ಕಂಪ್ಯೂಟರ್ ಸ್ಕ್ರೀನ್ ಝೂಮ್ ಮಾಡಿ ವೈಯಕ್ತಿಕ ಮೆಸೇಜ್ ಓದ್ತಿದ್ದ ಬಾಸ್! ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡಿದ ಉದ್ಯೋಗಿ!
Viral News: ಮೇಲಾಧಿಕಾರಿಗಳ ವಿಪರೀತ ಕಿರುಕುಳ ಸಹಿಸಲಾಗದೇ ಉತ್ತಮ ಪ್ಯಾಕೇಜ್ ನ ಕೆಲಸಕ್ಕೆ ಗುಡ್ ಬೈ ಹೇಳಿದವರೂ ಇದ್ದಾರೆ. ಇದೀಗ ಕಂಪನಿಯ ಹಗಲು-ರಾತ್ರಿ ಎನ್ನದೆ ದುಡಿಸಿಕೊಳ್ಳುವ ಕಠಿಣ ನಿಯಮಕ್ಕೆ ಬೇಸತ್ತ ಉದ್ಯೋಗಿ ಯೊಬ್ಬರು ಕೊನೆಗೂ ಸಂಸ್ಥೆಗೆ ಗುಡ್‌ಬೈ ಹೇಳಿದ್ದಾರೆ. ಕಂಪನಿಯಲ್ಲಿ ಯಾವ ರೀತಿ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ತಮ್ಮ ಕಠೋರ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇಂಟರ್ ನೆಟ್ ಚಿತ್ರ -
ನವದೆಹಲಿ,ಅ.6: ಇತ್ತೀಚೆಗೆ ತೀವ್ರ ಒತ್ತಡದಿಂದ ಬೇಸತ್ತು ಉದ್ಯೋಗ ತ್ಯಜಿಸಿದವರು ಅನೇಕರು ಇದ್ದಾರೆ. ಅದರಲ್ಲೂ ಮೇಲಾಧಿಕಾರಿಗಳ ವಿಪರೀತ ಕಿರುಕುಳ ಸಹಿಸಲಾಗದೇ ಉತ್ತಮ ಪ್ಯಾಕೇಜ್ ನ ಕೆಲಸಕ್ಕೆ ಗುಡ್ ಬೈ ಹೇಳಿದವರೂ ಇದ್ದಾರೆ. ಇದೀಗ ಕಂಪನಿಯ ಹಗಲು-ರಾತ್ರಿ ಎನ್ನದೆ ದುಡಿಸಿ ಕೊಳ್ಳುವ ಕಠಿಣ ನಿಯಮಕ್ಕೆ ಬೇಸತ್ತ ಉದ್ಯೋಗಿ ಯೊಬ್ಬರು ಕೊನೆಗೂ ಸಂಸ್ಥೆಗೆ ಗುಡ್‌ಬೈ ಹೇಳಿದ್ದಾರೆ. ಕಂಪನಿಯಲ್ಲಿ ಯಾವ ರೀತಿ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ತಮ್ಮ ಕಠೋರ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ (Viral News) ಹಂಚಿಕೊಂಡಿದ್ದಾರೆ.
ಕೆಲಸದ ಸ್ಥಳದಲ್ಲಿ ಎಲ್ಲಿಯವರೆಗೆ ಕಿರಿಕಿರಿ ಅಂದ್ರೆ ಬಾಸ್ ತಮ್ಮ ಡೆಸ್ಕ್‌ಟಾಪ್ ಸ್ಕ್ರೀನ್ ಜೂಮ್ ಮಾಡಲು, ವೈಯಕ್ತಿಕ ಚಾಟ್ ಗಳನ್ನು ಓದಲು ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮರಗಳನ್ನು ಬಳಸಿ ದ್ದಾರೆ. ಅಷ್ಟೇ ಅಲ್ಲದೆ ಪ್ರತಿದಿನ ರಾತ್ರಿ 2 ಗಂಟೆಯವರೆಗೂ ಉದ್ಯೋಗಿಗಳನ್ನು ಕಚೇರಿಯಲ್ಲೇ ಬಲವಂತವಾಗಿ ನಿಲ್ಲಿಸಿ ಕೊಳ್ಳಲಾಗುತ್ತಿತ್ತು ಎಂದು ಉದ್ಯೋಗಿ ದೂರಿದ್ದಾರೆ.
ರೆಡ್ಡಿಟ್‌ನಲ್ಲಿ, ಉದ್ಯೋಗಿ "ತಾನು ಕೊನೆಗೂ ಭೂಮಿಯ ಮೇಲಿನ ಅತ್ಯಂತ ಮನೋವಿಕೃತ ಕೆಲಸದ ಸ್ಥಳದಿಂದ ತಪ್ಪಿಸಿಕೊಂಡೆ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರುಕೆಲಸಕ್ಕೆ ರಾಜೀನಾಮೆಯನ್ನು ನೀಡಲು ಕಾರಣವೇನು ಎಂಬುದರ ಬಗ್ಗೆ ದೀರ್ಘವಾಗಿ ಮಾತನಾಡಿದ್ದಾರೆ.
Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ಕಂಪನಿಯ ಬಾಸ್ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಿ ಉದ್ಯೋಗಿಗಳ ಕಂಪ್ಯೂಟರ್ ಸ್ಕ್ರೀನ್‌ಗಳನ್ನು ಝೂಮ್ ಇನ್ ಮಾಡಿ ನೋಡುತ್ತಿದ್ದರು. ಉದ್ಯೋಗಿಗಳ ವೈಯಕ್ತಿಕ ಚಾಟ್ ಗಳನ್ನು ನೋಡುವುದ, ಹಾಗೂ ಕೀಬೋರ್ಡ್‌ನಲ್ಲಿ ನಡೆಯುವ ಪ್ರತಿಯೊಂದು ಟೈಪಿಂಗ್ ನಲ್ಲೂ ಕಣ್ಣೀಡುತ್ತಿದ್ದರು. ಇದು ತಮ್ಮ ಬಾಸ್ ನ ಕೆಟ್ಟ ಅಭ್ಯಾಸ ಎಂದು ಹೇಳಿದ್ದಾರೆ.
ಅಲ್ಲದೇ ಯಾವುದೇ ಸರ್ಕಾರಿ ರಜೆಗಳಿಲ್ಲದೆ ವಾರದ ಏಳೂ ದಿನಗಳ ಕಾಲ ಕೆಲಸ ಮಾಡಿಸಲಾಗುತ್ತಿತ್ತು.ಅಷ್ಟೇ ಅಲ್ಲದೆ, ರಾತ್ರಿಯವರೆಗೆ ಉದ್ಯೋಗಿಗಳನ್ನು ಕಚೇರಿಯಲ್ಲೇ ಬಲವಂತವಾಗಿ ಉಳಿಸಿಕೊಳ್ಳಲಾಗುತ್ತಿತ್ತು. ಕಚೇರಿಗೆ ಸ್ವಲ್ಪ ತಡವಾಗಿ ಬಂದರೂ ಮಕ್ಕಳಂತೆ ಹೊರಗೆ ನಿಲ್ಲಿಸಿ ಶಿಕ್ಷೆ ನೀಡಲಾಗುತ್ತಿತ್ತು.
ಇಂತಹ ತೀವ್ರ ಮಾನಸಿಕ ಕಿರುಕುಳದಿಂದ ಬೇಸತ್ತ ಉದ್ಯೋಗಿ, ತಮಗಾದ ಎಲ್ಲಾ ಅನ್ಯಾಯಗಳನ್ನು ಇಮೇಲ್ ಮೂಲಕ ಬರೆದು ಕಳುಹಿಸಿದ್ದಾರೆ. ಮರುದಿನ ಬೆಳಿಗ್ಗೆ ಬಾಸ್ ನಿದ್ದೆಯಲ್ಲಿದ್ದಾಗ ಕಚೇರಿಯಿಂದ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೊರನಡೆದಿದ್ದಾರೆ. ಸದ್ಯ ಉದ್ಯೋಗಿಯ ಈ ಧೈರ್ಯದ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಳಕೆದಾರ ರೊಬ್ಬರು ಇಂತಹ ಕಂಪನಿಯಿಂದ ಹೊರಬರುವುದೇ ಸೂಕ್ತ ಎಂದು ಕಾಮೆಂಟ್ ಮಾಡಿದ್ದಾರೆ.