Visa Free: ವೀಸಾ ಇಲ್ಲದೆ ಭಾರತೀಯರು 58 ದೇಶಗಳಿಗೆ ಎಂಟ್ರಿ ಕೊಡಬಹುದು!
ವಿದೇಶಕ್ಕೆ ಪ್ರವಾಸ ಹೋಗಬೇಕು ಎನ್ನುವ ಭಾರತೀಯರು ವೀಸಾದ ಜಂಜಾಟವಿಲ್ಲದೆ (Visa Free Countries) 58 ದೇಶಗಳಿಗೆ ಭೇಟಿ ಮಾಡಬಹುದು. ಇಲ್ಲಿ ಕನಿಷ್ಠ ವಾರಗಳ ಕಾಲ ತಿರುಗಾಡಬಹುದು. ಈ ದೇಶಗಳ ವಿವಿಧ ತಾಣಗಳನ್ನು ಕಣ್ತುಂಬಿಕೊಳ್ಳಬಹುದು, ನೆಚ್ಚಿನ ಖಾದ್ಯಗಳನ್ನು ಸವಿಯಬಹುದು. ಅಲ್ಲಿನ ಸಂಸ್ಕೃತಿಯ ಸೊಬಗನ್ನು ಆನಂದಿಸಬಹುದು. ಈ ದೇಶಗಳು ಯಾವುದು ಗೊತ್ತೇ?


ಬೆಂಗಳೂರು: ವಿದೇಶ ಪ್ರವಾಸ ಬಹುತೇಕ ಕನಸು. ಆದರೆ ವೀಸಾ (Visa) ಪ್ರಕ್ರಿಯೆಯಲ್ಲಿ ಎದುರಾಗುವ ತೊಂದರೆಗಳಿಗೆ ಬೇಸತ್ತು ಆ ಕನಸನ್ನು ನನಸು ಮಾಡುವ ಗೋಜಿಗೆ ಹೆಚ್ಚಿನವರು ಹೋಗುವುದೇ ಇಲ್ಲ. ಆದರೆ ಇನ್ನು ಈ ಬಗ್ಗೆ ಯೋಚನೆ ಮಾಡಬೇಕಿಲ್ಲ. ವಿದೇಶಕ್ಕೆ ಪ್ರವಾಸ ಹೋಗಬೇಕು ಎನ್ನುವ ಕನಸು ಇದ್ದವರಿಗೆ ವೀಸಾದ ಜಂಜಾಟವಿಲ್ಲದೆ (Visa Free Countries) 58 ದೇಶಗಳಿಗೆ ಭೇಟಿ ಮಾಡಬಹುದು. ಇಲ್ಲಿ ಕನಿಷ್ಠ ವಾರಗಳ ಕಾಲ ತಿರುಗಾಡಬಹುದು. ಈ ದೇಶಗಳ ವಿವಿಧ ತಾಣಗಳನ್ನು ಕಣ್ತುಂಬಿಕೊಳ್ಳಬಹುದು, ನೆಚ್ಚಿನ ಖಾದ್ಯಗಳನ್ನು ಸವಿಯಬಹುದು. ಅಲ್ಲಿನ ಸಂಸ್ಕೃತಿಯ ಸೊಬಗನ್ನು ಆನಂದಿಸಬಹುದು. ಇಂಡೋನೇಷ್ಯಾ, ಮಾರಿಷಸ್, ಮಾಲ್ಡೀವ್ಸ್‌ನಂತಹ ಇನ್ನು ಅನೇಕ ದೇಶಗಳ ಜನಪ್ರಿಯ ಪ್ರವಾಸಿ ತಾಣಗಳು ಭಾರತೀಯ ಪ್ರವಾಸಿಗರಿಗೆ ವೀಸಾ ಇಲ್ಲದೇ ಭೇಟಿ ನೀಡುವ ಅವಕಾಶವನ್ನು ಕಲ್ಪಿಸುತ್ತದೆ.
ವೀಸಾ ಇಲ್ಲದೆ ಬೇರೆ ದೇಶಕ್ಕೆ ಹೋಗಲು ಸಾಧ್ಯವಾಗುವುದೆಂದರೆ ಖಂಡಿತವಾಗಿಯೂ ಇದು ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸಿಗರಂತೂ ಇದು ಇಷ್ಟಪಡುವ ಒಂದು ಸವಲತ್ತುಗಳಲ್ಲಿ ಒಂದು. ವಿವಿಧ ದಾಖಲೆಗಳು ಮತ್ತು ದೀರ್ಘಕಾಲ ಕಾಯುವಂತೆ ಮಾಡುವ ವೀಸಾ ಪ್ರಕ್ರಿಯೆಗಳು ಕೆಲವೊಮ್ಮೆ ಬೇಸರವನ್ನೂ ಮೂಡಿಸುತ್ತದೆ. ಆದರೆ ವೀಸಾ ರಹಿತ ದೇಶಕ್ಕೆ ಭೇಟಿ ನೀಡುವವರು ಗಮನಿಸಬೇಕಾದ ಒಂದು ಮುಖ್ಯ ಸಂಗತಿ ಎಂದರೆ ಇದು ಹೆಚ್ಚು ಪ್ರಬಲವಾದ ಪಾಸ್‌ಪೋರ್ಟ್ ಹೊಂದಿರುವವರಿಗೆ ಮಾತ್ರ ನೀಡಲಾಗುತ್ತದೆ.

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಭಾರತದ ಪಾಸ್‌ಪೋರ್ಟ್ ಶ್ರೇಯಾಂಕವು 2025ರಲ್ಲಿ 81ನೇ ಸ್ಥಾನಕ್ಕೆ ಕುಸಿಯಿತು. ಇದರಿಂದ ಭಾರತೀಯ ಪ್ರಜೆಗಳಿಗೆ ಪ್ರಪಂಚದಾದ್ಯಂತದ ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಸೀಮಿತಗೊಳಿಸಲಾಗಿದೆ. 2024ರಲ್ಲಿ ಪಾಸ್‌ಪೋರ್ಟ್ ಶ್ರೇಯಾಂಕ 80 ಆಗಿತ್ತು.
ಯುರೋಪ್, ಯುನೈಟೆಡ್ ಸ್ಟೇಟ್ಸ್ ಅಥವಾ ಯುನೈಟೆಡ್ ಕಿಂಗ್‌ಡಮ್‌ನಂತಹ ಜನಪ್ರಿಯ ತಾಣಗಳಿಗೆ ಭೇಟಿ ನೀಡಲು ಭಾರತೀಯ ಪ್ರಜೆಗಳು ವೀಸಾ ಪಡೆಯಬೇಕಾಗುತ್ತದೆ. ಆದರೆ ಇನ್ನೂ 58 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರವಾಸ ಮಾಡಬಹುದಾಗಿದೆ. ಇದರಲ್ಲಿ ಇಂಡೋನೇಷ್ಯಾ, ಮಾರಿಷಸ್‌ನಂತಹ ಕೆಲವು ಹೆಚ್ಚು ಜನಪ್ರಿಯ ಮತ್ತು ಬೇಡಿಕೆಯ ಪ್ರವಾಸಿ ತಾಣಗಳೂ ಸೇರಿವೆ. ಲಾವೋಸ್, ಫಿಜಿ, ಮಡಗಾಸ್ಕರ್ ಮತ್ತು ಇನ್ನೂ ಹೆಚ್ಚಿನ ದೇಶಗಳು ಭಾರತೀಯ ಪ್ರವಾಸಿಗರನ್ನು ಸೆಳೆಯಲು ಸಾಕಷ್ಟು ಅವಕಾಶ ನೀಡಿದೆ.
ಇದನ್ನೂ ಓದಿ: Anusha Rai: ಅನುಷಾ ರೈಯಿಂದ ಗ್ರ್ಯಾಂಡ್ ಬರ್ತ್ ಡೇ ಪಾರ್ಟಿ: ಯಾರೆಲ್ಲ ಬಂದಿದ್ರು ನೋಡಿ
ಪ್ರಕೃತಿಯೊಂದಿಗೆ ಒಡನಾಡಲು ಮತ್ತು ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ಹಲವಾರು ಆಫ್ರಿಕನ್ ತಾಣಗಳು ಕೂಡ ಈ ಪಟ್ಟಿಯಲ್ಲಿವೆ. ಆಫ್ರಿಕಾದ ಕೀನ್ಯಾ ಮತ್ತು ಜಿಂಬಾಬ್ವೆಯಂತಹ ಸ್ಥಳಗಳು ವೈವಿಧ್ಯಮಯ ಮತ್ತು ಶ್ರೀಮಂತ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. ಈ ದೇಶಗಳು ಭಾರತೀಯರಿಗೆ ವೀಸಾ ಇಲ್ಲದೆ ಭೇಟಿ ನೀಡಲು ಅವಕಾಶ ನೀಡಿದೆ. ಓಷಿಯಾನಿಯಾದಲ್ಲಿ ಫಿಜಿ, ಮೈಕ್ರೋನೇಷಿಯಾ, ಪಲಾವ್ ದ್ವೀಪಗಳು, ವನವಾಟು ಮೊದಲಾದ ದೇಶಗಳು ಕೂಡ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
ಭಾರತೀಯರು ವೀಸಾ ಮುಕ್ತವಾಗಿ ಭೇಟಿ ನೀಡಬಹುದಾದ ದೇಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಅಂಗೋಲಾ, ಬಾರ್ಬಡೋಸ್, ಭೂತಾನ್, ಬೊಲಿವಿಯಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಬುರುಂಡಿ, ಕಾಂಬೋಡಿಯಾ, ಕೇಪ್ ವರ್ಡೆ ದ್ವೀಪಗಳು, ಕೊಮೊರೊ ದ್ವೀಪಗಳು, ಕುಕ್ ದ್ವೀಪಗಳು, ಜಿಬೌರಿ, ಡೊಮಿನಿಕಾ, ಇಥಿಯೋಪಿಯಾ, ಫಿಜಿ, ಗ್ರೆನಡಾ, ಗಿನಿ-ಬಿಸ್ಸೌ, ಹೈಟಿ, ಇಂಡೋನೇಷ್ಯಾ, ಇರಾನ್, ಜಮೈಕಾ, ಜೋರ್ಡಾನ್, ಕಝಾಕಿಸ್ತಾನ್, ಕೀನ್ಯಾ, ಕಿರಿಬಾಟಿ, ಲಾವೋಸ್, ಮಕಾವೊ (ಚೀನಾದ ವಿಶೇಷ ಆಡಳಿತ ಪ್ರದೇಶಗಳು), ಮಡಗಾಸ್ಕರ್, ಮಲೇಷ್ಯಾ, ಮಾಲ್ಡೀವ್ಸ್, ಮಾರ್ಷಲ್ ದ್ವೀಪಗಳು, ಮಾರಿಷಸ್, ಮೈಕ್ರೋನೇಶಿಯಾ, ಮಂಗೋಲಿಯಾ, ಮಾಂಟ್ಸೆರಾಟ್, ಮೊಜಾಂಬಿಕ್, ಮ್ಯಾನ್ಮಾರ್, ನಮೀಬಿಯಾ, ನೇಪಾಳ, ನಿಯು, ಪಲಾವ್ ದ್ವೀಪಗಳು, ಕತಾರ್, ರುವಾಂಡಾ, ಸಮೋವಾ, ಸೆನೆಗಲ್, ಸೀಶೆಲ್ಸ್, ಸಿಯೆರಾ ಲಿಯೋನ್, ಸೊಮಾಲಿಯಾ, ಶ್ರೀಲಂಕಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟಾಂಜಾನಿಯಾ, ಥೈಲ್ಯಾಂಡ್, ಟಿಮೋರ್-ಲೆಸ್ಟೆ, ಟ್ರಿನಿಡಾಡ್ ಮತ್ತು ಟೊಬೆಗೊ, ಟುವಾಲು, ವನವಾಟು, ಜಿಂಬಾಬ್ವೆ