ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಹಾಡಹಗಲೇ ಮಹಿಳೆಯ ಬ್ಯಾಗ್‍ ಕಸಿಯಲೆತ್ನಿಸಿದ ದುಷ್ಕರ್ಮಿಗಳು; ಆಮೇಲೆ ಆಗಿದ್ದೇ ಬೇರೆ!

ಇತ್ತೀಚೆಗೆ ಆಗ್ರಾದಲ್ಲಿ ಹಾಡಹಗಲಿನಲ್ಲಿಯೇ ದುಷ್ಕರ್ಮಿಗಳು ಮಹಿಳೆಯೊಬ್ಬಳ ಬ್ಯಾಗ್‍ ಕಸಿದುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿತ್ತು. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ವೈರಲ್(Viral Video) ಆಗಿದೆ.

ಮಹಿಳೆಯ ಬ್ಯಾಗ್‌ಗೆ ಸ್ಕೆಚ್‌ ಹಾಕಿದ ದುಷ್ಕರ್ಮಿಗಳಿಗೆ ಆಗಿದ್ದೇನು? ವಿಡಿಯೊ ಫುಲ್‌ ವೈರಲ್‌

Bag Snatching

Profile pavithra Jan 20, 2025 1:06 PM

ಆಗ್ರಾ : ಆಗ್ರಾದಲ್ಲಿ ಹಾಡಹಗಲಿನಲ್ಲಿಯೇ ದುಷ್ಕರ್ಮಿಗಳು ಮಹಿಳೆಯೊಬ್ಬಳ ಬ್ಯಾಗ್‍ ಕಸಿದುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಆದರೆ ಮಹಿಳೆ ತನ್ನ ಬ್ಯಾಗ್‍ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಕಳ್ಳರ ಯೋಜನೆ ವಿಫಲಗೊಂಡಿದೆ. ಈ ಘಟನೆಯ ದೃಶ್ಯ. ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಮಹಿಳೆಯೊಬ್ಬಳು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಬ್ಯಾಗ್‍ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ತನ್ನ ಬ್ಯಾಗ್‍ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅದನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ದುರ್ಷ್ಕರ್ಮಿ ಬ್ಯಾಗ್ ಎಳೆದ ರಭಸಕ್ಕೆ ಮಹಿಳೆ ರಸ್ತೆಯ ಮೇಲೆ ಬಿದ್ದಿದ್ದಾಳೆ. ಆದರೆ ತನ್ನ ಬ್ಯಾಗ್‍ ಅನ್ನು ಮಾತ್ರ ಬಿಡಲಿಲ್ಲ. ಇದರಿಂದ ದುಷ್ಕರ್ಮಿಗಳ ಯೋಜನೆ ಫಲಿಸದೆ ಬ್ಯಾಗ್ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.



ಈ ಸುದ್ದಿಯನ್ನೂ ಓದಿ:Viral Video: ಬೆಡ್‌ಶೀಟ್‌ ಕದ್ದು ಲಗೇಜ್ ಬ್ಯಾಗ್‌ನೊಳಗೆ ಬಚ್ಚಿಟ್ಟ ಖತರ್ನಾಕ್‌ ಪ್ರಯಾಣಿಕರು!

ಉತ್ತರ ಪ್ರದೇಶದ ಮೊರಾದಾಬಾದ್-ಆಗ್ರಾ ಹೆದ್ದಾರಿಯಲ್ಲಿ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನ ಜೊತೆ ಜಗಳವಾಡಿದ ಸೆಕ್ಯುರಿಟಿ ಗಾರ್ಡ್ ಅನ್ನು ಪ್ರಿಯಕರ ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಘಟನೆ ನಡೆದಿದೆ.

ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಸಮೀರ್ (31) ತನ್ನ ಪತ್ನಿ ನೂರ್ ಅಫ್ಶಾ (29) ಮತ್ತು ಆಕೆಯ ಪ್ರಿಯಕರ ನಜ್ರುಲ್ ಹಸನ್ (32) ಅವರೊಂದಿಗೆ ಜಗಳವಾಡಿದ್ದಾನೆ. ಆಗ ಪ್ರಿಯಕರ ಹಸನ್ ಸಮೀರ್‌ನನ್ನು ಅಲ್ಲಿಂದ ಓಡಿಸುವ ಪ್ರಯತ್ನದಲ್ಲಿ, ಆತ ಕಾರನ್ನು ವೇಗವಾಗಿ ಓಡಿಸಿದ್ದಾನೆ. ಆದರೆ ಕಾರು ಹೆದ್ದಾರಿಯಲ್ಲಿ 80-90 ಕಿ.ಮೀ ವೇಗದಲ್ಲಿದ್ದಾಗ ಸಮೀರ್ ಕಾರಿನ ಬಾನೆಟ್ ಮೇಲೆ ಕುಳಿತುಕೊಂಡಿದ್ದಾನೆ. ಇದರಿಂದ ಆತನ ಜೀವ ಉಳಿದಿದೆ ಎನ್ನಲಾಗಿದೆ.