Mumbai Apartment Row: ಮಾಂಸಾಹಾರ ಸೇವನೆ ಬಗ್ಗೆ ಅಪಾರ್ಟ್‌ಮೆಂಟ್‌ನಲ್ಲಿ ಮಾರಾಮಾರಿ! ಇದೇನಿದು ವಿವಾದ?
Mumbai apartment Row: ಮಾಂಸಾಹಾರ ಸೇವನೆ ಗಲಾಟೆಗೆ ಕಾರಣವಾದ ಘಟನೆ ಮುಂಬೈ ನಗರದ ಘಾಟ್ಕೋಪರ್ ಪ್ರದೇಶದಲ್ಲಿ ಗುರುವಾರ ನಡೆದಿದೆ. ಇದು ಗುಜರಾತಿ ಮತ್ತು ಮರಾಠಿ ಸಮುದಾಯದ ನಡುವೆ ಉದ್ವಿಗ್ನತೆಗೆ ಕಾರಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು. ಮಾಂಸಾಹಾರಿಗಳು ಕೊಳಕು ಎಂದು ಹೇಳಿರುವುದು ಈ ಉದ್ವಿಗ್ನತೆಗೆ ಮುಖ್ಯ ಕಾರಣವಾಗಿತ್ತು.


ಮುಂಬೈ: ಮಾಂಸಾಹಾರ (Non veg food) ಸೇವನೆ ಗಲಾಟೆಗೆ ಕಾರಣವಾದ ಘಟನೆ ಮುಂಬೈ (Mumbai) ನಗರದ ಘಾಟ್ಕೋಪರ್ ಪ್ರದೇಶದಲ್ಲಿ ಗುರುವಾರ ನಡೆದಿದೆ. ಇದು ಗುಜರಾತಿ ( Gujarati ) ಮತ್ತು ಮರಾಠಿ (Marati) ಸಮುದಾಯದ ನಡುವೆ ಉದ್ವಿಗ್ನತೆಗೆ ಕಾರಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು. ಮಾಂಸಾಹಾರಿಗಳು ಕೊಳಕು ಎಂದು ಹೇಳಿರುವುದು ಈ ಉದ್ವಿಗ್ನತೆಗೆ ಮುಖ್ಯ ಕಾರಣವಾಗಿತ್ತು. ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ವಾಸವಿರುವ ಕುಟುಂಬಗಳು ಏನು ತಿನ್ನಬಹುದು ಎನ್ನುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಆದರೂ ಈ ಗಲಾಟೆ ನಡೆದಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಮಾಂಸಾಹಾರ ಸೇವನೆ ಬಗ್ಗೆ ಗುಜರಾತಿ ಸಮುದಾಯ ಸದಸ್ಯರು ಮತ್ತು ಮರಾಠಿ ಮಾತನಾಡುವ ನಿವಾಸಿಗಳ ಮಧ್ಯೆ ಉದ್ವಿಗ್ನತೆಗೆ ಕಾರಣವಾಗಿದೆ. ಇದನ್ನು ಪೊಲೀಸರು ಮಧ್ಯಪ್ರವೇಶಿಸಿ ಶಮನಗೊಳಿಸಿದರು. ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಮಾಂಸ ಮತ್ತು ಮೀನು ಸೇವಿಸಿದ್ದಕ್ಕಾಗಿ ಕೆಲವು ಮರಾಠಿ ಕುಟುಂಬಗಳನ್ನು ಗುಜರಾತಿ ಸಮುದಾಯದ ನಿವಾಸಿಗಳು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂಬ ಆರೋಪದಿಂದ ಉದ್ವಿಗ್ನತೆ ಹೆಚ್ಚಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ನ ಕೆಲವು ಕಾರ್ಯಕರ್ತರು ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಗುಜರಾತಿ ಸಮುದಾಯದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಅವರು ಆಹಾರದ ಆಯ್ಕೆಗಳ ಬಗ್ಗೆ ಮರಾಠಿ ಕುಟುಂಬಗಳನ್ನು ಸಮರ್ಥಿಸಿಕೊಂಡರು. ಮರಾಠಿ ಮಾತನಾಡುವವರನ್ನು "ಕೊಳಕು" ಎಂದು ಕರೆದಿದ್ದಾರೆ. ಮನೆಯಲ್ಲಿ ಮಾಂಸ ಮತ್ತು ಮೀನು ಬೇಯಿಸುವುದಕ್ಕೆ ನಿರ್ಬಂಧಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಂಎನ್‌ಎಸ್ ನಾಯಕ ರಾಜ್ ಪಾರ್ಟೆ ಅವರು ಗುಜರಾತಿ ಸಮುದಾಯದ ಕೆಲವು ನಿವಾಸಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಕುಟುಂಬಗಳು ಏನು ತಿನ್ನಬಹುದು ಎಂಬುದರ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದರೂ ಪಾರ್ಟೆ ಅವರು ಮುಂಬೈನಂತಹ ನಗರದಲ್ಲಿ ಯಾರೂ ಇತರರ ಆಹಾರ ಪದ್ಧತಿಯ ಮೇಲೆ ನಿರ್ಬಂಧ ವಿಧಿಸಬಾರದು ಎಂದರು. ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಕರೆ ಮಾಡಿದ್ದರಿಂದ ಅವರು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಇದನ್ನೂ ಓದಿ: Viral Video: ವಿಮಾನಕ್ಕೆ ಬೆಂಕಿ ತಗುಲಿ ಮುರಿದುಬಿದ್ದ ಲ್ಯಾಂಡಿಂಗ್ ಚಕ್ರ; ಮುಂದೇನಾಯ್ತು ಗೊತ್ತಾ? ಇಲ್ಲಿದೆ ವಿಡಿಯೊ
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಸ್ಥಳೀಯರು ಸಾಮರಸ್ಯದಿಂದ ಬದುಕುವಂತೆ ಮತ್ತು ಇತರರಿಗೆ ಕಿರುಕುಳ ನೀಡದಂತೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜ್ ಪಾರ್ಟೆ ಅವರು ಅಪಾರ್ಟ್ಮೆಂಟ್ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಅಂದಿನಿಂದ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಎರಡು ಬಣಗಳು ಹುಟ್ಟಿಕೊಂಡಿವೆ. ನಾವು ಎರಡೂ ಕಡೆಯವರೊಂದಿಗೆ ಮಾತನಾಡುತ್ತೇವೆ ಮತ್ತು ಈ ಆಂತರಿಕ ವಿಷಯವನ್ನು ಪರಿಹರಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮರಾಠಿ ಮಾತನಾಡುವ ನಿವಾಸಿಗಳು ತಮ್ಮ ಆಹಾರದ ಆದ್ಯತೆಗಳಿಂದಾಗಿ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಈ ಹಿಂದೆಯೂ ಎಂಎನ್ಎಸ್ ಮತ್ತು ಶಿವಸೇನೆ ಆರೋಪಿಸಿತ್ತು.