ಗಂಡನ ಜತೆ ಮಲಗಲು, ಮಕ್ಕಳನ್ನು ಹೆರಲು ಮಹಿಳೆಯರು ಮನೆಯಲ್ಲೇ ಇರಲಿ; ನಾಲಗೆ ಹರಿಬಿಟ್ಟ ಸಿಪಿಎಂ ನಾಯಕನ ವಿರುದ್ಧ ಆಕ್ರೋಶ
CPM leader Political controversy: ಕೇರಳದಲ್ಲಿ ಸಿಪಿಎಂ ನಾಯಕನೊಬ್ಬ ಮಹಿಳೆಯರ ಕುರಿತು ಅಶ್ಲೀಲ ಹಾಗೂ ಅವಮಾನಕಾರಿ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಕಾರಣರಾಗಿದ್ದಾರೆ. ಮಹಿಳೆಯರು ಮನೆಯಲ್ಲೇ ಕುಳಿತು ಗಂಡನ ಜತೆ ಮಲಗಿ ಮಕ್ಕಳನ್ನು ಹೆರಬೇಕು ಎಂಬ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಖಂಡನೆಗೆ ಕಾರಣವಾಗಿದೆ.
ಸಯೀದ್ ಅಲಿ ಮಜೀದ್ ಭಾಷಣ -
ತಿರುವನಂತಪುರ, ಡಿ. 15: ಕಳೆದ ವಾರ ನಡೆದ ಕೇರಳದ ಮಲಪ್ಪುರಂ ಪುರಸಭೆ ಚುನಾವಣೆಯಲ್ಲಿ 47 ಮತಗಳ ಅಂತರದಿಂದ ಸಿಪಿಎಂ ಜಯಗಳಿಸಿದೆ. ಇದರ ಸಂಭ್ರಮಾಚರಣೆಗಾಗಿ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಡಳಿತಾರೂಢ ಸಿಪಿಎಂ ಸದಸ್ಯ ಸಯೀದ್ ಅಲಿ ಮಜೀದ್ (CPM leader Sayed Ali Majeed) ಮಹಿಳೆಯರ ವಿರುದ್ಧ ನಾಲಗೆ ಹರಿಯಬಿಟ್ಟಿದ್ದಾರೆ. ಸ್ತ್ರೀ ದ್ವೇಷದ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮಹಿಳೆಯರು ಸೇರಿದಂತೆ ನೂರಾರು ಎಡಪಂಥೀಯ ಕಾರ್ಯಕರ್ತರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಕ್ಕಾಗಿ ಮುಸ್ಲಿಂ ಲೀಗ್ ಅನ್ನು ಟೀಕಿಸಿದ್ದಾರೆ. ಪಕ್ಷವು ಮತಗಳಿಗಾಗಿ ಮಹಿಳೆಯರನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರು (ಮುಸ್ಲಿಂ ಲೀಗ್) ಮತಗಳನ್ನು ಸೆಳೆಯಲು ಮಹಿಳೆಯರನ್ನು ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ಸಯೀದ್ ಅಲಿ ಮಜೀದ್ ವಿವಾದಾತ್ಮಕ ಹೇಳಿಕೆ:
'Don’t parade women for votes'; CPM leader in Kerala faces backlash over remarks on women after local body poll victory pic.twitter.com/ql0gTA74jv
— Athique Haneef (@Derwish27683791) December 15, 2025
ಮುಸ್ಲಿಂ ಲೀಗ್‌ನಿಂದ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಗಳ ವಿರುದ್ಧ ಅಸಭ್ಯ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಜೀದ್ ಸಿಪಿಎಂನ ಮಹಿಳೆಯರನ್ನೂ ಅವಮಾನಿಸಿದ್ದಾರೆ. ʼʼನಮ್ಮ ಮನೆಯಲ್ಲೂ ಮದುವೆಯಾದ ಮಹಿಳೆಯರು ಇದ್ದಾರೆ. ಆದರೆ ಮತ ಸೆಳೆಯಲು ಅವರನ್ನು ಪ್ರದರ್ಶಿಸುವುದಿಲ್ಲ. ಅವರು ಮನೆಯಲ್ಲೇ ಕುಳಿತುಕೊಳ್ಳಲಿ. ಮದುವೆಯಾಗುವುದು, ಗಂಡನ ಜತೆ ಮಲಗಲು ಮತ್ತು ಮಕ್ಕಳನ್ನು ಹೆರುವುದು ಮಾತ್ರ ಅವರ ಕೆಲಸʼʼ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗ್ತಾರಾ ನಿತಿನ್ ನಬಿನ್? ಕಾರ್ಯಾಧ್ಯಕ್ಷ ಹುದ್ದೆಯ ಹಿಂದಿದೆ ಮಾಸ್ಟರ್ ಪ್ಲ್ಯಾನ್
ʼʼಮತ ಗಳಿಸಲು ಅಥವಾ ಒಂದು ವಾರ್ಡ್ ಗೆಲ್ಲಲು, ಅವರನ್ನು ಇತರ ಪುರುಷರ ಮುಂದೆ ಮೆರವಣಿಗೆ ಮಾಡಲಾಗುವುದಿಲ್ಲʼʼ ಎಂದು ಮಜೀದ್ ತಮ್ಮ ಭಾಷಣದಲ್ಲಿ ಹೇಳಿದರು. ಚುನಾವಣಾ ಫಲಿತಾಂಶ ಘೋಷಣೆಯ ನಂತರ ಸಿಪಿಎಂ ನಾಯಕ ಈ ಹೇಳಿಕೆಗಳನ್ನು ನೀಡಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಬಳಸಿದ ಭಾಷೆ ಮತ್ತು ವಿಷಯಕ್ಕಾಗಿ ಟೀಕೆಗಳು ವ್ಯಕ್ತವಾಗಿವೆ.
ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಪಿಯೂಷ್ ಗೋಯಲ್ ನೇಮಕ
ಇನ್ನು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಆರು ಮುನ್ಸಿಪಲ್ ಕಾರ್ಪೊರೇಷನ್‌ಗಳ ಪೈಕಿ ನಾಲ್ಕರಲ್ಲಿ ಜಯಗಳಿಸಿತು. ಕಣ್ಣೂರಿನ ಆಡಳಿತವನ್ನು ತನ್ನಲ್ಲಿ ಉಳಿಸಿಕೊಂಡಿತು. ಈ ಹಿಂದೆ ಎಲ್‌ಡಿಎಫ್ ವಶದಲ್ಲಿದ್ದ ಕೊಚ್ಚಿ ಮತ್ತು ಕೊಲ್ಲಂ ಎರಡು ಪುರಸಭೆಗಳನ್ನು ಉರುಳಿಸಿ ಅಧಿಕಾರಕ್ಕೇರಿದೆ.
ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಎಡಪಕ್ಷಗಳ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. 100 ಸದಸ್ಯ ಬಲದ ಕಾರ್ಪೊರೇಷನ್‌ನಲ್ಲಿ, ಸಿಪಿಐ(ಎಂ) 51 ಸ್ಥಾನಗಳನ್ನು, ಬಿಜೆಪಿ ನೇತೃತ್ವದ ಎನ್‌ಡಿಎ 35 ಮತ್ತು ಯುಡಿಎಫ್ 10 ಸ್ಥಾನಗಳನ್ನು ಹೊಂದಿತ್ತು. ಈ ಚುನಾವಣೆಗಳಲ್ಲಿ, ಈಗ 101 ಸ್ಥಾನಗಳೊಂದಿಗೆ, ಎನ್‌ಡಿಎ 50 ಸ್ಥಾನಗಳನ್ನು, ಎಲ್‌ಡಿಎಫ್ 29 ಮತ್ತು ಯುಡಿಎಫ್ 19 ಸ್ಥಾನಗಳನ್ನು ಗೆದ್ದುಕೊಂಡಿತು. ಉಳಿದ ಎರಡು ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.