ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಏಕವಚನದಲ್ಲಿ ಕಿತ್ತಾಡಿಕೊಂಡ ಆಸೀಸ್‌ ಆಟಗಾರರು

ಶನಿವಾರ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಹೈದರಾಬಾದ್‌ ತಂಡ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಬ್ಯಾಟಿಂಗ್‌ ಪ್ರದರ್ಶಿಸಿ 6 ವಿಕೆಟಿಗೆ 245 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ಸುಂಟರಗಾಳಿಯಂಥ ಬ್ಯಾಟಿಂಗ್‌ ನಡೆಸಿ 18.3 ಒವರ್ ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಏಕವಚನದಲ್ಲಿ ಕಿತ್ತಾಡಿಕೊಂಡ ಆಸೀಸ್‌ ಆಟಗಾರರು; ಇಲ್ಲಿದೆ ವಿಡಿಯೊ

Profile Abhilash BC Apr 13, 2025 10:51 AM

ಹೈದರಾಬಾದ್‌: ಶನಿವಾರದ ರನ್‌ ಮಳೆಯ ಐಪಿಎಲ್‌(IPL 2025) ಪಂದ್ಯದಲ್ಲಿ ಆಸೀಸ್‌ ಆಟಗಾರರಾದ ಟ್ರಾವಿಸ್‌ ಹೆಡ್‌(Travis Head) ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌(Glenn Maxwell) ಕಿತ್ತಾಡಿಕೊಂಡ ಘಟನೆಯ ವಿಡಿಯೊ ವೈರಲ್‌ ಆಗಿದೆ. ಅಬ್ಬರ ಬ್ಯಾಟಿಂಗ್‌ ಮೂಲಕ ರನ್‌ ಕಲೆ ಹಾಕುತ್ತಿದ್ದ ಹೆಡ್‌, ಮ್ಯಾಕ್ಸ್‌ವೆಲ್‌ ಅವರ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ ಬಾರಿಸಿದರು. ಇದರಿಂದ ಕೋಪಗೊಂಡ ಮ್ಯಾಕ್ಸ್‌ವೆಲ್‌ ಹೆಡ್‌ಗೆ ಏಕವಚನದಲ್ಲಿ ಬೈದು ಚೆಂಡನ್ನು ಎಸೆದಂತೆ ಸನ್ನೆ ಮಾಡಿದರು. ತಾಳ್ಮೆ ಕಳೆದುಕೊಂಡ ಹೆಡ್‌ ಓವರ್‌ ಮುಕ್ತಾಯಕ ಬಳಿಕ ಮ್ಯಾಕ್ಸ್‌ವೆಲ್‌ ಕಡೆ ಬಂದು ವಾಗ್ವಾದಕ್ಕಿಳಿದರು. ಈ ವೇಳೆ ಮಾರ್ಕಸ್‌ ಸ್ಟೋಯಿನಿಸ್‌(Marcus Stoinis) ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

ಪಂದ್ಯ ಮುಕ್ತಾಯದ ಬಳಿಕ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಹೆಡ್‌, 'ನೀವು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿರುವಾಗ, ಈ ರೀತಿಯ ಘಟನೆಗಳು ತುಂಬಾ ಗಂಭೀರವಾಗಿ ಇರುವುದಿಲ್ಲ. ಇದೊಂದು ತಮಾಷೆಯಾಗಿ ಮಾತ್ರ ಉಳಿಯಲಿದೆ' ಎಂದರು.



ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ದೊಡ್ಡ ಮೊತ್ತದ ಮೇಲಾಟದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಹೈದರಾಬಾದ್‌ ತಂಡ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಬ್ಯಾಟಿಂಗ್‌ ಪ್ರದರ್ಶಿಸಿ 6 ವಿಕೆಟಿಗೆ 245 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ಸುಂಟರಗಾಳಿಯಂಥ ಬ್ಯಾಟಿಂಗ್‌ ನಡೆಸಿ 18.3 ಒವರ್ ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ IPL 2025: 40 ಎಸೆತಗಳಲ್ಲಿ ಸ್ಪೋಟಕ ಶತಕ ವಿಶೇಷ ದಾಖಲೆ ಬರೆದ ಅಭಿಷೇಕ್‌ ಶರ್ಮಾ!

ಚೇಸಿಂಗ್‌ ವೇಳೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್‌, ಪಂಜಾಬ್‌ ಬೌಲರ್‌ಗಳ ಮೇಲೆರಗಿ ಸಿಕ್ಸರ್‌ ಮತ್ತು ಬೌಂಡರಿಗಳ ಸುರಿಮಳೆಯನ್ನು ಸುರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 171 ರನ್‌ ಕಲೆ ಹಾಕಿತು.



ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಗುಜರಾತ್‌

ಅಬ್ಬರದ ಬ್ಯಾಟಿಂಗ್‌ ನಡೆಸಿದ ಅಭಿಷೇಕ್‌ ಕೇವಲ 55 ಎಸೆತಗಳಿಂದ 141 ರನ್‌ ಚಚ್ಚಿದರು. ಅವರ ಈ ಸೊಗಸಾದ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ ಬರೋಬ್ಬರಿ 10 ಸಿಕ್ಸರ್‌ ಮತ್ತು 14 ಬೌಂಡರಿ ಸಿಡಿಯಿತು. ಟ್ರಾವಿಸ್‌ ಹೆಡ್‌ 66 ರನ್‌ ಬಾರಿಸಿದರು. ಪಂಜಾಬ್‌ ಪರವಾಗಿ ಆರಂಭಿಕರಾದ ಪ್ರಿಯಾಂಶ್‌ ಆರ್ಯ(36), ಪ್ರಭ್‌ಸಿಮ್ರಾನ್‌ ಸಿಂಗ್‌(42), ನಾಯಕ ಶ್ರೇಯಸ್‌ ಅಯ್ಯರ್‌(82) ಮತ್ತು ಆಸ್ಟ್ರೇಲಿಯಾದ ಮಾರ್ಕಸ್‌ ಸ್ಟೋಯಿನಿಸ್‌(34*) ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದ್ದರು.