ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನೇಪಾಳದಲ್ಲಿ ಮರುಹುಟ್ಟು ಪಡೆದನೇ ಅಡಾಲ್ಫ್‌ ಹಿಟ್ಲರ್?‌ ಈ ವಿದ್ಯಾರ್ಥಿಯ ಭಾಷಣ ವೈರಲ್‌ ಆಗುತ್ತಿರುವುದೇಕೆ?

ಎರಡನೇ ವಿಶ್ವಯುದ್ಧಕ್ಕೆ ಕಾರಣವಾದ‌ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಅನ್ನು ಪ್ರಪಂಚದ ಇತಿಹಾಸ ಎಂದಿಗೂ ಮರೆಯುವುದಿಲ್ಲ. ಅವರು ತಮ್ಮ ಸೇನೆಯನ್ನು ಹುರಿದುಂಬಿಸುತ್ತಿದ್ದ ರೀತಿ, ಅವರ ಬೆಂಕಿಯುಗುಳುವ ಭಾಷಣಗಳು, ತಮ್ಮ ವಾಕ್ಚಾತುರ್ಯದಿಂದಲೇ ಯಾರನ್ನು ಬೇಕಾದರೂ ಮೋಡಿ ಮಾಡಬಲ್ಲ ಕಲೆ ಅವರಿಗೆ ಸಿದ್ಧಿಸಿತ್ತು. ಆದರೆ, ಈಗ ಯಾಕೆ ಹಿಟ್ಲರ್‌ ಬಗ್ಗೆ ನೆನಪು ಮಾಡುತ್ತಿದ್ದೇವೆ ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ(Viral Video) ನೋಡಿ.

ಈ ವಿದ್ಯಾರ್ಥಿಯ ಭಾಷಣ ಇಷ್ಟು ವೈರಲ್‌ ಆಗುತ್ತಿರುವುದೇಕೆ?

ವಿದ್ಯಾರ್ಥಿ ಓರಾ

Profile Sushmitha Jain Mar 17, 2025 11:53 AM

ಬೆಂಗಳೂರು: ಎರಡನೇ ವಿಶ್ವಯುದ್ಧಕ್ಕೆ ಕಾರಣವಾದ‌ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಅನ್ನು ಪ್ರಪಂಚದ ಇತಿಹಾಸ ಎಂದಿಗೂ ಮರೆಯುವುದಿಲ್ಲ. ಅವರು ತಮ್ಮ ಸೇನೆಯನ್ನು ಹುರಿದುಂಬಿಸುತ್ತಿದ್ದ ರೀತಿ, ಅವರ ಬೆಂಕಿಯುಗುಳುವ ಭಾಷಣಗಳು, ತಮ್ಮ ವಾಕ್ಚಾತುರ್ಯದಿಂದಲೇ ಯಾರನ್ನು ಬೇಕಾದರೂ ಮೋಡಿ ಮಾಡಬಲ್ಲ ಕಲೆ ಅವರಿಗೆ ಸಿದ್ಧಿಸಿತ್ತು. ಆದರೆ, ಈಗ ಯಾಕೆ ಹಿಟ್ಲರ್‌ ಬಗ್ಗೆ ನೆನಪು ಮಾಡುತ್ತಿದ್ದೇವೆ ಎಂದು ಯೋಚಿಸುತ್ತಿದ್ದೀರಾ? ಇದಕ್ಕೆಲ್ಲಾ ಕಾರಣ ಒಬ್ಬ ವಿದ್ಯಾರ್ಥಿ ತನ್ನ ಶಾಲೆಯಲ್ಲಿ ಮಾಡಿದ ಆ ಒಂದು ಭಾಷಣ. ಈ ಭಾಷಣ ನೋಡಿದ ಎಲ್ಲ ನೆಟ್ಟಿಗರ(Viral Video) ಕಣ್ಣಮುಂದೆ ಒಂದು ಬಾರಿಗೆ ಹಿಟ್ಲರ್‌ ಕಾಣಿಸಿದ್ದಂತೂ ನಿಜ.

ಅಂದ ಹಾಗೆ, ಈ ವಿದ್ಯಾರ್ಥಿಯ ಹೆಸರು ಓರಾ ಎಂದು. ಇವನು ಭಾರತೀಯನಲ್ಲ, ಪಕ್ಕದ ನೇಪಾಳದವನು. ಇಂಟರ್ನೆಟ್‌ನಲ್ಲಿ ರಾತ್ರೋರಾತ್ರಿ ಸಂಚಲನ ಮೂಡಿಸಿರುವ ಓರಾ, ತಮ್ಮ ಭಾಷಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೇಶದ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಮಾತುಗಳನ್ನಾಡಿದ್ದಾರೆ. ಈ ಭಾಷಣದ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ನೆಟ್ಟಿಗರು ಈತನನ್ನು ಅಡಾಲ್ಫ್‌ ಹಿಟ್ಲರ್‌ ಜತೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ.

ವಿಡಿಯೋದಲ್ಲಿ, ಓರಾ ತಮ್ಮ ಶಾಲಾ ಸಮವಸ್ತ್ರ ಧರಿಸಿ ವೇದಿಕೆಯ ಮೇಲೆ ನಿಂತು ತಮ್ಮ ಮುಂದೆ ಕುಳಿತಿದ್ದ ಬೃಹತ್ ಪ್ರೇಕ್ಷಕರ ಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದರು. ಅವರು ತಮ್ಮ ದೇಶದ ಭವಿಷ್ಯಕ್ಕಾಗಿ ಒಂದು ದೃಷ್ಟಿಕೋನವನ್ನು ಉಲ್ಲೇಖಿಸುವ ಮೂಲಕ ಭಾಷಣ ಪ್ರಾರಂಭಿಸಿದರು: "ಇಂದು, ನಾನು ಹೊಸ ನೇಪಾಳವನ್ನು ನಿರ್ಮಿಸುವ ಕನಸಿನೊಂದಿಗೆ ಇಲ್ಲಿ ನಿಂತಿದ್ದೇನೆ. ಭರವಸೆ ಮತ್ತು ಉತ್ಸಾಹದ ಬೆಂಕಿ ನನ್ನೊಳಗೆ ಉರಿಯುತ್ತಿದೆ" ಎಂಬುದು ಅವರ ಭಾಷಣದ ಮೊದಲ ಸಾಲು.

ಓರಾ ಭಾಷಣ ಮಾಡಿದ ದಿಟ್ಟ ಶೈಲಿ, ಜನರನ್ನು ತಮ್ಮೆಡೆಗೆ ಸೆಳೆಯುವ ಆ ಕೌಶಲ್ಯ ಅಲ್ಲಿ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು. ದೇಶದ ಯುವಕರು ನೇಪಾಳದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಯಾವ ರೀತಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಈಗಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಗೆಲ್ಲಲು ಹೇಗೆ ಸಹಾಯ ಮಾಡಬೇಕು ಎಂಬುದರ ಕುರಿತು ಅವರು ನಿರರ್ಗಳವಾಗಿ ಮಾತನಾಡಿದರು.

ಈ ಸುದ್ದಿಯನ್ನು ಓದಿ:‌Viral Video: ನಡುರಸ್ತೆಯಲ್ಲಿ ಎದುರಾದ ಸಿಂಹಗಳನ್ನು ನೋಡಿ ಬೈಕ್‌ ಸವಾರರು ಮಾಡಿದ್ದೇನು; ಬೆಚ್ಚಿಬೀಳಿಸುವ ವಿಡಿಯೊ ವೈರಲ್

"ಯುವಕರೇ, ಎದ್ದೇಳಿ! ನೀವು ಬದಲಾವಣೆಯ ಪಥದರ್ಶಕರು. ನೀವು ನಮ್ಮ ಧ್ವನಿಯನ್ನು ಪ್ರತಿಧ್ವನಿಸದಿದ್ದರೆ, ಇನ್ನು ಯಾರು ಮಾಡುತ್ತಾರೆ?" ಎಂದು ಅವರು ಏರುದನಿಯಲ್ಲಿ ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಓರಾ ಅವರ ಬೆಂಕಿಯುಗುಳುವ ಭಾಷಣ ಹಾಗೂ ಅವರ ವರ್ತನೆ ಜನರಿಗೆ ಹಿಟ್ಲರ್ ಮತ್ತು ಅವರ ಸಾರ್ವಜನಿಕ ಭಾಷಣಗಳನ್ನು ನೆನಪಿಸಿದೆ. "ಅಡಾಲ್ಫ್ ನೇಪಾಳದಲ್ಲಿ ಪುನರ್ಜನ್ಮ ಪಡೆದಿದ್ದಾರೆ" ಎಂದು ಒಬ್ಬರು ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೇಪಾಳದ ಸಾಮಾನ್ಯದ ಸರ್‌ನೇಮ್‌ ಆದ ʼಥಾಪಾʼವನ್ನು ಹಿಟ್ಲರ್‌ ಹೆಸರಿನೊಂದಿಗೆ ಲಗತ್ತಿಸಿ “ಅಡಾಲ್ಫ್‌ ಥಾಪಾ” ಎಂದು ಕರೆಯುವ ಮೂಲಕ, ಆತನ ಭಾಷಣ ಹಿಟ್ಲರ್‌ನ ಭಾಷಣಗಳಿಗೆ ಸಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವು ಭಾರತೀಯ ನೆಟ್ಟಿಗರು, ಓರಾ ಅವರ ಪದಗಳ ಆಯ್ಕೆ ಮತ್ತು ವಾಕ್ಯಗಳ ರಚನೆಯನ್ನು ಕಾಂಗ್ರೆಸ್‌ ಸಂಸದ ಹಾಗೂ ಲೇಖಕ ಶಶಿ ತರೂರ್‌ ಅವರೊಂದಿಗೆ ಹೋಲಿಸಿದ್ದಾರೆ. ಶಶಿ ತರೂರ್‌ ಅತ್ಯಂತ ಕ್ಲಿಷ್ಟಕರವಾದ ಮತ್ತು ಅನನ್ಯ ಪದ ಬಳಕೆ ಮಾಡುವಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಆದರೆ, ಓರಾ ಮಾಡಿದ್ದು ಸಾಮಾನ್ಯ ಭಾಷಣವೋ, ಪ್ರತಿಭಾ ಪ್ರದರ್ಶನವೋ ಅಥವಾ ವಿದ್ಯಾರ್ಥಿಗಳು ಐತಿಹಾಸಿಕ ವ್ಯಕ್ತಿಗಳನ್ನು ಪ್ರತಿನಿಧಿಸುವ ಪ್ರದರ್ಶನವೋ, ನೇಪಾಳಿ ವಿದ್ಯಾರ್ಥಿ ಹಿಟ್ಲರನ ಪಾತ್ರವನ್ನು ನಿರೂಪಿಸಿದ ಪ್ರದರ್ಶನವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.