IPL 2026: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಿದ ಚೆನ್ನೈ ಸೂಪರ್ ಕಿಂಗ್ಸ್
Updated IPL 2026 Points Table: ಇಂದು ಕೂಡ ಎರಡು ಪಂದ್ಯಗಳು ನಡೆಯಲಿವೆ. ಹಗಲು ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾದರೆ, ರಾತ್ರಿಯ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಸೆಣೆಸಾಟ ನಡೆಸಲಿವೆ.
Chennai Super Kings -
ಚೆನ್ನೈ, ಎ.12: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡವು ಐಪಿಎಲ್‌ನ ಹಾಲಿ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸುವ ಮೂಲಕ ಅಂಕಪಟ್ಟಿ(Updated IPL 2026 Points Table)ಯಲ್ಲಿ ಒಂದು ಸ್ಥಾನದ ಜಿಗಿತ ಕಂಡಿದೆ. ಕೊನೆಯ ಸ್ಥಾನದಲ್ಲಿದ್ದ ಚೆನ್ನೈ ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕೋಲ್ಕತಾ ನೈಟ್‌ರೈಡರ್ಸ್ ತಂಡ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಪೋಟಕ ಶತಕ, ಜೇಮಿ ಓವರ್‌ಟನ್ ಮಾರಕ ದಾಳಿಯ ನೆರವಿನಿಂದ ಚೆನ್ನೈ 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದು ಸಿಎಸ್‌ಕೆ ಪಾಲಿಗೆ ಮೊದಲ ಗೆಲುವಾಗಿದ್ದರೇ, ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಎರಡನೇ ಸೋಲು ಎನಿಸಿಕೊಂಡಿತು. ಸೋಲು ಕಂಡರೂ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಸತತ 4 ಗೆಲುವು ಸಾಧಿಸಿ ಅಜೇಯವಾಗಿರುವ ರಾಜಸ್ಥಾನ್ ರಾಯಲ್ಸ್ ತಂಡ 8 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದೆ. 7 ಅಂಕ ಕಲೆಹಾಕಿರುವ ಪಂಜಾಬ್ ಕಿಂಗ್ಸ್ ಎರಡನೇ ಮತ್ತು ಆರ್‌ಸಿಬಿ(4 ಅಂಕ) ಮೂರನೇ ಸ್ಥಾನದಲ್ಲಿದೆ.
ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾದ ವೈಭವ್ ಸೂರ್ಯವಂಶಿ(200) ಮತ್ತು ರವಿ ಬಿಷ್ಣೋಯ್(9) ಕ್ರಮವಾಗಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
Pick your 4 for the playoffs. pic.twitter.com/zavuJwx1cF
— Cricketopia (@CricketopiaCom) April 11, 2026
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 212 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಇಂಗ್ಲೆಂಡ್‌ನ ವೇಗಿ ಜೇಮಿ ಓವರ್ಟನ್ (18ಕ್ಕೆ 4) ಮತ್ತು ಅನ್ಶುಲ್ ಕಂಬೋಜ್ (35ಕ್ಕೆ 3) ಕಡಿವಾಣ ಹಾಕಿದರು. ಇದರಿಂದಾಗಿ ನಿಗದಿತ ಓವರ್‌ಗಳಲ್ಲಿ 189 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಡೆಲ್ಲಿ ಪರ ಟ್ರಿಸ್ಟನ್ ಸ್ಟಬ್ಸ್ (60) ಏಕಾಂಗಿ ಹೋರಾಟ ನಡೆಸಿದರು.
CSK vs DC: ಶತಕ ಸಿಡಿಸಿ ಧೋನಿಯ ಸಾರ್ವಕಾಲಿಕ ಐಪಿಎಲ್ ದಾಖಲೆ ಮುರಿದ ಸಂಜು ಸ್ಯಾಮ್ಸನ್
ಇಂದಿನ ಪಂದ್ಯ
ಇಂದು ಕೂಡ ಎರಡು ಪಂದ್ಯಗಳು ನಡೆಯಲಿವೆ. ಹಗಲು ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾದರೆ, ರಾತ್ರಿಯ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಸೆಣೆಸಾಟ ನಡೆಸಲಿವೆ.