ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅತ್ಯಾಚಾರದ ಆರೋಪಿ ಕ್ರಿಶ್ಚಿಯನ್‌ ಧರ್ಮಪ್ರಚಾರಕನಿಂದ ವೃದ್ಧೆ ಮೇಲೆ ಹಲ್ಲೆ- ಶಾಕಿಂಗ್‌ ವಿಡಿಯೊ ವೈರಲ್

Viral Video: ಕ್ರಿಶ್ಚಿಯನ್‌ ಧರ್ಮಪ್ರಚಾರಕನಾಗಿರುವ ಬಲ್ಜಿಂದರ್‌ ಸಿಂಗ್‌ನ ಸ್ವಂತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ, ತನ್ನ ರಿವಾಲ್ವಿಂಗ್‌ ಚೇರ್‌ ಮೇಲೆ ಕುಳಿತಿದ್ದ ಬಲ್ಜಿಂದರ್‌ ಸಿಂಗ್‌, ಏಕಾಏಕಿ ಎದ್ದು ನಿಂತು ಓರ್ವ ಯುವಕನತ್ತ ಹಲವು ವಸ್ತುಗಳನ್ನು ಎಸೆದಿದ್ದಾನೆ. ಆ ಧರ್ಮಪ್ರಚಾರಕನ ಈ ವರ್ತನೆಗೆ ಕಾರಣವೇನು..? ಏನಿದು ಪ್ರಕರಣ..? ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಕ್ರಿಶ್ಚಿಯನ್‌ ಧರ್ಮಪ್ರಚಾರಕ!

Profile Sushmitha Jain Mar 24, 2025 1:52 PM

ಬೆಂಗಳೂರು: ಧರ್ಮದ ಹೆಸರಿನಲ್ಲಿ ಜನರನ್ನು ಮರುಳು ಮಾಡಿ ಅವರ ಮೇಲೆ ಹಲವು ರೀತಿಯ ದೌರ್ಜನ್ಯ (Physical Abuse)ಗಳನ್ನು ನಡೆಸಿದ ಘಟನೆಗಳು ಈ ಹಿಂದೆಯೂ ವರದಿಯಾಗಿದೆ. ಆದರೆ, ಜನರು ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮತ್ತೆ ಮತ್ತೆ ಧಾರ್ಮಿಕ ಮುಖಂಡರ ದೌರ್ಜನ್ಯಗಳಿಗೆ ಬಲಿಪಶುಗಳಾಗುತ್ತಲೇ ಇದ್ದಾರೆ. ಇಂತಹುದೇ ಒಂದು ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಇಲ್ಲಿ ಅತ್ಯಾಚಾರದ ಆರೋಪ ಹೊತ್ತಿದ್ದ ಕ್ರಿಶ್ಚಿಯನ್‌ ಧರ್ಮ ಪ್ರಚಾರಕ(Christian Preacher)ನೊಬ್ಬ ವೃದ್ಧ ಮಹಿಳೆ ಸೇರಿ ಹಲವರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯು ಸಿಸಿಟಿವಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದು ಸದ್ಯಕ್ಕೆ ವೈರಲ್‌ ಆಗಿದೆ. ವಿಡಿಯೋ ವೈರಲ್‌(Video Viral) ಆದ ಬಳಿಕ ಜನರು ಆ ಧರ್ಮಪ್ರಚಾರಕನ ನಡವಳಿಕೆಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಕ್ರಿಶ್ಚಿಯನ್‌ ಧರ್ಮಪ್ರಚಾರಕನಾಗಿರುವ ಬಲ್ಜಿಂದರ್‌ ಸಿಂಗ್‌ನ ಸ್ವಂತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಇದಾಗಿದೆ. ವೈರಲ್‌ ವಿಡಿಯೋದಲ್ಲಿ, ತನ್ನ ರಿವಾಲ್ವಿಂಗ್‌ ಚೇರ್‌ ಮೇಲೆ ಕುಳಿತಿದ್ದ ಬಲ್ಜಿಂದರ್‌ ಸಿಂಗ್‌, ಏಕಾಏಕಿ ಎದ್ದು ನಿಂತು ಓರ್ವ ಯುವಕನತ್ತ ಹಲವು ವಸ್ತುಗಳನ್ನು ಎಸೆದಿದ್ದಾರೆ. ಅವರ ಆಟಾಟೋಪ ಇಷ್ಟಕ್ಕೇ ನಿಂತಿಲ್ಲ. ಸಿಂಗ್‌, ಆ ಯುವಕನನ್ನು ಹಿಡಿದು ಹಲವು ಬಾರಿ ಕಪಾಳಕ್ಕೆ ಹೊಡೆದಿದ್ದಾನೆ. ಮಾತ್ರವಲ್ಲದೇ, ಕುರ್ಚಿಯ ಮೇಲೆ ಕುಳಿತಿದ್ದ ವೃದ್ಧೆಯತ್ತ ಬೆರಳು ತೋರಿಸಿ ಕೋಪದಿಂದ ಏನೋ ಮಾತನಾಡಿದ್ದಾನೆ. ಆ ವೃದ್ಧೆ ತನ್ನ ಮಡಿಲಲ್ಲಿ ಅಪ್ರಾಪ್ತ ಬಾಲಕಿಯನ್ನು ಕೂರಿಸಿಕೊಂಡಿದ್ದಳು.

ಆ ವೃದ್ಧೆ ಜೊತೆ ಮಾತನಾಡುತ್ತಲೇ ಇದ್ದ ಸಿಂಗ್‌, ಆಕೆಯ ಮೇಲೆ ಮ್ಯಾಗಜೀನ್‌ ಒಂದನ್ನು ಎಸೆದಿದ್ದಾನೆ. ಈ ವೇಳೆ ಆಕ್ರೋಶಗೊಂಡ ಮಹಿಳೆ, ಧರ್ಮಪ್ರಚಾರಕನನ್ನು ಪ್ರಶ್ನಿಸಲು ಎದ್ದು ನಿಂತಿದ್ದಾಳೆ. ಇದರಿಂದಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿ ಹೋಗಿ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ ಸಿಂಗ್‌, ಮಹಿಳೆಯ ಕುತ್ತಿಗೆ ಹಿಡಿದು ತಳ್ಳಿರುವುದು ಕೂಡಾ ವಿಡಿಯೋದಲ್ಲಿ ಸೆರೆಯಾಗಿದೆ. ಸ್ಥಳದಲ್ಲಿದ್ದ ಇತರರು ಆತನನ್ನು ಸಮಾಧಾನಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಈ ಸುದ್ದಿಯನ್ನು ಓದಿ: Viral Video: ವಿಮಾನದಲ್ಲಿ ಧಮ್ ಹೊಡೆದ ಮಹಿಳೆ; ಮುಂದೇನಾಯ್ತು? ವಿಡಿಯೊ ನೋಡಿ!

ಘಟನೆಗೆ ಸಂಬಂಧಿಸಿದ ವೈರಲ್‌ ವಿಡಿಯೊ ಇಲ್ಲಿದೆ



ಏನಿದು ಅತ್ಯಾಚಾರ ಪ್ರಕರಣ?

2018ರಲ್ಲಿ ಇದೇ ಧರ್ಮಪ್ರಚಾರಕ ಬಲ್ಜಿಂದರ್‌ ಸಿಂಗ್‌ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದರು. ಸಿಂಗ್‌ ಮೊಹಾಲಿಯಲ್ಲಿರುವ ತಮ್ಮ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ ಎಸೆದು ಅದನ್ನು ಫೋನ್‌ನಲ್ಲಿ ವಿಡಿಯೋ ಮಾಡಿ ಬೆದರಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಂಗ್‌ನನ್ನು ಬಂಧಿಸಿದ್ದರು ಕೂಡಾ. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಿಂಗ್‌, ಕಳೆದ ವಾರ ಈ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ವರದಿಯಾಗಿದೆ. ಇಂತಹ ಘೋರ ಆರೋಪವನ್ನು ಹೊತ್ತಿರುವ ವ್ಯಕ್ತಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದು, ಇದು ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.