Indian Migrants: ಪಂಜಾಬ್ ಏರ್‌ಪೋರ್ಟ್‌ಗೆ ಬಂದಿಳಿದ ಅಮೆರಿಕದಿಂದ ಗಡಿಪಾರಾದ 205 ಭಾರತೀಯರು
205 ಭಾರತೀಯರನ್ನು ಟ್ರಂಪ್ ಸರ್ಕಾರ ಗಡಿಪಾರು ಮಾಡಿದ್ದು, ಅಮೆರಿಕದಿಂದ ಗಡಿಪಾರಾದ ಭಾರತೀಯ ಪ್ರಜೆಗಳು ಪಂಜಾಬ್‌ನ ಅಮೃತಸರದಲ್ಲಿ ಬಂದಿಳಿದಿದ್ದಾರೆ. ವಲಸಿಗರಲ್ಲಿ 79 ಪುರುಷರು, 25 ಮಹಿಳೆಯರು ಮತ್ತು 13 ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂಡೀಗಢ : ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರ ವಹಿಸಿಕೊಂಡಿದ್ದ ನಂತರ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಭಾರತೀಯರಿಗೆ ಬಿಗ್ ಶಾಕ್ ನೀಡಿದ ಅಮೆರಿಕ ಸರ್ಕಾರ ಅಕ್ರಮವಾಗಿ ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರನ್ನು ಗಡಿ ಪಾರು (Indian Migrants) ಮಾಡುವಂತೆ ಆದೇಶ ನೀಡಿತ್ತು. 205 ಭಾರತೀಯರನ್ನು ಟ್ರಂಪ್ ಸರ್ಕಾರ ಗಡಿಪಾರು ಮಾಡಿದ್ದು, ಅಮೇರಿಕಾದಿಂದ ಗಡಿಪಾರಾದ ಭಾರತೀಯ ಪ್ರಜೆಗಳು ಪಂಜಾಬ್‌ನ ಅಮೃತಸರದಲ್ಲಿ ಬಂದಿಳಿದಿದ್ದಾರೆ. ವಲಸಿಗರನ್ನು ತವರಿಗೆ ಕಳುಹಿಸಲು ಅಮೆರಿಕ (America) ತನ್ನ ಸೇನೆಯನ್ನು ಬಳಸಿಕೊಳ್ಳುತ್ತಿದೆ.
ಅಮೃತಸರದ ಶ್ರೀ ಗುರುರಾಮದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಅಮೆರಿಕ ವಿಮಾನದಲ್ಲಿ 205 ಭಾರತೀಯರು ಇಂದು ಭಾರತಕ್ಕೆ ಮರಳಿದ್ದಾರೆ. ಈ ಹಿನ್ನೆಲೆ ಅಮೃತಸರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾಯುಪಡೆಯ ನೆಲೆಗೆ ಹೋಗುವ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ವಲಸಿಗರಲ್ಲಿ 79 ಪುರುಷರು, 25 ಮಹಿಳೆಯರು ಮತ್ತು 13 ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
VIDEO | Punjab: US aircraft carrying deported Indian immigrants lands at Amritsar Airport.
— Press Trust of India (@PTI_News) February 5, 2025
(Source: Third Party)
(Full video available on PTI Videos - https://t.co/n147TvrpG7) pic.twitter.com/Lza2pRDvvg
ಗಡಿಪಾರು ಮಾಡಿದ ವ್ಯಕ್ತಿಗಳನ್ನು ಅವರ ಮನೆಗಳಿಗೆ ಕಳಿಸಿಕೊಡಲು ಅನುಕೂಲವಾಗುವಂತೆ ಅಲ್ಲಿನ ಸರ್ಕಾರವು ವಿಮಾನ ನಿಲ್ದಾಣದ ಆವರಣದಲ್ಲಿ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಿದೆ.ಮೂಲಗಳ ಪ್ರಕಾರ ಗಡಿಪಾರು ಮಾಡಿದವರಲ್ಲಿ 33 ಮಂದಿ ಹರಿಯಾಣ ಮತ್ತು ಗುಜರಾತ್‌ನವರು, 30 ಮಂದಿ ಪಂಜಾಬ್‌ನಿಂದ ಮತ್ತು ವಿವಿಧ ರಾಜ್ಯಗಳಿಂದ ಬಂದವರು ಎನ್ನಲಾಗಿದೆ. ಈ ವಿಮಾನ ಮಂಗಳವಾರ ಸಂಜೆಯೇ ಬರಬೇಕಾಗಿತ್ತು. ಆದರೆ ಕೆಲ ಕಾಲ ವಿಳಂಬವಾಗಿತ್ತು.
ಈ ಸುದ್ದಿಯನ್ನೂ ಓದಿ: Indian Migrants: ಅಮೆರಿಕದಿಂದ ಬರೋಬ್ಬರಿ 205 ಅಕ್ರಮ ವಲಸಿಗ ಭಾರತೀಯರು ಗಡಿಪಾರು
ಫೆ. 12 ರಂದು ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಲಿದ್ದಾರೆ. ಇತ್ತೀಚೆಗೆ ಮೋದಿ ಅವರೊಂದಿಗೆ ಮಾತನಾಡಿದ್ದ ಟ್ರಂಪ್ ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ಮೋದಿ "ಸರಿಯಾದುದ್ದನ್ನು ಮಾಡುತ್ತಾರೆ ಎಂದು ಹೇಳಿದ್ದರು.