ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೀನಾದಲ್ಲೂ ಇದೆ ತ್ಯಾಜ್ಯಗಳ ರಾಶಿ: ಭಾರತದ ಸ್ವಚ್ಛತೆಯನ್ನು ಮಾತ್ರ ಯಾಕೆ ಪ್ರಶ್ನಿಸಲಾಗುತ್ತದೆ? ಸಾಕ್ಷಿ ಸಮೇತ ವಿಡಿಯೋ ಹಾಕಿದ ವ್ಲಾಗರ್

Viral News: ಸೋಷಿಯಲ್ ಮೀಡಿಯಾದಲ್ಲಿ ಭಾರತ ಅಂದ್ರೆ ಅಸ್ವಚ್ಛತೆಯ ಕೇಂದ್ರ ಎಂದೇ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದವರು ಇದ್ದಾರೆ. ಆದರೆ ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ ಭಾರತೀಯ ಬ್ಲಾಗರ್‌ ಒಬ್ಬರು ಅಲ್ಲಿನ ಕೊಳಕು ರಸ್ತೆಯ ಬಗ್ಗೆ ತೋರಿಸಿ ಭಾರತವನ್ನು ಮಾತ್ರ ಕೊಳಕು ಎಂಬಂತೆ ನೋಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಚೀನಾದಲ್ಲೂ ಇದೆ ಕೊಳಕು ರಸ್ತೆ: "ಭಾರತವೇ ಮೇಲು' ಎಂದ ವ್ಲಾಗರ್‌

ಇಂಟರ್ ನೆಟ್ ಚಿತ್ರ -

Profile
Pushpa Kumari Oct 7, 2026 3:51 PM

ಗುವಾಂಗ್‌ಝೌ,ಅ.7: ವಿದೇಶಿ ಪ್ರವಾಸಿಗರು ಭಾರತದ ಐತಿಹಾಸಿಕ ಸ್ಥಳಗಳ ಬಗ್ಗೆ ಕೊಂಡಾಡಿದರೂ ಇಲ್ಲಿನ ನೈರ್ಮಲ್ಯ ಬಗ್ಗೆ ದೂರಿದವರು ಅನೇಕರು ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Viral News) ಭಾರತ ಅಂದ್ರೆ ಅಸ್ವಚ್ಛತೆಯ ಕೇಂದ್ರ ಎಂದೇ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದವರು ಇದ್ದಾರೆ. ಆದರೆ ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ ಭಾರತೀಯ ವ್ಲಾಗರ್‌ ಒಬ್ಬರು ಅಲ್ಲಿನ ಕೊಳಕು ರಸ್ತೆಯ ಬಗ್ಗೆ ತೋರಿಸಿ ಭಾರತವನ್ನು ಮಾತ್ರ ಕೊಳಕು ಎಂಬಂತೆ ನೋಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ಮತ್ತು ಸ್ವಚ್ಛತೆಯ ಕೊರತೆಯ ವಿಷಯದಲ್ಲಿ ಭಾರತವು ಆಗಾಗ್ಗೆ ಪ್ರವಾಸಿಗರಿಂದ ಟೀಕೆಗೆ ಒಳಗಾಗುತ್ತದೆ. ಆದರೆ, ಚೀನಾದಲ್ಲಿ ಕಿರಿದಾದ ಮತ್ತು ಕಸ ತುಂಬಿದ ದಾರಿಯನ್ನು ಕಂಡ ಭಾರತೀಯ ವ್ಲಾಗರ್‌ವೊಬ್ಬರು ಇಲ್ಲಿನ ಪರಿಸ್ಥಿತಿಯೂ ಹೀಗೆಯೇ ಎಂದು ವಿಡಿಯೊದಲ್ಲಿ ತೋರಿಸಿದ್ದಾರೆ.

ಪ್ರಣವ್ ಕರಾದ್ ಎಂಬ ಯುವಕ ಚೀನಾದ ಗುವಾಂಗ್‌ಝೌನ ಪ್ರದೇಶದ ಬೀದಿಗಳಲ್ಲಿ ನಡೆಯುವಾಗ ಅಲ್ಲಿನ ದೃಶ್ಯಗಳನ್ನು ಸೆರೆಹಿಡಿದು, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ‌ "ನಿಜ ಹೇಳಬೇಕೆಂದರೆ, ನಾನು ಭಾರತದ ಬೀದಿಗಳಲ್ಲಿ ಓಡಾಡುತ್ತಿರುವಂತೆ ಅನಿಸುತ್ತಿದೆ. ರಸ್ತೆಗಳು ಒಂದೇ ರೀತಿಯಾಗಿವೆ, ಕಟ್ಟಡಗಳ ರಚನೆಯೂ ಒಂದೇ ಆಗಿದೆ," ಎಂದು ಅವರು ವಿಡಿಯೋದ ಆರಂಭದಲ್ಲಿ ಹೇಳಿದ್ದಾರೆ.

ವಿಡಿಯೋ ನೋಡಿ:

ಇಕ್ಕಟ್ಟಾದ ದಾರಿ, ಕಟ್ಟಡಗಳ ಗೋಡೆಗಳ ಮೇಲೆ ಹಾಕಿರುವ ಜಾಹೀರಾತು ಪೋಸ್ಟರ್‌ಗಳು, ಅಲ್ಲಲ್ಲಿ ಬಿದ್ದಿರುವ ವಿದ್ಯುತ್ ವೈರ್‌ಗಳು ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ಪ್ರಣವ್ ತೋರಿಸಿದ್ದಾರೆ. ಇಲ್ಲಿನ ಕಟ್ಟಡಗಳು, ರಸ್ತೆಗಳು ಎಲ್ಲವೂ ನಮಗಿಂತ ಭಿನ್ನವಾಗಿಲ್ಲ. ಭಾರತದ ಸ್ಥಳೀಯ ಮಾರುಕಟ್ಟೆಗಳೇ ಇದಕ್ಕಿಂತ ಉತ್ತಮವಾಗಿವೆ.ಆದರೆ ಚೀನಾದ ಮಾರುಕಟ್ಟೆಗಳು ಕೂಡ ಹೀಗಿರುತ್ತವೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ಚೀನಾದಂತ ಪ್ರತಿಷ್ಠಿತ ನಗರದಲ್ಲೂ ಇಂತಹ ಅಸ್ವಚ್ಛ ಬೀದಿಗಳಿದ್ದರೂ ಭಾರತವನ್ನು ಮಾತ್ರೇಕೆ 'ಅತಿ ಹೆಚ್ಚು ಕೊಳಕು ದೇಶ' ಎಂದು ಬಿಂಬಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಪ್ರತಿಯೊಂದು ದೇಶದಲ್ಲೂ ಕೊಳಕು ಬೀದಿಗಳು ಇದ್ದೇ ಇರುತ್ತವೆ. ಆದರೆ ಭಾರತದ ಕೊಳಕು ಭಾಗವನ್ನು ಮಾತ್ರ ಹೈಲೈಟ್ ಮಾಡಿ ಬಿಂಬಿಸಲಾಗುತ್ತದೆ ಅಂದರು. ಮತ್ತೊಬ್ಬರು ಭಾರತದ ಶೇಕಡಾ 90 ರಷ್ಟು ಬೀದಿಗಳು ಇದಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿವೆ. ಕೇವಲ ಒಂದು ಬೀದಿಯನ್ನು ನೋಡಿ ಚೀನಾವನ್ನು ಭಾರತಕ್ಕೆ ಹೋಲಿಸಲು ಸಾಧ್ಯವಿಲ್ಲ,ಇದನ್ನು ನಾವು ಒಪ್ಪಿಕೊಳ್ಳಲೇ ಬೇಕು ಎಂದು ಬರೆದಿದ್ದಾರೆ.