Daavudi Song: 'ದಾವುಡಿ' ಹಾಡಿಗೆ ಕುಣಿದು ಕುಪ್ಪಳಿಸಿದ ಶಾಲಾ ಮಕ್ಕಳು; ವೈರಲ್ ವಿಡಿಯೊ ನೋಡಿ ನೆಟ್ಟಿಗರು ಫಿದಾ
ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ನಟಿಸಿದ ಬ್ಲಾಕ್ ಬ್ಲಾಸ್ಟರ್ ಚಿತ್ರ 'ದೇವರ: ಪಾರ್ಟ್ 1' ನ 'ದಾವುಡಿ'(Daavudi Song) ಹಾಡಿಗೆ ಶಾಲಾ ಪುಟ್ಟ ಮಕ್ಕಳು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಆದರೆ ನಟ ಜೂನಿಯರ್ ಎನ್‌ಟಿಆರ್ ಹಾಗೂ ಇತರ ಸೆಲೆಬ್ರಿಟಿಗಳು ಹೇಳಿದ್ದೇನು ಗೊತ್ತಾ?
ನವದೆಹಲಿ, ಜ.18,2025: ಪುಟ್ಟ ಮಕ್ಕಳು ಹೇಗೆ ಕುಣಿದರೂ ನೋಡೋದೇ ಒಂದು ಚಂದ. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುಣಿಯುವ ಮಕ್ಕಳನ್ನು ನೋಡುವುದೇ ಕಣ್ಣಿಗೆ ಸೊಗಸು. ಇದೀಗ ಅಂತಹದೊಂದು ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಮವಸ್ತ್ರ ಧರಿಸಿದ ಒಂದಷ್ಟು ಮಕ್ಕಳು ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ಅಭಿನಯದ 'ದೇವರ: ಪಾರ್ಟ್ 1' ನ ದಾವುಡಿ((Daavudi Song) ) ಹಾಡಿನ ಬೀಟ್‌ಗೆ ಸಖತ್ ಹಾಕಿ ಸ್ಟೆಪ್ಸ್ ಹಾಕಿದ್ದಾರೆ. ಮಕ್ಕಳ ಈ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಜನವರಿ 10 ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಈ ಡ್ಯಾನ್ಸ್ ರೀಲ್ ಈಗಾಗಲೇ ವೈರಲ್ ಆಗಿದ್ದು, 30 ಮಿಲಿಯನ್ ವೀಕ್ಷಣೆಗಳು ಮತ್ತು 4 ಮಿಲಿಯನ್ ಲೈಕ್‍ಗಳನ್ನು ಗಳಿಸಿದೆ. ಶಾಲಾ ಮಕ್ಕಳ ಈ ನೃತ್ಯ ಪ್ರದರ್ಶನ ಅನೇಕ ಜನರಿಂದ ಪ್ರಶಂಸೆಯ ಕಾಮೆಂಟ್‍ಗಳನ್ನು ಪಡೆದುಕೊಂಡಿದೆ.
ಕಿಲಿ ಪಾಲ್ ಮತ್ತು ಇತರರ ಜೊತೆಗೆ, ನಟ ಜೂನಿಯರ್ ಎನ್‌ಟಿಆರ್ ಕೂಡ ಮಕ್ಕಳ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ನೃತ್ಯ ಪ್ರದರ್ಶನವನ್ನು "ಅದ್ಭುತ" ಎಂದು ಕರೆದಿದ್ದಾರೆ. ಭಾರತೀಯ ರ್ಯಾಪರ್ ರಾಫ್ತಾರ್ ಕೂಡ ವೈರಲ್ ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಪುಟ್ಟ ನೃತ್ಯಗಾರರ ಪ್ರದರ್ಶನವನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Allu Arjun: 'ಪುಷ್ಪ 2' ಯಶಸ್ಸಿನ ಬೆನ್ನಲ್ಲೇ ಅಲ್ಲು ಅರ್ಜುನ್ ಮತ್ತೆ ಬ್ಯುಸಿ; 4ನೇ ಬಾರಿ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾದಲ್ಲಿ ನಟನೆ
ಈ ಹಾಡನ್ನು ಕಳೆದ ವರ್ಷ ಟಿ-ಸೀರೀಸ್ ಬಿಡುಗಡೆ ಮಾಡಿತ್ತು. ಇದನ್ನು ಅಕಾಸಾ ಸಿಂಗ್ ಮತ್ತು ನಕಾಶ್ ಅಜೀಜ್ ಅವರು ಹಾಡಿದ್ದಾರೆ. ಇದು ತೆಲುಗು ಚಿತ್ರ 'ದೇವರ: ಪಾರ್ಟ್ 1' ನ ಹಾಡಾಗಿದೆ.