ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಮಾನದಲ್ಲಿ ಪ್ರಯಾಣಿಸಲು ಭಯ; ಪತ್ನಿಗಾಗಿ ಪಂಜಾಬ್‌ನಲ್ಲೇ ಬುರ್ಜ್ ಖಲೀಫಾ ನಿರ್ಮಿಸಿದ ಪತಿ? ಏನಿದು ವೈರಲ್‌ ವಿಡಿಯೊದ ಅಸಲಿಯತ್ತು?

ದುಬೈಗೆ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ವಿಮಾನ ಪ್ರಯಾಣದ ಭಯದಿಂದ ಸಾಧ್ಯ ವಾಗದ ವ್ಯಕ್ತಿಯೊಬ್ಬರು ಕೋಟಿ ಕೋಟಿ ಖರ್ಚು ಮಾಡಿ ಬುರ್ಜ್ ಖಲೀಫಾ ನಿರ್ಮಿಸಿದ್ದಾರೆ ಎಂದು ಹೇಳಲಾಗಿತ್ತು. ಪತ್ನಿಯ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಮನೆಯ ಟೆರೇಸ್ ಮೇಲೆ ಭವ್ಯವಾದ 'ಬುರ್ಜ್ ಖಲೀಫಾ' ಮಾದರಿಯೊಂದನ್ನು ನಿರ್ಮಿಸಿರುವ ಸುದ್ದಿ ಭಾರೀ ವೈರಲ್ ಆಗಿತ್ತು. ಆದರೆ ಈ ಪ್ರೇಮ ಕಥೆಗೆ ಒಂದು ಟ್ವಿಸ್ಟ್ ಸಿಕ್ಕಿದ್ದು ಆ ಮನೆಯ ಮಾಲೀಕನ ಹೇಳಿಕೆಯೇ ಇಡೀ ಪ್ರೇಮಕಥೆಯನ್ನು ತಲೆಕೆಳಗುವಂತೆ ಮಾಡಿದೆ.

ಪತ್ನಿಗಾಗಿ ಬುರ್ಜ್ ಖಲೀಫಾ ನಿರ್ಮಾಣ? ವಿಡಿಯೊದ ಅಸಲಿಯತ್ತೇ ಬೇರೆ

ಬುರ್ಜ್ ಖಲೀಫಾ ಕಟ್ಟಿದ ಪಂಜಾಬ್ ವ್ಯಕ್ತಿ -

Profile
Pushpa Kumari Dec 9, 2025 6:14 PM

ನವದೆಹಲಿ, ಡಿ. 9: ತನ್ನ ಪ್ರೀತಿಯನ್ನು ಮೆಚ್ಚಿಸಲು ಪ್ರಿಯತಮೆಗಾಗಿ, ಮಡದಿಗಾಗಿ ದುಬಾರಿ ಉಡುಗೊರೆಯನ್ನು ನೀಡಿರುವುದನ್ನು ನೀವು ಕೇಳಿರುತ್ತೀರಿ. ಮೊಘಲ್ ಸಾಮ್ರಾಟ ಶಹಜಹಾನ್, ತನ್ನ ಪ್ರೀತಿಯ ಮಡದಿ ಮುಮ್ತಾಜ್‌ಗಾಗಿ ತಾಜ್ ಮಹಲ್‌ ನಿರ್ಮಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಇತ್ತೀಚೆಗಷ್ಟೇ ಮಧ್ಯ ಪ್ರದೇಶದ ವ್ಯಕ್ತಿಯೊಬ್ಬ ತಾಜ್‌ಮಹಲ್ ರೀತಿಯೇ ಐಷಾರಾಮಿ ಮನೆಯೊಂದನ್ನು ನಿರ್ಮಿಸಿ, ಹೆಂಡತಿಗೆ ಉಡುಗೊರೆಯಾಗಿ ನೀಡಿ ಎಲ್ಲರನ್ನೂ ಅಚ್ಚರಿಪಡಿಸಿದ್ದಾರೆ. ಅಂತೆಯೇ ದುಬೈಗೆ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ವಿಮಾನ ಪ್ರಯಾಣದ ಭಯದಿಂದ ವ್ಯಕ್ತಿಯೊಬ್ಬರು ಕೋಟಿ ಕೋಟಿ ರೂ. ಖರ್ಚು ಮಾಡಿ ಬುರ್ಜ್ ಖಲೀಫಾ ನಿರ್ಮಿಸಿದ್ದಾರೆ ಎಂದು ಹೇಳಲಾಗಿತ್ತು. ಪತ್ನಿಯ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಮನೆಯ ಟೆರೇಸ್ ಮೇಲೆ ಭವ್ಯವಾದ 'ಬುರ್ಜ್ ಖಲೀಫಾ' ಮಾದರಿಯೊಂದನ್ನು ನಿರ್ಮಿಸಿರುವ ಸುದ್ದಿ ಭಾರಿ ವೈರಲ್ (Viral Video) ಆಗಿತ್ತು. ಆದರೆ ಈ ಪ್ರೇಮ ಕಥೆಗೆ ಒಂದು ಟ್ವಿಸ್ಟ್ ಸಿಕ್ಕಿದ್ದು, ಆ ಮನೆಯ ಮಾಲೀಕನ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿದೆ.

ಆರಂಭದಲ್ಲಿ ಈ ವಿಡಿಯೊ ಎಲ್ಲರ ಗಮನ ಸೆಳೆದಿತ್ತು. ಪಂಜಾಬ್‌ನ ವ್ಯಕ್ತಿ ಫ್ಲೈಟ್ ಏರಲು ಹೆದರಿ ತಮ್ಮ ಪತ್ನಿಯನ್ನು ದುಬೈಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಆದರೆ ಪತ್ನಿಗೆ ದುಬೈ ನೋಡ ಬೇಕು ಎನ್ನುವ ಆಸೆ ಇತ್ತು. ಹಾಗಾಗಿ, ಆ ಕನಸನ್ನು ನನಸು ಮಾಡಲು ಆ ವ್ಯಕ್ತಿ ತಮ್ಮ ಮನೆಯ ಟೆರೀಸ್ ಮೇಲೆ ತಮ್ಮ ಕೈಯಾರೆಯೇ 'ಬುರ್ಜ್ ಖಲೀಫಾ' ಮಾದರಿಯ ಕಟ್ಟಡ ನಿರ್ಮಿಸಿದ್ದಾರೆ ಎಂದು ಹೇಳಲಾಗಿತ್ತು.

ವಿಡಿಯೊ ನೋಡಿ:

ಸದ್ಯ ಇದರ ವಿಚಾರವೇ ಬೇರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ವತಃ ಮನೆಯ ಮಾಲೀಕರೆ ಸ್ಪಷ್ಟನೆ ನೀಡಿದ್ದಾರೆ. ಸುಖ್ವೀರ್ ಸಿಂಗ್ ಎಂಬ ವ್ಯಕ್ತಿ ಈ ವಿಡಿಯೊ ಹರಿದಾಡುತ್ತಿದ್ದಂತೆ ಒಂದು ಕಮೆಂಟ್ ಮೂಲಕ ಇಡೀ ಕಥೆಯನ್ನೇ ಬದಲಾಯಿಸಿದರು. ಅವರು ಈ ವಿಡಿಯೊ ನನ್ನದೇ... ಆದರೆ ನನಗೆ ಮದುವೆಯಾಗಿಲ್ಲ.‌‌‌..ಎಂದು ಹೇಳುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ.

ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಠಾಣೆ ಮೆಟ್ಟಿಲೇರಿದ ಪತ್ನಿ

ನಾನು ದುಬೈನಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ಹಣ ಕೂಡ ಸಂಪಾದಿಸಿದ್ದೇನೆ. ಇಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಮೂಲಕ, ನಾನು ನನ್ನ ಕನಸುಗಳನ್ನು ನನಸಾಗಿಸಿ ಕೊಂಡಿದ್ದೇನೆ. ಅದಕ್ಕಾಗಿಯೇ ನಾನು ದುಬೈ ಅನ್ನು ಪ್ರತಿನಿಧಿಸಲು ನನ್ನ ಮನೆಯ ಮೇಲೆ ಬುರ್ಜ್ ಖಲೀಫಾವನ್ನು ನಿರ್ಮಿಸಿದ್ದೇನೆ. ನಾನು ಇದನ್ನು ಹೆಂಡತಿಗಾಗಿ ಮಾಡಲಿಲ್ಲ‌‌ ಎಂದು ಬರೆದು ಕೊಂಡಿದ್ದಾರೆ‌.‌ ಹೀಗೆ ವೈರಲ್ ಆದ ಪ್ರೇಮಕಥೆಯು ಕಠಿಣ ಪರಿಶ್ರಮಕ್ಕೆ ಸಲ್ಲಿಸಿದ ಗೌರವವಾಗಿ ಬದಲಾಯಿತು.

ಸದ್ಯ ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ತಮಾಷೆಯಿಂದ ಕೂಡಿದೆ. ಪ್ರೇಮ ಕಥೆ ಹೀಗೂ ಕೊನೆಗೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದು ಹೆಂಡತಿಗಾಗಿ ಅಲ್ಲ ತನ್ನ ಶ್ರಮದ ನೆನಪಿಗಾಗಿ ಎಂದು ಹೇಳಿದ್ದಾರೆ.