ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತ vs ಪಾಕಿಸ್ತಾನ- ಆತಿಥ್ಯದ ವಿಷಯದಲ್ಲಿ ಯಾರು ಉತ್ತಮರು? ಕೆನಡಾ ಪ್ರವಾಸಿಗ ಹೇಳೋದೇನು?

Viral Video: ಭಾರತ ಅಥವಾ ಪಾಕಿಸ್ತಾನ ಇವರೆಡರಲ್ಲಿ ವಿದೇಶಿ ಪ್ರವಾಸಿಗರನ್ನು ಒಳ್ಳೆಯ ರೀತಿಯಲ್ಲಿ ಟ್ರೀಟ್ ಮಾಡುವ ದೇಶ ಯಾವುದು ಎಂಬ ಪ್ರಶ್ನೆಗೆ ಕೆನಡಾದ ಪ್ರವಾಸಿಗ ನೋಲನ್‌ ಸೌಮುರೆ ಉತ್ತರ ನೀಡಿದ್ದು, ಆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ಈಗಾಗಲೇ 4.4 ಮಿಲಿಯನ್‌ ವಿವ್ಸ್‌ಗಳನ್ನು ಪಡೆದುಕೊಂಡಿದೆ. ದೇಸೀಯ ಆತಿಥ್ಯಗಳ ಕುರಿತು ನೋಲನ್‌ ನೀಡಿದ ಉತ್ತರಗಳು ಪ್ರಮುಖವಾಗಿ ಪಾಕಿಸ್ತಾನ ಮತ್ತು ಭಾರತದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವೈರಲ್‌ ಆಗುತ್ತಿದೆ.

ವಿದೇಶಿ ಪ್ರವಾಸಿಗರನ್ನು ದೇವರಂತೆ ಕಾಣುವ ದೇಶ ಯಾವುದು ಗೊತ್ತಾ..?

Profile Sushmitha Jain Mar 26, 2025 2:19 PM

ನವದೆಹಲಿ: ಭಾರತೀಯರು ಶತ ಶತಮಾನಗಳಿಂದಲೂ ʼಅತಿಥಿ ದೇವೋ ಭವʼ ಎಂಬ ವೇದವಾಕ್ಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಇಲ್ಲಿ ಅತಿಥಿಗಳನ್ನು ದೇವರಂತೆ ಕಾಣಲಾಗುತ್ತದೆ. ಆದರೆ, ವಿದೇಶಗಳಿಂದ ಬರುವ ಪ್ರವಾಸಿಗರು ಇದನ್ನು ಒಪ್ಪುತ್ತಾರಾ? ಭಾರತದಲ್ಲಿ ವಿದೇಶಿ ಪ್ರವಾಸಿಗರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತದೆ? ಭಾರತ (India) ಮತ್ತು ಪಾಕಿಸ್ತಾನ(Pakistan)ದ ನಡುವೆ ಪ್ರವಾಸಿಗರನ್ನು ಉತ್ತಮವಾಗಿ ನಡೆಸಿಕೊಳ್ಳುವ ದೇಶ ಯಾವುದು? ಎಂಬೆಲ್ಲಾ ಪ್ರಶ್ನೆಗಳಿಗೆ ಕೆನಡಾದ ಪ್ರವಾಸಿಗ(Canadian Tourist) ನೀಡಿದ ಉತ್ತರ ಈಗ ವೈರಲ್‌(Viral News) ಆಗಿದೆ. @officialnamour ಎಂಬ ಇನ್‌ಸ್ಟಾಗ್ರಾಮ್ ಯೂಸರ್‌ ಇತ್ತೀಚಿಗೆ ಕೆನಡಾದ ಪ್ರವಾಸಿಗ ನೋಲನ್‌ ಸೌಮುರೆ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿರುವ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ಈಗಾಗಲೇ 4.4 ಮಿಲಿಯನ್‌ ವಿವ್ಸ್‌ಗಳನ್ನು ಪಡೆದುಕೊಂಡಿದೆ. ದೇಸೀಯ ಆತಿಥ್ಯಗಳ ಕುರಿತು ನೋಲನ್‌ ನೀಡಿದ ಉತ್ತರಗಳು ಪ್ರಮುಖವಾಗಿ ಪಾಕಿಸ್ತಾನ ಮತ್ತು ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್‌ ಆಗುತ್ತಿದೆ.

"ಭಾರತ ಅಥವಾ ಪಾಕಿಸ್ತಾನ, ಯಾವ ದೇಶ ಉತ್ತಮ ಆತಿಥ್ಯ ಹೊಂದಿದೆ?" ಎಂದು ಸೌಮುರೆ ಅವರನ್ನು ಕೇಳಿದ್ದಕ್ಕೆ, ಅವರು ಒಂದು ಕ್ಷಣವೂ ಯೋಚಿಸದೆ “ಖಂಡಿತವಾಗಿಯೂ ಪಾಕಿಸ್ತಾನ” ಎಂದು ಉತ್ತರಿಸಿದ್ದಾರೆ. ಇದಕ್ಕಾಗಿ ವಿವರಣೆಯನ್ನೂ ನೀಡಿದ ಅವರು, “ಭಾರತೀಯರು ವಿದೇಶಿ ಪ್ರವಾಸಿಗರನ್ನು ಅತಿಥಿಗಳಂತೆ ನೋಡುವ ಬದಲು, ಬೇಕಾಬಿಟ್ಟಿ ಹಣ ಖರ್ಚು ಮಾಡಲು ಬರುವ ಗ್ರಾಹಕರಂತೆ ನೋಡಿಕೊಳ್ಳುತ್ತಾರೆ. ಭಾರತದಲ್ಲಿ ನೀವು ನಡೆದಾಡುವ ಎಟಿಎಂ ಎಂಬಂತೆ ಭಾವಿಸಲಾಗುತ್ತದೆ. ಆದರೆ, ಪಾಕಿಸ್ತಾನದವರು ಆತ್ಮೀಯ ಆತಿಥ್ಯವನ್ನು ನೀಡುತ್ತಾರೆ. ಪ್ರವಾಸಿಗರಿಗೆ ವಸತಿ ಮತ್ತು ಊಟವನ್ನೂ ನೀಡುತ್ತಾರೆ. ಅದಕ್ಕಾಗಿ ಹಣವನ್ನೂ ಪಡೆಯುವುದಿಲ್ಲ” ಎಂದು ಸೌಮುರೆ ಹೇಳಿದ್ದಾರೆ.

ನೋಲನ್ ಸೌಮುರೆ ಕೆನಡಾದ ಟ್ರಾವೆಲ್ ವ್ಲಾಗರ್ ಆಗಿದ್ದು, ಅವರು ಭಾರತ, ಪಾಕಿಸ್ತಾನ, ಶ್ರೀಲಂಕಾ, ಮೆಕ್ಸಿಕೊ, ಇಂಡೋನೇಷ್ಯಾ, ಯುಎಸ್ಎ, ವಿಯೆಟ್ನಾಂ ಮತ್ತು ಇನ್ನೂ ಅನೇಕ ದೇಶಗಳನ್ನು ಸುತ್ತಿರುವ ವಿಡಿಯೋಗಳನ್ನು ಮಾಡಿದ್ದಾರೆ.

ಈ ಸುದ್ದಿಯನ್ನು ಓದಿ: Melania Trump: ಟ್ರಂಪ್‌ ಪತ್ನಿಯ ವೆಡ್ಡಿಂಗ್‌ ಗೌನ್‌ ಹರಾಜಿಗೆ? ಬೆಲೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ವಿಡಿಯೋ ಅಪ್ಲೋಡ್‌ ಆದ ಕೆಲವೇ ತಾಸುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಗೆಯ ಚರ್ಚೆಗಳಿಗೆ ನಾಂದಿ ಹಾಡಿದೆ. ಭಾರತದ ಪ್ರವಾಸೋದ್ಯಮ ಮತ್ತು ಇಲ್ಲಿನ ಆತಿಥ್ಯವನ್ನು ಕೆಲವು ಟೀಕಿಸಿದರೆ, ಇನ್ನು ಕೆಲವರು ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ. ಆದರೆ, ಬಹುತೇಕರು ಸೌಮುರೆ ಅವರ ಅಭಿಪ್ರಾಯವೇ ಸರಿ ಎಂದು ಹೇಳಿದ್ದಾರೆ.

“ದುಬೈನಲ್ಲಿ ವಾಸಿಸುವ ಆಫ್ರಿಕನ್ ಆಗಿ ನಾನು ಸೌಮುರೆ ಮಾತನ್ನು ಒಪ್ಪುತ್ತೇನೆ. ಪಾಕಿಸ್ತಾನಿಗಳು ಭಾರತೀಯರಿಗಿಂತ ಹೆಚ್ಚು ಸ್ನೇಹಪರರು. ಪಾಕಿಸ್ತಾನಿಗಳು ನಿಮ್ಮನ್ನು ಸ್ನೇಹಿತರಂತೆ ನೋಡಿದರೆ, ಭಾರತೀಯರು ನಿಮ್ಮನ್ನು ಅಪರಿಚಿತರಂತೆ ನೋಡುತ್ತಾರೆ” ಎಂದು ಇನ್‌ಸ್ಟಾಗ್ರಾಮ್ ಯೂಸರ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಭಾರತೀಯ, “ನಾನು ಭಾರತೀಯನಾಗಿದ್ದರು ಕೂಡಾ ಇದನ್ನು ಒಪ್ಪುತ್ತೇನೆ” ಎಂದಿದ್ದಾರೆ.

ಇನ್ನು ಕೆಲವರು ಪಾಕಿಸ್ತಾನದ ದುಸ್ಥಿತಿಯೇ ಅವರ ಆತಿಥ್ಯಕ್ಕೆ ಕಾರಣ ಎಂದು ಹೇಳಿದ್ದಾರೆ. “ಭಾರತಕ್ಕೆ ಸಾವಿರಾರು ಪ್ರವಾಸಿಗರು ಬರುವುದರಿಂದ, ಇಲ್ಲಿನವರು ವಿದೇಶಿಗರಿಗೆ ಹೊಂದಿಕೊಂಡಿದ್ದಾರೆ. ಇದು ಪ್ರವಾಸಿ ತಾಣಗಳ ಸುತ್ತಲಿನ ಆರ್ಥಿಕತೆಯನ್ನೂ ಬಲಪಡಿಸುತ್ತದೆ. ಆದರೆ, ಪಾಕಿಸ್ತಾನಕ್ಕೆ ವರ್ಷದಲ್ಲಿ ನೂರೋ ಇನ್ನೂರೋ ಪ್ರವಾಸಿಗರು ಬರುತ್ತಾರೆ. ವಿದೇಶಿಯರನ್ನು ನೋಡುವುದೇ ಅವರಿಗೆ ಒಂದು ದೊಡ್ಡ ಸಂಭ್ರಮದಂತೆ ಅನಿಸುತ್ತದೆ” ಎಂದು ಕಾಮೆಂಟ್‌ ಮಾಡಿದ್ದಾರೆ.