Viral Video: ಕುಡಿದ ಮತ್ತಿನಲ್ಲಿ ಯದ್ವಾ-ತದ್ವಾ ಕಾರು ಚಲಾಯಿಸಿ ಮಾಡಿದ ಎಡವಟ್ಟು ಒಮ್ಮೆ ನೋಡಿ- ವಿಡಿಯೊ ವೈರಲ್
ದೇಶದಲ್ಲಿ ಕುಡಿದು ಕಾರು ಚಲಾಯಿಸಿ ಅಮಾಯಕರ ಜೀವಕ್ಕೆ ಅಪಾಯ ತರುವ ಘಟನೆಗಳು ಮರುಕಳಿಸುತ್ತಲೇ ಇವೆ. ಕಳೆದ ವರ್ಷ ಪುಣೆಯಲ್ಲಿ ಅಪ್ರಾಪ್ತನೊಬ್ಬ ಕುಡಿದು ಕಾರು ಚಲಾಯಿಸಿ ಇಬ್ಬರು ಟೆಕ್ಕಿಗಳ ಜೀವ ಬಲಿ ಪಡೆದ ಕರಾಳ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಅಂತಹುದೇ ಒಂದು ಘಟನೆಗೆ ಪುಣೆ ನಗರ ಸಾಕ್ಷಿಯಾಗಿದೆ. ಆ ಅಪಘಾತದ ವಿಡಿಯೊ ಇಲ್ಲಿದೆ

ಅಪಘಾತದ ದೃಶ್ಯ

ಪುಣೆ: ದೇಶದಲ್ಲಿ ಕುಡಿದು ಕಾರು ಚಲಾಯಿಸಿ ಅಮಾಯಕರ ಜೀವಕ್ಕೆ ಅಪಾಯ ತರುವ ಘಟನೆಗಳು ಮರುಕಳಿಸುತ್ತಲೇ ಇವೆ. ಕಳೆದ ವರ್ಷ ಪುಣೆಯಲ್ಲಿ ಅಪ್ರಾಪ್ತನೊಬ್ಬ ಕುಡಿದು ಕಾರು ಚಲಾಯಿಸಿ ಇಬ್ಬರು ಟೆಕ್ಕಿಗಳ ಜೀವ ಬಲಿ ಪಡೆದ ಕರಾಳ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಅಂತಹುದೇ ಒಂದು ಘಟನೆಗೆ ಪುಣೆ ನಗರ ಸಾಕ್ಷಿಯಾಗಿದೆ. ಪುಣೆಯ ಕೊಂಧ್ವಾದಲ್ಲಿರುವ NIBM ರಸ್ತೆಯ RIMS ಶಾಲೆಯ ಬಳಿ ಸೋಮವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಜಾಗರೂಕ ಚಾಲನೆಯ ಆಘಾತಕಾರಿ ಪ್ರಕರಣ ವರದಿಯಾಗಿದೆ. ಈ ಘಟನೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಚಾಲಕನೊಬ್ಬ ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದು, ನಿಂತಿದ್ದ ಸುಜುಕಿ ಬರ್ಗ್‌ಮನ್ ಸ್ಕೂಟರ್ ಮೇಲೆ ಕಾರು ಹತ್ತಿಸಿದ್ದಾನೆ. ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗಿದೆ.
ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ಅಪಘಾತ
ಕಪ್ಪು ಬಣ್ಣದ ಕಾರೊಂದು ಬರ್ಗ್‌ಮನ್ ಸ್ಕೂಟರ್ ಅನ್ನು ಚಕ್ರಗಳ ಕೆಳಗೆ ಪುಡಿಪುಡಿ ಮಾಡುವುದನ್ನು ತೋರಿಸುವ ಅಪಘಾತದ ವೀಡಿಯೊ ಇಂಟರ್ನೆಟ್ ಅಲ್ಲಿ ಕಾಣಿಸಿಕೊಂಡಿದೆ. ಸ್ಥಳೀಯರು ಕಾರು ನಿಲ್ಲಿಸುವಂತೆ ಹಲವಾರು ಬಾರಿ ಕೂಗಿದರೂ ಸಹ, ಅಪಘಾತ ಮಾಡಿದ ಕಾರಿನ ಚಾಲಕ ತಕ್ಷಣ ಸ್ಥಳದಿಂದ ಓಡಿಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಪಘಾತವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯೊಬ್ಬರು ಕಾರಿನ ನಂಬರ್ ಪ್ಲೇಟ್‌ನಲ್ಲಿರುವ "MH12TK1463" ಸಂಖ್ಯೆಯನ್ನು ಕೂಗಿ ಹೇಳುತ್ತಿರುವುದನ್ನು ಕೂಡಾ ಕೇಳಬಹುದಾಗಿದೆ.
ಚಾಲಕ ಸ್ಥಳದಿಂದ ಪರಾರಿಯಾಗುವ ಮೊದಲು ದ್ವಿಚಕ್ರ ವಾಹನ ಮತ್ತು ಎಲ್ಲಾ ವಿತರಣಾ ಸಾಮಗ್ರಿಗಳು ಸಂಪೂರ್ಣವಾಗಿ ನಾಶವಾಗಿದ್ದವು. ಜೀವನೋಪಾಯಕ್ಕಾಗಿ ಹಾಲು ವಿತರಣೆ ಹಾಗೂ ತನ್ನ ಸ್ಕೂಟರ್ ಅನ್ನೇ ನಂಬಿಕೊಂಡಿದ್ದ ವ್ಯಕ್ತಿಯ ಜೀವನ ಕ್ಷಣ ಮಾತ್ರದಲ್ಲಿ ರಸ್ತೆಗೆ ಬಂದಿದೆ. ಪುಣ್ಯಕ್ಕೆ ಆತನ ಜೀವಕ್ಕೆ ಯಾವುದೇ ರೀತಿಯ ಅಪಾಯವಾಗಲಿಲ್ಲ.
Pune Viral Video: Drunk Driver Crashes Into Divider, Wrecks Delivery Man's Bike Near RIMS School On NIBM Road pic.twitter.com/0q7vfL6UaU
— Pune First (@Pune_First) March 17, 2025
ವೇಗವಾಗಿ ಬಂದ ಕಾರು ಅಪಾಯಕಾರಿಯಾಗಿ ಚಲಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ, ನಿಂತಿದ್ದ ಸ್ಕೂಟರ್‌ಗೆ ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಈ ಘಟನೆಯು ನಿವಾಸಿಗಳಲ್ಲಿ ಗಂಭೀರ ಕಳವಳವನ್ನುಂಟುಮಾಡಿದ್ದು, ರಾತ್ರಿಯಲ್ಲಿ ಅಜಾಗರೂಕ ಚಾಲನೆಯ ಘಟನೆಗಳು ಈ ಪ್ರದೇಶದಲ್ಲಿ ಬಹಳಷ್ಟು ಹೆಚ್ಚುತ್ತಿವೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ:Viral Video: ಜೀವಂತ ಜಿರಳೆಯನ್ನು ಹಿಡಿದುಕೊಂಡು ಈ ಮಹಿಳೆ ಮಾಡಿದ್ದೇನು? ವಿಡಿಯೊ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ಪೊಲೀಸರಿಂದ ತನಿಖೆ ಆರಂಭ
ಕುಡಿದು ವಾಹನ ಚಲಾಯಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪುಣೆ ಪೊಲೀಸರಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಗಸ್ತು ಹೆಚ್ಚಿಸುವುದು ಮತ್ತು ಅಪರಾಧಿಗಳಿಗೆ ಕಠಿಣ ದಂಡ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ರಸ್ತೆ ಅಪಘಾತಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ, ಪ್ರಯಾಣಿಕರು ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾಗರಿಕರು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಘಟನೆಯ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ಘಟನೆಗೆ ಕಾರಣವಾದ ಚಾಲಕ ಯಾರು ಮತ್ತು ಆತನ ಮೂಲವನ್ನು ಹುಡುಕಲು ಪೊಲೀಸರು ಶುರು ಹಚ್ಚಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ವಡೋದರದಲ್ಲಿಯೂ ನಡೆದಿತ್ತು ಮತ್ತೊಂದು ದುರ್ಘಟನೆ
ಕೆಲ ದಿನಗಳ ಹಿಂದೆ ಗುಜರಾತ್‌ನ ವಡೋದರದಲ್ಲಿಯೂ ಅತಿ ವೇಗದಿಂದ ಬಂದ ಕಾರೊಂದು ಮಹಿಳೆಯ ಜೀವವನ್ನು ಬಲಿ ಪಡೆದಿದ್ದು, ಹಲವಾರು ಜನರನ್ನು ಗಾಯಗೊಳಿಸಿತ್ತು. ಅಪಘಾತದ ಬಳಿಕ ಕಾರಿನಿಂದ ಇಳಿದ ಚಾಲಕ ಹುಚ್ಚನಂತೆ ಕಿರುಚಾಡುತ್ತಿದ್ದದ್ದನ್ನು ಹಲವಾರು ಜನರು ವಿಡಿಯೋ ಮಾಡಿದ್ದರು. ಬಳಿಕ ಆತನಿಗೆ ಮನಸ್ಸೋಇಚ್ಚೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.