections 2026: ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ಮತದಾನ

ದೇವರ ನಾಡು ಕೇರಳ, ಕೇಂದ್ರಾಡಳಿತ ಪ್ರದೇಶ ಪುದುಚೇರಿ, ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯಿಂದ ಬಿಗಿ ಭದ್ರತೆ ನಡುವೆ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಒಟ್ಟು 296 ವಿಧಾನ ಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 1894 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಮೂರು ರಾಜ್ಯಗಳಲ್ಲಿ ಇಂದು ಮತದಾನ

ಸಂಗ್ರಹ ಚಿತ್ರ -

ಬೆಂಗಳೂರು: ಬಿಜೆಪಿ (BJP), ಕಾಂಗ್ರೆಸ್ (Congress) ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಗೆ ಗುರುವಾರ ಅಸ್ಸಾಂ (assam), ಕೇರಳ (kerala) ಮತ್ತು ಪುದುಚೇರಿ (Puducherry) ಸಾಕ್ಷಿಯಾಗಲಿದೆ. ಒಟ್ಟು 296 ವಿಧಾನ ಸಭಾ ಕ್ಷೇತ್ರಗಳಿಗೆ (Assembly Elections 2026) ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಲಿದ್ದು, 1894 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ಸ್ಥಾನಗಳಿಗೆ ಒಂದೇ ಹಂತದಲ್ಲಿ ಇಂದು ಮತದಾನ ನಡೆದು ಫಲಿತಾಂಶ ಮೇ 4 ರಂದು ಹೊರಬೀಳಲಿದೆ.

ಕೇರಳದಲ್ಲಿ ಎಲ್‌ಡಿಎಫ್‌, ಕಾಂಗ್ರೆಸ್‌‍ ನೇತೃತ್ವದ ಯುಡಿಎಫ್‌ ಜೊತೆಗೆ ಬಿಜೆಪಿ ಕಣದಲ್ಲಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು 140 ಸ್ಥಾನಗಳಿಗೆ 890 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 27.1 ಮಿಲಿಯನ್ ಮತದಾರರಲ್ಲಿ 13.2 ಮಿಲಿಯನ್ ಪುರುಷರು, 13.9 ಮಿಲಿಯನ್ ಮಹಿಳೆಯರು ಮತ್ತು 273 ತೃತೀಯ ಲಿಂಗಿಗಳು ಇಂದು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಮಿಳುನಾಡಿನ ಒಂಭತ್ತು ಪೊಲೀಸರಿಗೆ ಮರಣದಂಡನೆ ಪ್ರಕರಣ: ಸಾಕ್ಷಿ ಹೇಳಿದ ಮಹಿಳಾ ಪೇದೆಯ ಧೈರ್ಯಕ್ಕೆ ಸಲಾಂ

ಅಸ್ಸಾಂನ 126 ವಿಧಾನ ಸಭಾ ಕ್ಷೇತ್ರಗಳಿಗೆ ಗುರುವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಇಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗವು ಒಂದೇ ಹಂತದ ಮತದಾನವನ್ನು ನಡೆಸಲಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇಲ್ಲಿ ಏರ್ಪಟ್ಟಿದೆ. ಒಟ್ಟು 25 ಮಿಲಿಯನ್ ಮತದಾರರಲ್ಲಿ 12.5 ಮಿಲಿಯನ್ ಪುರುಷರು, 12.5 ಮಿಲಿಯನ್ ಮಹಿಳೆಯರು ಮತ್ತು 343 ತೃತೀಯ ಲಿಂಗಿಗಳು ಸೇರಿದ್ದಾರೆ. ಒಟ್ಟು 126 ವಿಧಾನಸಭಾ ಸ್ಥಾನಗಳಿಗೆ 722 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಗುರುವಾರ ಒಂದೇ ಹಂತದ ಮತದಾನ ನಡೆಯಲಿದ್ದು, ಇಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ನಡುವೆ ತೀವ್ರ ಸ್ಪರ್ಧೆ ಇದೆ. ಪುದುಚೇರಿಯ ಒಟ್ಟು 30 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 9.44 ಲಕ್ಷ ಮತದಾರರಲ್ಲಿ ಸುಮಾರು 4.43 ಲಕ್ಷ ಪುರುಷರು, 5 ಲಕ್ಷ ಮಹಿಳೆಯರು ಮತ್ತು 139 ತೃತೀಯ ಲಿಂಗದ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 294 ಅಭ್ಯರ್ಥಿಗಳ ಕಣದಲ್ಲಿದ್ದಾರೆ. ಎನ್ ಡಿಎ, ಇಂಡಿಯಾ ಬಣದ ಪ್ರಮುಖ ಮೈತ್ರಿಕೂಟ ಪಕ್ಷಗಳೊಂದಿಗೆ ಈ ಬಾರಿ ಹೊಸದಾಗಿ ರೂಪುಗೊಂಡಿರುವ ಪಕ್ಷಗಳು ಕೂಡ ಕಣದಲ್ಲಿವೆ.

ತಮಿಳುನಾಡಿನಲ್ಲಿ ಈ ಬಾರಿ ಎಐಎಡಿಎಂಕೆಯತ್ತ ಮತದಾರರ ಚಿತ್ತ; ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದೇನು?

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಗುರುವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.