ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತದ ಮೆಟ್ರೋ ನೋಡಿ ಜರ್ಮನ್‌ ವ್ಲಾಗರ್‌ ಹೇಳಿದ್ದೇನು ಗೊತ್ತಾ?

Viral Video: ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 70 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿರುವ ಅಲೆಕ್ಸ್‌ ವೆಲ್ಡರ್‌ ಅವರು, ದೆಹಲಿ ಮೆಟ್ರೋಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಶ್ಲಾಘಿಸಿದ್ದಾರೆ. ಈ ಮೆಟ್ರೋ ವ್ಯವಸ್ಥೆ ಪಶ್ಚಿಮ ಯೂರೋಪಿನ ಕೆಲವು ಸಾರಿಗೆ ಮಾರ್ಗಗಳಿಗಿಂತ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾದ ಮೆಟ್ರೋ ವ್ಯವಸ್ಥೆ ಬಗ್ಗೆ ಜರ್ಮನ್ ಪ್ರವಾಸಿಗ ಹೀಗಾ ಹೇಳೋದಾ..?

ಜರ್ಮನ್‌ ವ್ಲಾಗರ್‌ ಅಲೆಕ್ಸ್‌ ವೆಲ್ಡರ್‌

Profile Sushmitha Jain Mar 31, 2025 4:22 PM

ನವದೆಹಲಿ: ಟ್ರಾಫಿಕ್‌ ಜಂಜಾಟದಿಂದ ಮುಕ್ತಿ ಪಡೆಯಲು ಮೆಟ್ರೋ ವ್ಯವಸ್ಥೆ(Metro System)ಯನ್ನು ಬಳಸುವುದು ಉತ್ತಮ ಎಂದು ಭಾರತದ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬರ ಮಾತಾಗಿದೆ. ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ನಲ್ಲಿ ಸಮಯ ವ್ಯರ್ಥ ಮಾಡುವ ಬದಲು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ತಲುಪಲು ಸಹಾಯ ಮಾಡುವ ಮಾಡುವ ಮೆಟ್ರೋ, ನಗರವಾಸಿಗಳ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಾಡಾಗಿದೆ. ಭಾರತದಲ್ಲಿ ದೆಹಲಿ, ಬೆಂಗಳೂರು, ಹೈದರಾಬಾದ್‌, ಮುಂಬೈ ಸೇರಿದಂತೆ ಇನ್ನೂ ಅನೇಕ ನಗರಗಳಲ್ಲಿ ಮೆಟ್ರೋ ರೈಲುಗಳು ಸಂಚರಿಸುತ್ತವೆ. ಈ ಸಂಚಾರ ವ್ಯವಸ್ಥೆಯನ್ನು ಜರ್ಮನ್‌ ವ್ಲಾಗರ್‌(German Vlogger) ಆಗಿರುವ ಅಲೆಕ್ಸ್‌ ವೆಲ್ಡರ್‌(Alex Welder) ಹಾಡಿ ಹೊಗಳಿದ್ದು, ಈಗ ಸಾಮಾಜಿಕ ತಾಲತಾಣ(Social Media)ದ ಹಾಟ್‌ ಟಾಪಿಕ್‌ ಆಗಿದೆ.

ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಸುಮಾರು 70 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿರುವ ಅಲೆಕ್ಸ್‌ ವೆಲ್ಡರ್‌ ಅವರು, ದೆಹಲಿ ಮೆಟ್ರೋಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಶ್ಲಾಘಿಸಿದ್ದಾರೆ. ಈ ಮೆಟ್ರೋ ವ್ಯವಸ್ಥೆ ಪಶ್ಚಿಮ ಯೂರೋಪಿನ ಕೆಲವು ಸಾರಿಗೆ ಮಾರ್ಗಗಳಿಗಿಂತ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಭಾರತಕ್ಕೆ ಬರುವ ಮೊದಲು ಇಲ್ಲಿನ ಸಾರಿಗೆ ವ್ಯವಸ್ಥೆಯ ಬಗ್ಗೆ ಪೂರ್ವಾಗ್ರಹ ಪೀಡಿತ ಆಲೋಚನೆಗಳನ್ನು ಹೊಂದಿದ್ದೆ. ಗುಜರಿ ಬಸ್‌ ಮತ್ತು ರೈಲುಗಳು, ಗದ್ದಲ ಉಂಟುಮಾಡುವ ರಿಕ್ಷಾಗಳ ಬಗ್ಗೆ ನಾನು ಹೊಂದಿದ ಅಭಿಪ್ರಾಯವನ್ನು ಇಲ್ಲಿನ ಮೆಟ್ರೋ ವ್ಯವಸ್ಥೆ ಸಂಪೂರ್ಣವಾಗಿ ಬದಲಾಯಿಸಿದೆ” ಎಂದು ವೆಲ್ಡರ್‌ ಹೇಳಿದ್ದಾರೆ.

"ಭಾರತದದಲ್ಲಿ ಆಗ್ರಾ ಮತ್ತು ದೆಹಲಿಯಂತಹ ನಗರಗಳು ಇಷ್ಟು ಉತ್ತಮ ಮೆಟ್ರೋ ವ್ಯವಸ್ಥೆಯನ್ನು ಹೊಂದಿವೆ ಎಂದು ನನಗೆ ತಿಳಿದಿರಲಿಲ್ಲ. ದೆಹಲಿ ಮಟ್ರೋದ ಕೆಲವು ಮಾರ್ಗಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್, ಫೋನ್ ಚಾರ್ಜ್ ಮಾಡಲು ಪ್ಲಗ್ ಮತ್ತು ಮಹಿಳೆಯರು ಮತ್ತು ವೃದ್ಧರಿಗೆ ಮೀಸಲಿಟ್ಟ ಆಸನಗಳನ್ನು ಸಹ ಹೊಂದಿದೆ" ಎಂದು ಅವರು ಹೇಳಿದರು.

ದೆಹಲಿ ಮೆಟ್ರೋವನ್ನು ಅವರು ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾದಂತಹ ಮುಂದುವರೆದಿರುವ ದೇಶಗಳ ಸಾರಿಗೆ ವ್ಯವಸ್ಥೆಯೊಂದಿಗೆ ಹೋಲಿಸಿದ್ದಾರೆ. ಇದರೊಂದಿಗೆ, ಇತರ ವಿದೇಶಿ ಪ್ರವಾಸಿಗರು ಮತ್ತು ವ್ಲಾಗರ್‌ಗಳು ಭಾರತದ ಕುರಿತು ಇಷ್ಟು ಉತ್ತಮವಾದ ಚಿತ್ರಣವನ್ನು ಜಗತ್ತಿಗೆ ತೋರಿಸದಿರುವುದು ಆಶ್ಚರ್ಯಕರವಾಗಿದೆ ಎಂದರು.

ಈ ಸುದ್ದಿಯನ್ನು ಓದಿ: Viral Video: ಆಂಬ್ಯುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ ನೀಡಿದ 50 ವರ್ಷದ ಮಹಿಳೆ

ವೆಲ್ಡರ್‌ ಮಾತಿಗೆ ನೆಟ್ಟಿಗರ ಅಭಿಪ್ರಾಯವೇನು?

ಈ ವೀಡಿಯೊವನ್ನು ಸುಮಾರು 3.8 ಮಿಲಿಯನ್ ಜನರು ವೀಕ್ಷಿಸಿದ್ದು ಮತ್ತು ಸಾವಿರಾರು ಜನರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹೆಚ್ಚಿನವರು ಪಾಶ್ಚಿಮಾತ್ಯ ಜಗತ್ತು ಇನ್ನೂ ಭಾರತದ ಪ್ರಗತಿಯ ಬಗ್ಗೆ ಸಂಕುಚಿತ ಮನೋಭಾವ ಹೊಂದಿದೆ ಎಂದು ಹೇಳಿದ್ದಾರೆ. "ಮಾದಕ ವ್ಯಸನಿಗಳು ಇಲ್ಲ, ಕುಡುಕರಿಲ್ಲ, ಯಾರೂ ಮೂತ್ರ ವಿಸರ್ಜನೆ ಅಥವಾ ವಾಂತಿ ಮಾಡುವುದಿಲ್ಲ, ಇಲಿಗಳಿಲ್ಲ. ಸ್ವಲ್ಪ ಜನಸಂದಣಿಯನ್ನು ನಿಯಂತ್ರಿಸಿದರೆ, ಜಗತ್ತಿನ ಯಾವುದೇ ಸುರಂಗ ಮಾರ್ಗಗಳಿಗಿಂತ ಇದೆ ಉತ್ತಮ ಸಾರಿ ಮಾರ್ಗವಾಗುತ್ತದೆ" ಎಂದು ಒಬ್ಬರು ಕಾಮೆಂಟ್‌ ಮಾಡಿದರೆ, "ಲಂಡನ್ ಟ್ಯೂಬ್‌ಗಿಂತ ದೆಹಲಿ ಮೆಟ್ರೋ ತುಂಬಾ ಉತ್ತಮವಾಗಿದೆ” ಎಂದು ಮತ್ತೊಬ್ಬರು ಹೇಳಿದ್ದಾರೆ.