Viral Post: ಪತಿಗಾಗಿ ಕಾದಿದ್ದು ಒಂದಲ್ಲ...ಎರಡಲ್ಲ ಬರೋಬ್ಬರಿ 80 ವರ್ಷ! ಗಂಡನ ನೆನಪಲ್ಲೇ ಕೊನೆಯುಸಿರೆಳೆದ ಶತಾಯುಷಿ
ಚೀನಾದ ಗೈಝೌ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ 103 ವರ್ಷದ ಡು ಹುಜೆನ್ ಅವರು ಬರೋಬ್ಬರಿ 80 ವರ್ಷಗಳ ಕಾಲ ತಮ್ಮ ಪತಿಗಾಗಿ ಕಾಯುತ್ತಾ ಕೊನೆಯುಸಿರೆಳಿದಿದ್ದಾರೆ. ಗಂಡನ ನೆನಪಿಗಾಗಿ ತಮ್ಮ ಮೊದಲ ರಾತ್ರಿಯಂದು ಬಳಸಿದ್ದ ದಿಂಬಿನ ಹೊದಿಕೆಯನ್ನು ಬಿಗಿಯಾಗಿ ಅಪ್ಪಿಕೊಂಡು ಆಕೆ ಕೊನೆಯುಸಿರೆಳೆದಿದ್ದಾರೆ.

ಸಾಂದರ್ಭಿಕ ಚಿತ್ರ

ಈಗಿನ ಕಾಲದಲ್ಲಿ ತೀರ ಕ್ಷುಲ್ಲಕ ಕಾರಣಕ್ಕೆ ಮದುವೆಗಳು ಮುರಿದು ಬೀಳುತ್ತವೆ. ಗಂಡ ಸೇರಿ ಕೊಡಿಸಿಲ್ಲವೆಂದು, ಹೆಂಡತಿ ಮಟನ್ ಸಾಂಬಾರ್ ಮಾಡಿಲ್ಲವೆಂದು ಪರಸ್ಪರ ವಿಚ್ಛೇದನ ನೀಡುವ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತವೆ. ಇಂತಹ ಕಾಲಘಟ್ಟದಲ್ಲಿ ಚೀನಾದ ಈ 103 ವರ್ಷದ ವೃದ್ಧೆ ಮತ್ತು ತನ್ನ ಗಂಡನೆಡಿಗಿನ ಆಕೆಯ ಪ್ರೀತಿ ನಿಜಕ್ಕೂ ನಮಗೆಲ್ಲರಿಗೂ ಮಾದರಿ. ಚೀನಾದ ಗೈಝೌ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ 103 ವರ್ಷದ ಡು ಹುಜೆನ್ ಅವರು ಬರೋಬ್ಬರಿ 80 ವರ್ಷಗಳ ಕಾಲ ತಮ್ಮ ಪತಿಗಾಗಿ ಕಾಯುತ್ತಾ ಕೊನೆಯುಸಿರೆಳಿದಿದ್ದಾರೆ. ಗಂಡನ ನೆನಪಿಗಾಗಿ ತಮ್ಮ ಮೊದಲ ರಾತ್ರಿಯಂದು ಬಳಸಿದ್ದ ದಿಂಬಿನ ಹೊದಿಕೆಯನ್ನು ಬಿಗಿಯಾಗಿ ಅಪ್ಪಿಕೊಂಡು ಆಕೆ ಕೊನೆಯುಸಿರೆಳೆದಿದ್ದಾರೆ. ಈ ಪ್ರೇಮ ಕತೆ ಎಂತಹುದೇ ಸಿನಿಮಾವನ್ನೂ ಮೀರಿಸುತ್ತದೆ. ಆದರೆ, ಒಂದೇ ವ್ಯತ್ಯಾಸವೆಂದರೆ ಇಲ್ಲಿ ನಡೆದದ್ದು ಸಂಪೂರ್ಣ ವಾಸ್ತವ. ಈ ಸುದ್ದಿ ಇದೀಗ ಎಲ್ಲೆಡೆ ಭಾರೀ ವೈರಲ್(Viral Post)ಆಗುತ್ತಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಡು ಹುಜೆನ್ ಮಾರ್ಚ್ 8 ರಂದು ನಿಧನರಾದರು. ಉತ್ತಮ ಭವಿಷ್ಯವನ್ನು ಹುಡುಕುತ್ತಾ ವಿದೇಶಕ್ಕೆ ಹೋದ ಪತಿ ಕೊನೆಯ ಬಾರಿಗೆ ಅವರನ್ನು ಸಂಪರ್ಕಿಸಿದ್ದು 1952ರಲ್ಲಿ. ಅದಾದ ಬಳಿಕ ಬರೋಬ್ಬರಿ 8 ದಶಕಗಳ ಕಾಲ ತಮ್ಮ ಪತಿ ಮರಳಿ ಬರುತ್ತಾರೆ ಎಂಬ ಭರವಸೆಯಲ್ಲಿಯೇ ಡು ಹುಜೇನ್ ತಮ್ಮ ಜೀವನವನ್ನು ಕಳೆದಿದ್ದಾರೆ.
ಯುಗದ ಪ್ರೇಮ ಕತೆ:
ಡು ಹುಜೇನ್ ಅವರು ತಮಗಿಂತ ವಯಸ್ಸಿನಲ್ಲಿ ಮೂರು ವರ್ಷ ಸಣ್ಣವರಾದ ಹುವಾಂಗ್ ಜುನ್ಪು ಅವರನ್ನು ವಿವಾಹವಾದರು. ಮದುವೆಯಾದ ಸ್ವಲ್ಪ ಸಮಯದಲ್ಲಿಯೇ ಹುವಾಂಗ್ ಅವರು ದೇಶ ಸೇವೆ ಮಾಡಲೆಂದು ಪತ್ನಿಯನ್ನು ಮನೆಯಲ್ಲಿ ಬಿಟ್ಟು ಸೈನ್ಯಕ್ಕೆ ಸೇರಿದರು. 1943ರಲ್ಲಿ ಅವರ ನಡುವಿನ ಪ್ರೀತಿ ಮತ್ತೊಮ್ಮೆ ಅರಳಿತು. ಸೈನ್ಯದಿಂದ ವಾಪಸ್ ಬಂದ ಹುವಾಂಗ್, ಡು ಹುಜೇನ್ ಜತೆ ವಾಸಿಸಲು ಅರಂಭಿಸಿದರು.
ಈ ಸುದ್ದಿಯನ್ನು ಓದಿ:Viral News: 6 ವರ್ಷ ಕೆಲಸವೇ ಮಾಡದೆ ಸಂಬಳ ತೆಗೆದುಕೊಂಡ ಕಿಲಾಡಿ! ಸತ್ಯ ಬಯಲಾಗಿದ್ದು ಹೇಗೆ?
ಅವರ ಪ್ರೀತಿಯ ಫಲವಾಗಿ ದಂಪತಿಗೆ ಒಂದು ಗಂಡು ಮಗುವಿನ ಜನನವಾಯಿತು. ಈ ಸಂದರ್ಭದಲ್ಲಿ ಹುವಾಂಗ್ ಅವರ ತಾಯಿ ನಿಧನರಾದ ಸುದ್ದಿ ಬಂತು. ಹುವಾಂಗ್ ತನ್ನ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಹೋದವರು ಎಂದಿಗೂ ಮರಳಿ ಬರಲೇ ಇಲ್ಲ.
ಪತ್ರಗಳಲ್ಲಿಯೇ ಮಾತು
ಡು ಹುಜೇನ್ ಅವರನ್ನು ಬಿಟ್ಟು ಹೋದ ಹುವಾಂಗ್ 1952ರವರೆಗೆ ಪತ್ರಗಳನ್ನು ಬರೆಯುತ್ತಲೇ ಇದ್ದರು. “ನಾವು ಮತ್ತೆ ಒಂದಾಗಿ ಬಾಳೋಣ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡೋಣ” ಎಂದು ಹುಜೇನ್ ಅವರಿಗೆ ಹುವಾಂಗ್ ಪತ್ರ ಬರೆದಿದ್ದರು. ಆದರೆ, 1952ರ ನಂತರ ಪತ್ರಗಳು ಬರುವುದು ಏಕಾಏಕಿ ನಿಂತು ಹೋಯಿತು.
ತನ್ನ ಪ್ರೀತಿಯ ಪತಿಯೊಂದಿಗೆ ತಾಯ್ತನದ ಸಂತೋಷವನ್ನು ಹಂಚಿಕೊಳ್ಳಬೇಕೆಂಬ ಹುಜೇನ್ ಹಂಬಲ ಅಲ್ಲಿಗೆ ಕಮರಿತು. ಹುವಾಂಗ್ ಆ ಬಳಿಕ ಏನಾದರೆಂಬ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಅಂದಿನಿಂದ ತಮ್ಮ ಕೊನೆಯುಸಿರು ಇರುವವರೆಗೆ ಹುಜೇನ್ ತಮ್ಮ ಪತಿಗಾಗಿ ಕಾಯುತ್ತಲೇ ಇದ್ದರು. ದೈಹಿಕವಾಗಿ ತಮ್ಮ ಪತಿಯಿಂದ ದೂರವಿದ್ದರೂ, ಮಾನಸಿಕವಾಗಿ ಅವರೊಳಗಿನ ಪ್ರೀತಿ ಕಣ್ಣು ಮುಚ್ಚುವವರೆಗೂ ಹಚ್ಚಹಸುರಾಗಿತ್ತು.