SRH vs PBKS: 75 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಮೊಹಮ್ಮದ್ ಶಮಿ!
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವೇಗಿ ಮೊಹಮ್ಮದ್ ಶಮಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಶಮಿ ನಾಲ್ಕು ಓವರ್‌ಗಳಿಗೆ ಬರೋಬ್ಬರಿ 74 ರನ್‌ಗಳನ್ನು ಕೊಟ್ಟಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಭಾರತೀತ ಬೌಲರ್ ಎನಿಸಿಕೊಂಡಿದ್ದಾರೆ.

75 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಮೊಹಮ್ಮದ್ ಶಮಿ.

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವೇಗಿ ಮೊಹಮ್ಮದ್ ಶಮಿ (Mohammed Shami) 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಶನಿವಾರ ಪಂಜಾಬ್ ಕಿಂಗ್ಸ್ ವಿರುದ್ದದ ಹದಿನೆಂಟನೇ ಆವೃತ್ತಿಯ 27ನೇ ಪಂದ್ಯದಲ್ಲಿ ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ ಬರೋಬ್ಬರಿ 75 ರನ್‌ಗಳನ್ನು ಬಿಟ್ಟುಕೊಟ್ಟರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಭಾರತೀಯ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಮೊಹಮ್ಮದ್ ಶಮಿ ಬರೆದಿದ್ದಾರೆ. ತಮ್ಮ ಬೌಲಿಂಗ್‌ನ ಕೊನೆಯ ಓವರ್‌ನಲ್ಲಿ ಶಮಿ, ಮಾರ್ಕಸ್ ಸ್ಟೋಯ್ನಿಸ್‌ಗೆ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟರು.
ಸನ್‌ರೈಸರ್ಸ್ ಪರ ಮೊಹಮ್ಮದ್ ಶಮಿ 20ನೇ ಓವರ್ ಬೌಲ್ ಮಾಡಿದ್ದರು. ಈ ಓವರ್‌ನಲ್ಲಿ, ಪಂಜಾಬ್ ಕಿಂಗ್ಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಬಿರುಗಾಳಿಯ ರೀತಿಯಲ್ಲಿ ಬ್ಯಾಟ್ ಮಾಡಿ ಕೊನೆಯ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಶಮಿ ತಮ್ಮ ಕೊನೆಯ ಓವರ್‌ನಲ್ಲಿ ಒಟ್ಟು 27 ರನ್‌ಗಳನ್ನು . ಆ ಮೂಲಕ ಅನಗತ್ಯ ದಾಖಲೆಯನ್ನು ಬರೆದಿದ್ದಾರೆ. ಶಮಿಗಿಂತ ಮೊದಲು ಈ ದಾಖಲೆ ಮೋಹಿತ್ ಶರ್ಮಾ ಹೆಸರಿನಲ್ಲಿತ್ತು. 2024ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದ ಮೋಹಿತ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್‌ಗಳಲ್ಲಿ 73 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದೀಗ ಈ ಅನಗತ್ಯ ದಾಖಲೆಯನ್ನು ಶಮಿಮುರಿದಿದ್ದಾರೆ.
IPL 2025: 120 ರನ್ ಜೊತೆಯಾಟವಾಡಿ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್-ಸಾಯಿ ಸುದರ್ಶನ್!
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಭಾರತೀಯ ಬೌಲರ್ಸ್
0/75 - ಮೊಹಮ್ಮದ್ ಶಮಿ (ಎಸ್‌ಆರ್‌ಎಸ್) vs ಪಂಜಾಬ್ ಕಿಂಗ್ಸ್, ಹೈದರಾಬಾದ್, 2025
0/73 - ಮೋಹಿತ್ ಶರ್ಮಾ (ಜಿಟಿ) vs ಡಿಸಿ, ದೆಹಲಿ, 2024
0/70 - ಬಸಿಲ್ ಥಂಪಿ (ಎಸ್‌ಆರ್‌ಎಚ್) vs ಆರ್‌ಸಿಬಿ, ಬೆಂಗಳೂರು, 2018
0/69 - ಯಶ್ ದಯಾಳ್ (ಜಿಟಿ) vs ಕೆಕೆಆರ್, ಅಹಮದಾಬಾದ್, 2023
IPL 2025: ಅರ್ಧಶತಕ ಸಿಡಿಸಿ ಗುಜರಾತ್ ಟೈಟನ್ಸ್ ಪರ ನೂತನ ದಾಖಲೆ ಬರೆದ ಶುಭಮನ್ ಗಿಲ್!
ಸನ್‌ರೈಸರ್ಸ್ ವಿರುದ್ಧ ಪಂಜಾಬ್‌ನ ಸ್ಪೋಟಕ ಬ್ಯಾಟಿಂಗ್
ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಭರ್ಜರಿ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 66 ರನ್‌ಗಳ ಜೊತೆಯಾಟ ನೀಡಿದರು. ಪ್ರಿಯಾಂಶ್ ಮತ್ತು ಪ್ರಭ್‌ಸಿಮ್ರಾನ್ ಸ್ಪೋಟಕ ಆರಂಭ ನೀಡಿದ ನಂತರ ಔಟಾದರು. ಆದರೆ ನಾಯಕ ಶ್ರೇಯಸ್ ಅಯ್ಯರ್ ಸನ್‌ರೈಸರ್ಸ್ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಅವರು 36 ಎಸೆತಗಳಲ್ಲಿ 82 ರನ್ ಗಳಿಸಿದರೆ, ಮಾರ್ಕಸ್ ಸ್ಟೋಯ್ನಿಸ್ ಕೊನೆಯ ಹಂತದಲ್ಲಿ 11 ಎಸೆತಗಳಲ್ಲಿ 34 ರನ್ ಸಿಡಿಸಿದ್ದರು.
ಸನ್‌ರೈಸರ್ಸ್ ತಂಡದ ಬೌಲಿಂಗ್ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅತ್ಯಂತ ಯಶಸ್ವಿ ಬೌಲರ್ ಆದರು. ಹರ್ಷಲ್ ನಾಲ್ಕು ಓವರ್‌ಗಳ ಅವಧಿಯಲ್ಲಿ 42 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು. ಇದಲ್ಲದೆ, ಇಶಾನ್ ಮಾಲಿಂಗ 2 ವಿಕೆಟ್ ಪಡೆದರು. ಈ ಇಬ್ಬರು ಬೌಲರ್‌ಗಳನ್ನು ಹೊರತುಪಡಿಸಿ, ಪಂಜಾಬ್ ಕಿಂಗ್ಸ್ ವಿರುದ್ಧ ಬೇರೆ ಯಾರೂ ಪರಿಣಾಮಕಾರಿಯಾಗಿ ಬೌಲ್ ಮಾಡಲಿಲ್ಲ.