Bihar Election Result 2025: ಬಿಹಾರ ಚುನಾವಣೆ ಫಲಿತಾಂಶ ದಿನದಂದೇ ಹೃದಯಾಘಾತದಿಂದ ಮೃತಪಟ್ಟ ಜೆಎಸ್‌ಪಿ ಅಭ್ಯರ್ಥಿ!
Jan Swaraj Party: ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವನ್ನು ಸಾಧಿಸಿದ್ದು, ವಿಪಕ್ಷಗಳು ಧೂಳಿಪಟವಾಗಿದೆ. ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸ್ವರಾಜ್ ಪಕ್ಷ ಹೀನಾಯವಾಗಿ ಸೋಲನ್ನು ಕಂಡಿದೆ. ಫಲಿತಾಂಶದ ದಿನವೇ ಜನ ಸ್ವರಾಜ್ ಪಕ್ಷದ ತಾರರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಸಿಂಗ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತ ಚಂದ್ರಶೇಖರ್ ಸಿಂಗ್ (ಸಂಗ್ರಹ ಚಿತ್ರ) -
ಪಟನಾ: ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವನ್ನು ಸಾಧಿಸಿದ್ದು, (Bihar Election Result 2025) ವಿಪಕ್ಷಗಳು ಧೂಳಿಪಟವಾಗಿದೆ. ಪ್ರಶಾಂತ್ ಕಿಶೋರ್ (Prashant Kishor) ನೇತೃತ್ವದ ಜನ ಸ್ವರಾಜ್ ಪಕ್ಷ ಹೀನಾಯವಾಗಿ ಸೋಲನ್ನು ಕಂಡಿದೆ. ಫಲಿತಾಂಶದ ದಿನವೇ ಜನ ಸ್ವರಾಜ್ ಪಕ್ಷದ ತಾರರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಸಿಂಗ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿಂಗ್ ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಅವರು ತರಾರಿಯಲ್ಲಿ 2,271 ಮತಗಳನ್ನು ಪಡೆದಿದ್ದರು. ಕ್ಷೇತ್ರದಲ್ಲಿ ಬಿಜೆಪಿಯ ವಿಶಾಲ್ ಪ್ರಶಾಂತ್ ಜಯಗಳಿಸಿದ್ದಾರೆ.
ಅಕ್ಟೋಬರ್ 31 ರಂದು ಪ್ರಚಾರದ ವೇಳೆ ಸಿಂಗ್ ಅವರಿಗೆ ಮೊದಲ ಹೃದಯಾಘಾತವಾಗಿದ್ದು, ನಂತರ ಅವರನ್ನು ಪಾಟ್ನಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ರವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಅವರಿಗೆ ಎರಡನೇ ಹೃದಯಾಘಾತವಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯರಾದ ಸಿಂಗ್ ಅವರು ಕುರ್ಮುರಿ ಗ್ರಾಮದವರು. ಅವರು ರಾಜಕೀಯ ಕುಟುಂಬದಿಂದ ಬಂದವರಲ್ಲದಿದ್ದರೂ, ತಮ್ಮ ಸಮುದಾಯದಲ್ಲಿ ಅವರಿಗೆ ಬಲವಾದ ಗೌರವವಿತ್ತು. ಜನ ಸೂರಜ್ ಪಕ್ಷದ ರಚನೆಯ ನಂತರ ಅವರು ಪ್ರಶಾಂತ್ ಕಿಶೋರ್ ಅವರಿಂದ ಸ್ಫೂರ್ತಿ ಪಡೆದರು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಯಿತು. ಅವರ ಸಾವಿನ ಸುದ್ದಿ ಅವರ ಗ್ರಾಮವನ್ನು ಶೋಕದಲ್ಲಿ ಮುಳುಗಿಸಿದೆ, ಸ್ಥಳೀಯರು ಈ ನಷ್ಟವನ್ನು ಈ ಪ್ರದೇಶಕ್ಕೆ ದೊಡ್ಡ ಹೊಡೆತ ಎಂದು ಹೇಳಿದ್ದಾರೆ.
ಜನ ಸ್ವರಾಜ್ ಫ್ಲಾಪ್
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಈಗಿನ ಟ್ರೆಂಡ್ ನೋಡಿದಾಗ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷಕ್ಕೆ (JSP) ಹೊಸ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ. ನಿರುದ್ಯೋಗ, ದೊಡ್ಡ ಪ್ರಮಾಣದ ವಲಸೆ ಮತ್ತು ಬಿಹಾರದಲ್ಲಿ ಕೈಗಾರಿಕಾ ಅಭಿವೃದ್ಧಿಯ ಕೊರತೆಯಂತಹ ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕರಿಸಿದ ಉತ್ಸಾಹಭರಿತ ಅಭಿಯಾನವನ್ನು ಮುನ್ನಡೆಸಿದರೂ, ಕಿಶೋರ್ ಅವರ ಚೊಚ್ಚಲ ಪ್ರಯತ್ನವು ವಿಫಲವಾಗಿದೆ.
ಈ ಸುದ್ದಿಯನ್ನೂ ಓದಿ: Stock Market: ಬಿಹಾರ ಚುನಾವಣೆ ಫಲಿತಾಂಶಕ್ಕೆ ಮುನ್ನ ಸೆನ್ಸೆಕ್ಸ್-ನಿಫ್ಟಿ ಫ್ಲಾಟ್
ಪ್ರಶಾಂತ್ ಕಿಶೋರ್ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಆದರೆ ಒಂದು ಕಡೆಯೂ ಗೆಲುವನ್ನು ಸಾಧಿಸದೆ ಸೊನ್ನೆ ಸುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ 2025ರಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷ 'ಜನ ಸುರಾಜ್ ಪಾರ್ಟಿ ಕಮಾಲ್ ಮಾಡಬಹುದು ಎಂದು ಊಹಿಸಿದ್ದು ಸುಳ್ಳಾಗಿದೆ.
ಸಮೀಕ್ಷೆಗಳಲ್ಲಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿ ಬಿಹಾರದ 243 ಸ್ಥಾನಗಳಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಇದೀಗ ಅದು ಸಂಪೂರ್ಣ ಹುಸಿಯಾಗಿದೆ. ಚುನಾವಣಾ ಚಾಣಕ್ಯ ಎಂದು ಹೆಸರುವಾಸಿಯಾಗಿದ್ದ ಪ್ರಶಾಂತ್ ಈ ಮೊದಲು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದರು. ಬಿಹಾರದಲ್ಲಿ ಉದ್ಯೋಗ ಮತ್ತು ವಲಸೆಯ ವಿಷಯವನ್ನು ಮುಖ್ಯ ಭೂಮಿಕೆಗೆ ತಂದ ಅವರು ಪಾದ ಯಾತ್ರೆಗಳನ್ನು ಕೈಗೊಂಡಿದ್ದರು. ಆದರೆ ಅದ್ಯಾವುದಕ್ಕೂ ಬಿಹಾರದ ಜನರು ಒತ್ತು ನೀಡಿಲ್ಲ ಎಂದು ಈ ಬಾರಿಯ ಫಲಿತಾಂಶ ಹೇಳುತ್ತದೆ.