ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಶಿಲಾಯುಗದತ್ತ ಅಮೆರಿಕದ ಆಳುಗರು?

ಅಧ್ಯಕ್ಷೀಯ ಚುನಾವಣೆಗೆ ಪೂರ್ವಭಾವಿಯಾಗಿ ತಾವು ನೀಡಿದ್ದ ಆಶ್ವಾಸನೆ ಯಂತೆ ಅಕ್ರಮ ವಲಸಿಗ ರನ್ನು ತಮ್ಮ ನೆಲದಿಂದ ಗಡಿಪಾರು ಮಾಡುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನಿಲುವು ಸಮರ್ಥನೀ ಯವೇ ಇರಬಹುದು; ಆದರೆ ಅದಕ್ಕಾಗಿ ಅನುಸರಿಸಲಾದ ಮಾರ್ಗ ವಿದೆಯಲ್ಲಾ, ಅದನ್ನು ನಾಗರಿಕ ಸಮಾಜ ಖಂಡಿತ ಒಪ್ಪುವುದಿಲ್ಲ

Vishwavani Editorial: ಶಿಲಾಯುಗದತ್ತ ಅಮೆರಿಕದ ಆಳುಗರು?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Profile Ashok Nayak Feb 8, 2025 5:55 AM

ಇದು ಗೆಲುವಿನ ಅಮಲು ತಂದಿತ್ತ ಧಾರ್ಷ್ಟ್ಯವೇ ಅಥವಾ ಅಸಹಿಷ್ಣುತೆಯ ಪರಮಾವಧಿಯೇ? ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು. ಕರೋನಾ ಮಹಾಮಾರಿಯು ಅಪ್ಪಳಿಸಿದ ನಂತರ ಪರಸ್ಪರ ಸಹಾಯದ ನೆಲೆಯಲ್ಲಿ ಒಂದಿಡೀ ವಿಶ್ವವೇ ಸೌಹಾರ್ದಮಂತ್ರ ಜಪಿಸುವ ಚಿತ್ತಸ್ಥಿತಿಯಲ್ಲಿರುವಾಗ ಅಮೆರಿಕದ ಆಳುಗ ವ್ಯವಸ್ಥೆಯು ತೀರಾ ಅನಾಗರಿಕ ರೀತಿಯಲ್ಲಿ ನಡೆದುಕೊಂಡಿದೆ. ನಿಜ, ಅಕ್ರಮ ವಲಸೆಗಾರಿಕೆಯನ್ನು ಯಾವ ದೇಶವೂ ಸಹಿಸಲಾಗದು ಮತ್ತು ಅಕ್ರಮ ವಲಸಿಗರು ತಂದಿಕ್ಕುವ ಸಮಸ್ಯೆಗಳನ್ನು ಅಷ್ಟು ಸುಲಭಕ್ಕೆ ನೀಗಿಕೊಳ್ಳಲಾಗದು.

ಇದನ್ನೂ ಓದಿ:Vishwavani Editorial: ಕಾಲ್ತುಳಿತದ ಸಾವು ದುರದೃಷ್ಟಕರ

ಈ ಹಿನ್ನೆಲೆಯಲ್ಲಿ, ಅಧ್ಯಕ್ಷೀಯ ಚುನಾ ವಣೆಗೆ ಪೂರ್ವಭಾವಿಯಾಗಿ ತಾವು ನೀಡಿದ್ದ ಆಶ್ವಾಸನೆ ಯಂತೆ ಅಕ್ರಮ ವಲಸಿಗರನ್ನು ತಮ್ಮ ನೆಲದಿಂದ ಗಡಿಪಾರು ಮಾಡುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನಿಲುವು ಸಮರ್ಥನೀಯವೇ ಇರಬಹುದು; ಆದರೆ ಅದಕ್ಕಾಗಿ ಅನುಸರಿಸಲಾದ ಮಾರ್ಗ ವಿದೆಯಲ್ಲಾ, ಅದನ್ನು ನಾಗರಿಕ ಸಮಾಜ ಖಂಡಿತ ಒಪ್ಪುವುದಿಲ್ಲ.

ಅದರಲ್ಲೂ ನಿರ್ದಿಷ್ಟವಾಗಿ, ಅಮೆರಿಕದೊಂದಿಗೆ ಸೌಹಾರ್ದಯುತ ಒಡನಾಟ ಮತ್ತು ವಾಣಿಜ್ಯಿಕ ಬಾಂಧವ್ಯಗಳನ್ನು ಹೊಂದಿರುವ ಭಾರತದ ವಿಷಯದಲ್ಲೂ ಅಮೆರಿಕದ ಆಳುಗ ವ್ಯವಸ್ಥೆ ತೋರಿದ ಧಾರ್ಷ್ಟ್ಯವನ್ನು ಖಂಡಿಸಲೇಬೇಕಿದೆ. 103 ಮಂದಿ ಅಕ್ರಮ ಭಾರತೀಯ ವಲಸಿಗರನ್ನು ಗಡಿಪಾರು ಮಾಡುವ ಕಸರತ್ತಿನ ಭಾಗವಾಗಿ ಅವರಿಗೆ ಕೈಕೋಳ ತೊಡಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂಬುದು ಕೇವಲ ಭಾರತೀಯರ ಪ್ರಶ್ನೆಯಲ್ಲ,

ಅದು ಪ್ರತಿಯೊಬ್ಬ ಸಹೃದಯಿ ಮತ್ತು ಮಾನವತಾವಾದಿಯ ಆಕ್ಷೇಪವೂ ಹೌದು. ಇಂಥದೊಂದು ವಿಲಕ್ಷಣ ಕ್ರಮಕ್ಕೆ ಮುಂದಾಗುವುದಕ್ಕೂ ಮೊದಲು, ಅಮೆರಿಕದ ಆಳುಗ ವ್ಯವಸ್ಥೆಗೆ ಭಾರತೀಯರ ಸಂಸ್ಕಾರ ಮತ್ತು ಶ್ರೇಷ್ಠ ಪರಂಪರೆಯ ನೆನಪು ಒಂದಿನಿತೂ ಬರಲಿಲ್ಲವೇ? ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂದು ಶುರುವಿನಿಂದಲೂ ಹೇಳಿಕೊಂಡೇ ಬಂದ ಟ್ರಂಪ್‌ರಿಗೆ ಎಲ್ಲಕ್ಕಿಂತ ಮೊದಲಿಗೆ ಅಮೆರಿಕನ್ನರ ವಿಶ್ವಾಸ ಗಳಿಸಿ ‘ಹವಾ’ ಸೃಷ್ಟಿಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಇಂಥ ಅತಿರೇಕಗಳು ಹೊಮ್ಮಿರಬಹುದು. ಆದರೆ ಇದೇ ನಡೆಯೇ ಅವರಿಗೆ ದುಬಾರಿಯಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ!