ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಕೆಲಸಕ್ಕೂ ಬ್ಯಾಂಕ್ ಬ್ಯಾಲೆನ್ಸ್‌ಗೂ ಹೋಲಿಕೆ ಆಗ್ತಿಲ್ಲ": ಆಫೀಸ್ ಒತ್ತಡಕ್ಕೆ ಬೇಸತ್ತು ರಾಜೀನಾಮೆ ನೀಡಿದ ಜೆನ್-ಜಿ ಉದ್ಯೋಗಿ!

Viral News: ಜೆನ್ ಜಿ ಉದ್ಯೋಗಿಯೊಬ್ಬರು ಕಚೇರಿಯ ಒತ್ತಡ ಹಾಗೂ ಕಡಿಮೆ ಸಂಬಳಕ್ಕೆ ಬೇಸತ್ತು ಕೆಲಸಕ್ಕೆ ರಿಸೈನ್ ನೀಡಿರುವ ಘಟನೆಯೊಂದು ನಡೆದಿದೆ. ಲಕ್ನೋ ಮೂಲದ ಉದ್ಯೋಗಿಯೊಬ್ಬರು ತಮ್ಮ ರಾಜೀನಾಮೆ ಇಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೆಲಸದ ಒತ್ತಡಕ್ಕೆ ಬೇಸತ್ತು ರಾಜೀನಾಮೆ ನೀಡಿದ ಯುವತಿ

ಕೆಲಸದ ಒತ್ತಡಕ್ಕೆ ಬೇಸೆತ್ತು ರಾಜೀನಾಮೆ ನೀಡಿದ ಯುವತಿ -

Profile
Pushpa Kumari May 22, 2026 3:18 PM

ಲಕ್ನೋ, ಮೇ 22: ಇತ್ತೀಚಿನ ದಿನದಲ್ಲಿ ಉತ್ತಮ ಉದ್ಯೋಗ ಸಿಕ್ಕರೂ ಒತ್ತಡದ ಕೆಲಸದ ಬಗ್ಗೆ ದೂರುಗಳು ಕೇಳಿಬರುತ್ತಲೇ ಇವೆ‌ ಆಫೀಸ್ ಟಾರ್ಗೆಟ್, ಮಾನಸಿಕ ಒತ್ತಡ ಹೀಗೆ ನಾನಾ ಕಾರಣದಿಂದ ಕೆಲಸ ತೊರೆದವರು ಅನೇಕರು ಇದ್ದಾರೆ. ಉತ್ತಮ ವೇತನ ಇದ್ದರೂ ಕಚೇರಿ ವಾತಾವರಣಕ್ಕೆ ನೊಂದು ಕೆಲಸಕ್ಕೆ ಗುಡ್ ಬೈ ಹೇಳಿದವರು ಇದ್ದಾರೆ.ಈ ನಡುವೆ ಜೆನ್ ಜಿ ಉದ್ಯೋಗಿಯೊಬ್ಬರು ಕಚೇರಿಯ ಒತ್ತಡ ಹಾಗೂ ಕಡಿಮೆ ಸಂಬಳಕ್ಕೆ ಬೇಸತ್ತು ಕೆಲಸಕ್ಕೆ ರಿಸೈನ್ ನೀಡಿರುವ ಘಟನೆಯೊಂದು ನಡೆದಿದೆ. ಲಕ್ನೋ ಮೂಲದ ಉದ್ಯೋಗಿಯೊಬ್ಬರು ತಮ್ಮ ರಾಜೀನಾಮೆ ಇಮೇಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.

ಲಕ್ನೋದ ಯುವ ಉದ್ಯೋಗಿಯೊಬ್ಬರು ಮಾರ್ಕೆಟಿಂಗ್ ತಂತ್ರಜ್ಞೆಯಾಗಿ ಕೆಲಸ ನಿರ್ವಹಿಸಿದ್ದರು. ಇದೀಗ ಕೆಲಸವನ್ನು ತ್ಯಜಿಸಿ ರಾಜೀನಾಮೆ ಇಮೇಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಮೇಲ್‌ನಲ್ಲಿ, ಗುಪ್ತಾ ಕಂಪನಿಗೆ ಮಾರ್ಚ್ 9, 2026, ಅವರ ಕೊನೆಯ ಕೆಲಸದ ದಿನ ಎಂದು ತಿಳಿಸಿದ್ದಾರೆ. "ನನ್ನ ನಿರ್ಗಮನವನ್ನು ಅಧಿಕೃತವಾಗಿ ಘೋಷಿಸುತ್ತೇನೆ.ನನ್ನ ಕೊನೆಯ ದಿನ ಇಂದು ಇದನ್ನು ನನ್ನ ಅಂತಿಮ ಲಾಗ್-ಔಟ್ ಎಂದು ಪರಿಗಣಿಸಿ" ಎಂದು ಬರೆದಿದ್ದಾರೆ.

ವಿಡಿಯೋ ನೋಡಿ:

ಲಕ್ನೋ ಮೂಲದ ಕಂಟೆಂಟ್ ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ ತಮ್ಮ ಕಚೇರಿಯ ಅತಿಯಾದ ಕೆಲಸದ ಒತ್ತಡಕ್ಕೆ ಹಾಗೂ ಸಂಬಳದ ವಿಚಾರದಲ್ಲಿ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಹಲವು ವಿಚಾರ ಉಲ್ಲೇಖ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಜೀವನಶೈಲಿಯೇ ಬದಲಾಗಿದೆ. ಇಲ್ಲಿನ ವಾತಾವರಣ ಅಂತು ಬಹಳಷ್ಟು ಕೆಟ್ಟು ಹೋಗಿದೆ. ನಾನು ನನ್ನ ದೈನಂದಿನ ಕೆಲಸಗಳನ್ನು ಮತ್ತು ನನ್ನ ಬ್ಯಾಂಕ್ ಖಾತೆಯನ್ನು ನೋಡಿದೆ‌. ಆಮೇಲೆ ನನಗೆ ಅರಿಯವಾಯಿತು.

Viral News: ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ಕಂಪನಿಯಲ್ಲಿನ ಎಲ್ಲಾ ಕೆಲಸಗಳನ್ನು ತಾನು ನಿರ್ವಹಿಸಿದ್ದೇನೆ. ನಾನು ಆ ಕಂಪನಿಯಲ್ಲಿ ಇಡೀ ಕಂಟೆಂಟ್ ಮಾರ್ಕೆಟಿಂಗ್ ವಿಭಾಗವನ್ನು ಒಬ್ಬಳೇ ನಿಭಾಯಿಸುತ್ತಿದ್ದೆ. ಕಂಪನಿಗಳಲ್ಲಿ ಸಮಸ್ಯೆ ಎದುರಾದರೆ ಸುಮ್ಮನೆ ಹೊರಟು ಹೋಗಬಾರದು. ನಾವು ಮೌನವಾಗಿ ಹೋದರೆ ಸಂಸ್ಥೆಗಳಿಗೆ ತಮ್ಮ ತಪ್ಪುಗಳ ಅರಿವಾಗುವುದಿಲ್ಲ"ಎಂದು ಕಿಡಿಕಾರಿದ್ದಾರೆ.ಸದ್ಯ ಕೆಲಸದ ಒತ್ತಡ, ಸಂಬಳ, ಕೆಲಸದ ವಾತಾವರಣ ಕುರಿತು ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಬಳಕೆದಾರರೊಬ್ಬರು ಒಳ್ಳೆಯ ನಿರ್ಧಾರ ಯಾವ ಕಂಪನಿ ಅದು? ಹೆಸರನ್ನು ಬಹಿರಂಗಪಡಿಸಿ" ಎಂದು ಒತ್ತಾಯಿಸಿದ್ದಾರೆ. ಮತ್ತೊಬ್ಬರು ಈಗ ಕಾರ್ಪೊರೇಟ್ ಉದ್ಯೋಗಕ್ಕಿಂತ ಕೃಷಿ,ಕೂಲಿ ಕೆಲಸವೇ ಉತ್ತಮ ಉದ್ಯೋಗ ಎಂದು ಬರೆದಿದ್ದಾರೆ.