ದಿನ ಭವಿಷ್ಯ, ಆಗಸ್ಟ್ 7, 2026: ಈ ರಾಶಿಗೆ ಕೆಲಸದ ಹೊರೆ ಹೆಚ್ಚಾದರೂ ಫಲ ಸಿಗುವ ದಿನ!
Horoscope Today August 7th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ನವಮಿ ತಿಥಿ, ಕೃತಿಕಾ ನಕ್ಷತ್ರದ, ಆಗಸ್ಟ್ 7ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ವೈಯಕ್ತಿಕ ವಿಚಾರ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಾಗುತ್ತದೆ. ಅದೇ ರೀತಿ ಕುಟುಂಬದ ಒಳಿತಿಗಾಗಿ ನೀವಿಂದು ಶ್ರಮಿಸಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಪಾರ್ಟ್ನರ್ಸ್ ಶೀಪ್ ವ್ಯವಹಾರ ಹಾಗೂ ಕೆಲಸದಲ್ಲಿ ತೊಂದರೆಗಳು ಎದುರಾಗುತ್ತದೆ. ಮಧ್ಯಾಹ್ನ ಬಳಿಕ ಇದಕ್ಕೆಲ್ಲಾ ಪರಿಹಾರ ಸಿಕ್ಕಿ ಖುಷಿಯಾದ ದಿನ ಕಳೆಯುತ್ತೀರಿ.
ಮಿಥುನ ರಾಶಿ: ಇಂದು ಈ ರಾಶಿಗೆ ಮಧ್ಯಾಹ್ನವರೆಗೂ ಇಷ್ಟಾರ್ಥ ಸಿದ್ದಿಯಾಗುತ್ತದೆ. ನೀವು ಅಂದುಕೊಂಡದ್ದೆಲ್ಲ ಸಿದ್ದಿಯಾಗುತ್ತದೆ. ಆದರೆ ಮಧ್ಯಾಹ್ನ ಬಳಿಕ ಶತ್ರುಗಳಿಂದ ತೊಂದರೆ ಕಾಡಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಆದರೆ ಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯಲಿದ್ದು ಧನ ಆಗಮನದ ಸೂಚನೆಗಳು ಕೂಡ ಇರುತ್ತವೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಆತ್ಮ ವಿಶ್ವಾಸದಿಂದ ಕೈಗೊಂಡ ಕೆಲಸದಲ್ಲಿ ತೊಂದರೆ ಎದುರಾದರೂ ಮಧ್ಯಾಹ್ನ ಬಳಿಕ ಯಶಸ್ಸು ಸಿಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೆ ಇಂದು ಭಾಗ್ಯದಲ್ಲಿ ಏರು ಪೇರು ಆಗಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಹಾಗೂ ಕೆಲಸ ಕಾರ್ಯದಲ್ಲಿ ಯಶಸ್ಸು
Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ
ತುಲಾ ರಾಶಿ: ತುಲಾ ರಾಶಿ ಅವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಶ, ನೊವು ಬೇಸರ ಕಾಡಬಹುದು. ಮಧ್ಯಾಹ್ನ ಬಳಿಕ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುತ್ತೀರಿ.
ವೃಶ್ಚಿಕ ರಾಶಿ: ಈ ರಾಶಿಗೆ ಮಧ್ಯಾಹ್ನವರೆಗೂ ಸಾಮಾಜಿಕ ಚಟುವಟಿಕೆಯಲ್ಲಿ ಬ್ಯುಸಿ ಇರುತ್ತೀರಿ. ಮಧ್ಯಾಹ್ನ ಬಳಿಕ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯುತ್ತೀರಿ
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಮಧ್ಯಾಹ್ನವರೆಗೂ ತೊಂದರೆ. ಹಣಕಾಸಿನ ವಿಚಾರ ಹಾಗೂ ಪ್ರೀತಿ ಪ್ರೇಮದಲ್ಲಿ ಬೇಸರವಾಗಬಹುದು. ಮಧ್ಯಾಹ್ನ ಬಳಿಕ ಶತ್ರುಗಳನ್ನು ಹಿಮ್ಮೆಟ್ಟಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಲೇಷ ಇರುತ್ತದೆ. ಮಧ್ಯಾಹ್ನ ಬಳಿಕ ಹಣಕಾಸಿನ ತೊಂದರೆ ನಿವಾರಣೆ
ಕುಂಭ ರಾಶಿ: ಈ ರಾಶಿಗೆ ಇಂದು ಮಧ್ಯಾಹ್ನವರೆಗು ಎಲ್ಲವು ನಿಮ್ಮ ಪರವಾಗಿ ನಡೆಯಬಹುದು. ಮಧ್ಯಾಹ್ನ ಬಳಿಕ ನಾನಾ ರೀತಿಯ ಜವಾಬ್ದಾರಿ ಹೆಚ್ಚಾಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನ ವರೆಗೆ ತೊಂದರೆ. ಮಧ್ಯಾಹ್ನ ಬಳಿಕ ಕೆಲಸ ಕಾರ್ಯಸಲ್ಲಿ ಯಶಸ್ಸು ಸಿಗುತ್ತದೆ. ಮಾಧ್ಯಮ,ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಲಾಭದಾಯಕವಾಗಿದೆ.