Viral News: ಅಯೋಧ್ಯೆಯಲ್ಲಿ ಸ್ನಾನ ಮಾಡ್ತಿದ್ದ ಮಹಿಳೆಯ ವಿಡಿಯೊ ರೆಕಾರ್ಡ್ ಮಾಡಿದ ಕಿಡಿಗೇಡಿ- ಆಮೇಲೆ ನಡೆದಿದ್ದೇ ಬೇರೆ!
ಅಯೋಧ್ಯೆಯ ರಾಜಾ ಗೆಸ್ಟ್ ಹೌಸ್‍ನಲ್ಲಿ ರೂಂ ಬುಕ್ ಮಾಡಿದ್ದ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ಅದನ್ನು ಅಲ್ಲಿನ ಕೆಲಸಗಾರ ಸೌರಭ್ ಎಂಬಾತ ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತನನ್ನು ಉತ್ತರ ಪ್ರದೇಶ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.


ಲಖನೌ: ಲಾಡ್ಜ್, ಗೆಸ್ಟ್ ರೂಂ, ಶೂ ರೂಂಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇಟ್ಟು ಮಹಿಳೆಯರು ಸ್ನಾನ ಮಾಡುವುದು, ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ.ಈಗ ಕೂಡ ಅಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಅದೇರೀತಿ ಇದೀಗ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯ ಗೆಸ್ಟ್ ಹೌಸ್‍ನಲ್ಲಿ ಮಹಿಳೆಯೊಬ್ಬಳು ಸ್ನಾನ ಮಾಡುವುದನ್ನು ರೆಕಾರ್ಡ್ ಮಾಡಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸೌರಭ್ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯವನಾಗಿದ್ದು, ಘಟನೆ ನಡೆದ ಗೆಸ್ಟ್ ಹೌಸ್‍ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ.ಈ ಸುದ್ದಿ ಈಗ ವೈರಲ್(Viral News)ಆಗಿದೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಗೆಸ್ಟ್ ಹೌಸ್‍ನಲ್ಲಿ ತಂಗಿದ್ದ ಮಹಿಳೆ ಸ್ನಾನ ಮಾಡುವಾಗ ನೆರಳನ್ನು ಗಮನಿಸಿದ್ದಾಳೆ. ಅವಳು ಮೇಲಕ್ಕೆ ನೋಡಿದಾಗ, ಬಾತ್‍ರೂಂನ ತಗಡಿನ ಶೆಡ್ ಛಾವಣಿಯ ಮೇಲಿನಿಂದ ಆರೋಪಿ ಮೊಬೈಲ್ ಫೋನ್‍ನಿಂದ ರೆಕಾರ್ಡ್ ಮಾಡುವುದನ್ನು ನೋಡಿದ್ದಾಳೆ. ಗಾಬರಿಗೊಂಡ ಮಹಿಳೆ ಕಿರುಚಿಕೊಂಡು ಹೊರಗೆ ಓಡಿಬಂದಿದ್ದಾಳಂತೆ. ಗೆಸ್ಟ್ ಹೌಸ್‍ನಲ್ಲಿ ತಂಗಿದ್ದ ಇತರ ಅತಿಥಿಗಳು ಆಕೆಯ ಕೂಗನ್ನು ಕೇಳಿ ಕೂಡಲೇ ಓಡಿಬಂದು ಆರೋಪಿಯನ್ನು ಹಿಡಿದು ಅಯೋಧ್ಯೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಮಹಿಳೆಯರು ಸ್ನಾನ ಮಾಡುವ ಹತ್ತು ವಿಡಿಯೊಗಳು ಮತ್ತು ಹಲವಾರು ಅಶ್ಲೀಲ ಫೋಟೋಗಳು ಮತ್ತು ವಿಡಿಯೊಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಶುರುಮಾಡಿದ್ದು, ಪೊಲೀಸರು ಪ್ರಸ್ತುತ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ವರದಿ ಪ್ರಕಾರ, ರಾಮ ದೇವಾಲಯದ ಗೇಟ್ ಸಂಖ್ಯೆ 3 ರಿಂದ ಕೇವಲ 50 ಮೀಟರ್ ದೂರದಲ್ಲಿದ್ದ ರಾಜಾ ಗೆಸ್ಟ್ ಹೌಸ್ ಎಂದು ಗುರುತಿಸಲಾದ ಅತಿಥಿ ಗೃಹದಲ್ಲಿ ಈ ಘಟನೆ ನಡೆದಿದೆ. ಸುಮಾರು 30 ವರ್ಷದ ಮಹಿಳೆ ರಾಮ ಮಂದಿರಕ್ಕೆ ಭೇಟಿ ನೀಡಲು ಇತರ ನಾಲ್ವರೊಂದಿಗೆ ವಾರಣಾಸಿಯಿಂದ ಅಯೋಧ್ಯೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ:Viral Video: ಬಿಕಿನಿ ತೊಟ್ಟ ಮಹಿಳೆಯರನ್ನು ಕಂಡೊಡನೆ ಈತ ಮಾಡಿದ್ದೇನು ಗೊತ್ತಾ? ನೆಟ್ಟಿಗರು ಫುಲ್ ಗರಂ
ಈ ಹಿಂದೆ ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆದ ಮಹಾ ಕುಂಭ ಮೇಳದ ಸಮಯದಲ್ಲಿ ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುವ ವಿಡಿಯೊಗಳನ್ನು ರೆಕಾರ್ಡ್ ಮಾಡಿದಾತನನ್ನು ಬಂಧಿಸಿದ ಘಟನೆ ನಡೆದಿತ್ತು. ಈತ ಮಹಿಳೆಯರ ವಿಡಿಯೊ ಮಾಡಿ ಸೋಶೀಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಿವಾಸಿ ಅಮಿತ್ ಕುಮಾರ್ ಝಾ ಅವನನ್ನು ಪ್ರಯಾಗ್ರಾಜ್ ಪೊಲೀಸರು ಬಂಧಿಸಿದ್ದಾರೆ.