ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದುವೆಯಾದ 2 ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವರನ ಕುಟುಂಬಕ್ಕೆ ಶಾಕ್‌

ಉತ್ತರ ಪ್ರದೇಶದ ಈಕೆಗೆ ಫೆ. 24ರಂದು ಮದುವೆಯಾಗಿದೆ. ಫೆ. 25ರ ಸಂಜೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯ ಪತಿ ತಕ್ಷಣ ಆಕೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆ ತುಂಬು ಗರ್ಭಿಣಿ ಎಂಬುದನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

ಮದುವೆಯಾದ ಎರಡನೇ ದಿನಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ

Profile Sushmitha Jain Mar 6, 2025 10:54 PM

ಲಖನೌ: ಮದುವೆಯಾದ ಕೇವಲ ಎರಡು ದಿನಗಳ ಬಳಿಕ ಮಹಿಳೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಷಯ ತಿಳಿದ ವರನ ಕುಟುಂಬ ಶಾಕ್​​ಗೆ ಒಳಗಾಗಿದೆ (Viral News). ಈ ಘಟನೆ ಉತ್ತರಪ್ರದೇಶದಲ್ಲಿ ನೆಡೆದಿದೆ. ಹೌದು ಫೆಬ್ರವರಿ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಧು ತಾಯಿಯಾಗಿದ್ದು, ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿತ್ತು. ಆದರೆ ವಿವಾಹವಾಗಿ ಗಂಡನ ಮನೆ ಸೇರಿದ್ದ ವಿವಾಹಿತೆಗೆ ಫೆಬ್ರವರಿ 25ರ ರಾತ್ರಿ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹುಡುಗಿಗೆ ಅನಾರೋಗ್ಯಕ್ಕೆ ಕಾಣಿಸಿಕೊಂಡಿದೆ ಎಂದು ಮನೆಯವರು ಗಾಬರಿಗೊಂಡರು. ತಕ್ಷಣವೇ ಆಕೆಯನ್ನು ಸ್ಥಳೀಯ ಕರ್ಚನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಚಿಕಿತ್ಸೆಗೆ ಎಂದು ಕರೆದುಕೊಂಡು ಹೋಗಲಾಯಿತು.



ಆದರೆ ಇಲ್ಲಿ ಹುಡುಗಿ ಗರ್ಭಿಣಿ ಎಂದು ತಿಳಿದು ಬಂದಿದ್ದು, ಆಕೆಗೆ ಕಾಣಿಸಿಕೊಂಡಿರುವುದು ಪ್ರಸವದ ಹೊಟ್ಟೆ ನೋವು ಎಂದು ಗೊತ್ತಾಗಿದೆ. ಅಲ್ಲದೇ ಆಕೆಗೆ ಕೂಡಲೇ ಹೆರಿಗೆ ಮಾಡಬೇಕೆಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಚಲಿಸುವ ರೈಲಿನಿಂದ ಕಸ ಎಸೆದ ಸಿಬ್ಬಂದಿಗೆ ಬಿತ್ತು ಭಾರೀ ದಂಡ; ವಿಡಿಯೊ ನೋಡಿ
ಇದನ್ನು ಕೇಳಿದ ಆಕೆಯ ಗಂಡ ಮತ್ತು ಅವನ ಕುಟುಂಬದವರು ವಿಚಲಿತರಾಗಿದ್ದಾರೆ. ಈ ಸುದ್ದಿ ಕೇಳಿ ವರನ ಕುಟುಂಬಸ್ಥರು ಶಾಕ್ ಕೂಡ ಆಗಿದ್ದಾರೆ. ಇದರಿಂದ ಎರಡು ಕುಟುಂಬಗಳ ಮಧ್ಯೆ ವಾದ-ವಿವಾದ ನಡೆದಿದ್ದು, ವಾಗ್ವಾದಿಂದ ವೈಮನಸ್ಸು ಉಂಟಾಗಿದೆ. ಅಲ್ಲದೇ ವರ ಈ ಮಗು ನನ್ನದಲ್ಲ ಎಂದು ಹೇಳಿ ಹೆಂಡತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ.

ಇನ್ನು ಮದುಮಗನ ಸಹೋದರಿ ಈ ಕುರಿತು ಪ್ರಕ್ರಿಯೆ ನೀಡಿದ್ದು, ಹುಡುಗಿ ಕಡೆಯವರು ನಮಗೆ ಅನ್ಯಾಯ ಮಾಡಿದ್ದಾರೆ. ಅವರ ಮೊದಲ ರಾತ್ರಿಯೂ ನಡೆದಿಲ್ಲ ಎಂದು ಹೇಳಿದ್ದು, ನನ್ನ ಸಹೋದರನಿಂದ ಆಕೆ ಅಂತರ ಕಾಯ್ದು ಕೊಂಡಿದ್ದಳು. ಆದರೆ ಮರುದಿನವೇ ಮಗುವಿನ ಜನ್ಮ ನೀಡಿದ್ದಾಳೆ. ಹುಡುಗ-ಹುಡುಗಿ ಮಧ್ಯೆ ಮೊದಲಿಂದಲೂ ಯಾವುದೇ ಪರಿಚಯವಿರಲಿಲ್ಲ. ಹೀಗಾಗಿ ಆ ಮಗುವಿನ ನಿಜವಾದ ತಂದೆ ಯಾರು ಅಂತ ಅವರು ನಮಗೆ ತಿಳಿಸಬೇಕು ಎಂದು ತಾಕೀತು ಮಾಡಿದ್ದಾರೆ.

ವರನ ಕುಟುಂಬ ವಧುವನ್ನು ಸ್ವೀಕರಿಸಲು ನಿರಾಕರಿಸಿದ್ದು, ಹುಡುಗ ಕೂಡ ಹುಡುಗಿಯನ್ನು ಹೆಂಡತಿ ಎಂದು ಒಪ್ಪಿಕೊಂಡು ಸಂಬಂಧ ಮುಂದುವರೆಸಲು ಸಾಧ್ಯವಿಲ್ಲ ಎಂದಿದ್ದಾನೆ. ಸದ್ಯ ಹುಡುಗಿ ಮಗುವಿನೊಂದಿಗೆ ತವರು ಸೇರಿದ್ದಾಳೆ.