Accident: ಒಂದೇ ದಿನದ ಅಂತರದಲ್ಲಿ ಸೇಮ್ ಸ್ಪಾಟ್‌ನಲ್ಲಿ ಎರಡೆರಡು ಆಕ್ಸಿಡೆಂಟ್! – ಎಲ್ಲಿ ಇದು?
ರಸ್ತೆಗಳಲ್ಲಿ ಕೆಲವೊಂದು ಸ್ಪಾಟ್ ಗಳಿರುತ್ತವೆ, ಅಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಂತಹ ಒಂದು ಸ್ಪಾಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಲ್ಲಿ ಒಂದೇ ದಿನದ ಅಂತರದಲ್ಲಿ ಎರಡು ಅಪಘಾತಗಳು ನಡೆದಿವೆ...

ಅಪಘಾತದ ದೃಶ್ಯ

ಲಾತೂರು: ‘ಇಲ್ಲೊಂದು ಸಮಸ್ಯೆ ಖಂಡಿತಾ ಇದೆ..’ ಎನ್ನುವಂತಹ ಸುದ್ದಿ ಇದು! ಯಾಕಂದ್ರೆ ಒಂದೇ ದಿನದ ಅಂತರದಲ್ಲಿ ಈ ಸ್ಥಳದಲ್ಲಿ ಎರಡು ಅಪಘಾತಗಳು ಸಂಭವಿಸಿದೆ. ಅದೂ ಒಂದೇ ಮಾದರಿಯಲ್ಲಿ ಸಂಭವಿಸಿರುವ ಅಪಘಾತಗಳು ಇದಾಗಿದ್ದು, ಈ ಅಪಘಾತದ(Accident) ಸಿಸಿ ದೃಶ್ಯಾವಳಿ ಇದೀಗ ಬೆಚ್ಚಿ ಬೀಳಿಸುವಂತಿದ್ದು, ಎಲ್ಲೆಡೆ ವೈರಲ್(Viral Video) ಆಗುತ್ತಿದೆ. ಮಹಾರಾಷ್ಟ್ರದ ಲಾತೂರ್ ನಲ್ಲಿ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಬರುತ್ತಿದ್ದ ಕಾರೊಂದು, ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್ ಏರಿ ನಿಂತಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ರಸ್ತೆಯ ಇನ್ನೊಂದು ಬದಿಗೆ ಎಸೆಯಲ್ಪಟ್ಟಿದ್ದಾನೆ.
ಈ ಅಪಘಾತ ಕಳೆದ ತಿಂಗಳು ನಡೆದಿರುವುದಾಗಿ ತಿಳಿದು ಬಂದಿದ್ದು, ಚತುಷ್ಪಥ ಹೆದ್ದಾರಿಯಲ್ಲಿ ಬೈಕ್ ಸವಾರನೊಬ್ಬ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಕ್ರಾಸ್ ಮಾಡುತ್ತಿದ್ದ ಸಂದರ್ಭದಲ್ಲಿ ಎದುರು ಭಾಗದಿಂದ ವೇಗವಾಗಿ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಬೈಕ್ ಒಂದು ಬದಿಗೆ ಮತ್ತು ಸವಾರ ರಸ್ತೆಯ ಇನ್ನೊಂದು ಬದಿಗೆ ಬಿದಿದ್ದು, ಕಾರು ಡಿವೈಡರ್ ಏರಿ ನಿಂತಿರುವುದು ಸಿಸಿ ದೃಶ್ಯಾವಳಿಗಳಲ್ಲಿ ಗೋಚರಿಸಿದೆ.
काल जिथे एसटी बसचा अपघात झाला, त्याच ठिकाणी पुन्हा एकदा दुचाकीच्या चुकीमुळे अपघात घडला...
— Rohit Dhende (@avaliyapravasi) March 4, 2025
आता सांगा नेमकी चूक कोणाची...??? https://t.co/xYqm3LmbE9 pic.twitter.com/rVsLAf0ogv
ಈ ಅಪಘಾತದ ಹಿಂದಿನ ದಿನ ಇದೇ ಜಾಗದಲ್ಲಿ ಇನ್ನೊಂದು ಅಪಘಾತ ನಡೆದಿತ್ತು. ಇಲ್ಲಿಯೂ ಸಹ ಬೈಕ ಸವಾರನೊಬ್ಬ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಆ ಕಡೆಯಿಂದ ಬರುತ್ತಿದ್ದ ಮಹರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸು, ಬೈಕಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚತುಷ್ಟಥ ರಸ್ತೆಯ ಇನ್ನೊಂದು ಬದಿಗೆ ಚಲಿಸಿ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ಸು ರಸ್ತೆಗೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಬೈಕ್ ಸವಾರ ಪಾರಾಗಿದ್ದರು ಬಸ್ಸಿನಲ್ಲಿದ್ದ 38 ಜನ ಪ್ರಯಾಣಿಕರು ಗಾಯಗೊಂಡಿದ್ದರು.
ಎರಡೂ ಅಪಘಾತ ಪ್ರಕರಣಗಳಲ್ಲೂ ಘಟನೆಗೆ ಬೈಕ್ ಸವಾರರ ನಿರ್ಲಕ್ಷ್ಯವೇ ಕಾರಣವಾಗಿರುವುದು ಮೇಲ್ನೊಟಕ್ಕೆ ಕಂಡುಬಂದಿದ್ದು, ಹೆದ್ದಾರಿಯನ್ನು ಅವೈಜ್ಞಾನಿಕ ರಿತಿಯಲ್ಲಿ ದಾಟಲು ಯತ್ನಿಸಿದ ಸಂದರ್ಭದಲ್ಲಿ ಈ ಅಪಘಾತಗಳು ಸಂಭವಿಸಿದೆ.
ಇದನ್ನೂ ಓದಿ: Viral Video: ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಬಂದ ಮಹಿಳೆ; ಹೃದಯ ವಿದ್ರಾವಕ ವಿಡಿಯೊ ವೈರಲ್
ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಕ್ರಾಸಿಂಗ್ ಇರುವ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಾರೆ. ಆದರೆ ಇಲ್ಲಿ ಅಂತಹ ಯಾವುದೇ ವ್ಯವಸ್ಥೆಗಳಿಲ್ಲದೇ ಇದ್ದ ಕಾರಣ ಒಂದೇ ದಿನದ ಅಂತರದಲ್ಲಿ ಎರಡು ಅಪಘಾತಗಳು ಸಂಭವಿಸಿದೆ. ಇನ್ನು, ಫೆ.4ರಂದು ಲಾತೂರು – ನಾಂದೇಡ್ ಹೆದ್ದಾರಿಯ ನಂದಗಾಂವ್ ಪಟಿ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಪಶುವೈದ್ಯರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಅಪಘಾತ ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ಕಾರಣ ಬೈಕಿನಲ್ಲಿದ್ದ ಪಶುವೈದ್ಯ ಯಶ್ವಂತ್ ಆನಂದ್ ರಾವ್ ಗರಡ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಎರಡು ಅಪಘಾತದ ವಿಡಿಯೊಗಳು ಇದೀಗ ಸಾಮಾಜಿಕ ಜಾಲಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳಿಯರು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲೊಂದು ಸೂಕ್ತ ವ್ಯವಸ್ಥೆಯನ್ನು ಮಾಡುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ. ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಬಸ್ಸು ಉರುಳಿ ಬಿದ್ದ ಪ್ರಕರಣದಲ್ಲಿ, ಪ್ರತ್ಯಕ್ಷದರ್ಶಿಗಳು ನಿಡಿರುವ ಮಾಹಿತಿಯಂತೆ ವೇಗವಾಗಿ ಬರುತ್ತಿದ್ದ ಬಸ್ಸು ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆಯ ಇನ್ನೊಂದು ಬದಿಗೆ ಹೋಗಿ ಸ್ಕಿಡ್ ಆಗಿ ಬಿದ್ದಿದೆ.
ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಈ ಬಸ್ಸಿನಲ್ಲಿ 48 ಪ್ರಯಾಣಿಕರಿದ್ದರು, ಇವರಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.