Viral Video: ಸಚಿವರ ಕಾರ್ಯಕ್ರಮಕ್ಕೆ ಮದ್ಯದ ಅಮಲನಲ್ಲಿ ಬಂದ ಅಧಿಕಾರಿ; ಬಂಧನದ ಆದೇಶ
ಬಿಹಾರದಲ್ಲಿ ಸಚಿವ ನೀರಜ್ ಕುಮಾರ್ ಬಬ್ಲು ಅವರ ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಅಧಿಕಾರಿ ಶಂಭು ಕುಮಾರ್ ಕುಡಿದು ಬಂದು ವೇದಿಕೆ ಹತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ. ಮದ್ಯಪಾನ ಮಾಡಿರುವ ಶಂಕೆಯ ಮೇರೆಗೆ ಜಿಲ್ಲಾಧಿಕಾರಿ ಸಾವನ್ ಕುಮಾರ್ ಪರೀಕ್ಷೆಗೆ ಆದೇಶಿಸಿದಾಗ, 10 ಮಿಲಿಗ್ರಾಂ ಆಲ್ಕೊಹಾಲ್ ಪತ್ತೆಯಾಗಿದೆ. ತಕ್ಷಣ ಶಂಭು ಕುಮಾರ್‌ರನ್ನು ಬಂಧಿಸಲಾಗಿದ್ದು, ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕುಡಿದು ಬಂದ ಅಧಿಕಾರಿ ಶಂಭು ಕುಮಾರ್

ಸುಪೌಲ್: ಬಿಹಾರದಲ್ಲಿ (Bihar) ಸಚಿವ ನೀರಜ್ ಕುಮಾರ್ ಬಬ್ಲು (Neeraj Kumar Bablu ) ಅವರ ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಅಧಿಕಾರಿ (District Fisheries Officer) ಶಂಭು ಕುಮಾರ್ ಕುಡಿದು (Intoxicated) ಬಂದು ವೇದಿಕೆ ಹತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ. ಮದ್ಯಪಾನ ಮಾಡಿರುವ ಶಂಕೆಯ ಮೇರೆಗೆ ಜಿಲ್ಲಾಧಿಕಾರಿ ಸಾವನ್ ಕುಮಾರ್ ಪರೀಕ್ಷೆಗೆ ಆದೇಶಿಸಿದಾಗ, 10 ಮಿಲಿಗ್ರಾಂ ಆಲ್ಕೊಹಾಲ್ ಪತ್ತೆಯಾಗಿದೆ. ತಕ್ಷಣ ಶಂಭು ಕುಮಾರ್‌ರನ್ನು ಬಂಧಿಸಲಾಗಿದ್ದು, ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸುಪೌಲ್‌ನ ಟೌನ್‌ಹಾಲ್‌ನಲ್ಲಿ ಪ್ರಾಣಿ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯಿಂದ ಮೀನುಗಾರರ ದಿನಾಚರಣೆಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಚಿವ ನೀರಜ್ ಸಿಂಗ್ ಬಬ್ಲು ಭಾಗವಹಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಶಂಭು ಕುಮಾರ್ ಅವರ ವರ್ತನೆಯನ್ನು ಗಮನಿಸಿದ ಜಿಲ್ಲಾಧಿಕಾರಿ, ಆತನಿಂದ ಆಲ್ಕೊಹಾಲ್ ವಾಸನೆ ಬರುತ್ತಿರುವುದನ್ನು ಕಂಡು ತಕ್ಷಣ ಕ್ರಮಕೈಗೊಂಡರು.
है ना ग़ज़ब का बिहार ..!
— Mukesh singh (@Mukesh_Journo) July 11, 2025
बिहार के सुपौल में एक कार्यक्रम के दौरान मंत्री नीरज कुमार बबलू के मंच पर पीकर लड़खड़ाता हुआ पहुंचा मत्स्य अधिकारी, डीएम ने वहीं से जेल भिजवाया #Bihar pic.twitter.com/B0hHL6J5dH
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದ ಬಳಿಕ ಶಂಭು ಕುಮಾರ್‌ರನ್ನು ಸರ್ಕ್ಯೂಟ್ ಹೌಸ್‌ಗೆ ಕರೆಸಲಾಯಿತು. ಎಕ್ಸೈಸ್ ಇಲಾಖೆಗೆ ಮಾಹಿತಿ ನೀಡಿ, ಶ್ವಾಸ ವಿಶ್ಲೇಷಣೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಆಲ್ಕೊಹಾಲ್ ಸೇವನೆ ದೃಢಪಟ್ಟಿತು. ಶಂಭು ಕುಮಾರ್‌ನನ್ನು ತಕ್ಷಣ ಬಂಧಿಸಿ, ಎಫ್‌ಐಆರ್ ದಾಖಲಿಸಲಾಯಿತು.
ಈ ಸುದ್ದಿಯನ್ನು ಓದಿ: Viral Video: ಪತ್ನಿಯ ಕಾಟಕ್ಕೆ ಬೇಸತ್ತು ವಿಚ್ಛೇದನ; ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!
ಶಂಭು ಕುಮಾರ್‌ರ ಸಮರ್ಥನೆ:
ಬಂಧನದ ಸಮಯದಲ್ಲಿ ಶಂಭು ಕುಮಾರ್, "ನಾನು ಆಲ್ಕೊಹಾಲ್ ಸೇವಿಸಿಲ್ಲ. ವಾಂತಿಯಾದ ಬಳಿಕ ಹೋಮಿಯೋಪತಿ ಔಷಧಿ ಸೇವಿಸಿದ್ದೇನೆ, ಅದರಿಂದ ಆಲ್ಕೊಹಾಲ್ ವಾಸನೆ ಬರುತ್ತಿದೆ" ಎಂದು ಸಮರ್ಥಿಸಿಕೊಂಡರು. ಆದರೆ, ಜಿಲ್ಲಾಧಿಕಾರಿ ಸಾವನ್ ಕುಮಾರ್, "ಶಂಭು ಕುಮಾರ್ ಈ ಹಿಂದೆಯೂ ಆಲ್ಕೊಹಾಲ್ ಸೇವಿಸಿ ಸಿಕ್ಕಿಬಿದ್ದಿದ್ದಾರೆ" ಎಂದು ತಿಳಿಸಿದರು.
2024ರ ಮಾರ್ಚ್‌ನಲ್ಲಿ, ಶಂಭು ಕುಮಾರ್ ನೇಪಾಳದಲ್ಲಿ ಆಲ್ಕೊಹಾಲ್ ಸೇವಿಸಿ ಭಾರತಕ್ಕೆ ಬರುತ್ತಿದ್ದರು. ಭಾರತ-ನೇಪಾಳ ಗಡಿಯಲ್ಲಿ ಶ್ವಾಸ ತಪಾಸಣೆ ವೇಳೆ ಕುಡಿದಿರುವುದು ದೃಢಪಟ್ಟಿತ್ತು. ಆಗ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ರಹಸ್ಯವಾಗಿ ಇತ್ಯರ್ಥಗೊಳಿಸಿ ನ್ಯಾಯಾಲಯದಲ್ಲಿ ದಂಡವನ್ನು ಪಾವತಿಸಿದ್ದರು. ಜಿಲ್ಲಾಧಿಕಾರಿ ಸಾವನ್ ಕುಮಾರ್, ಶಂಭು ಕುಮಾರ್ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ.