Kash Patel: FBI ನಿರ್ದೇಶಕರಾಗಿ ನೇಮಕಗೊಂಡ ಭಾರತೀಯ ಕಾಶ್ ಪಟೇಲ್‌ಗೆ ಬಾಲಿವುಡ್ ಸ್ಟೈಲ್‌ನಲ್ಲಿ ಸ್ವಾಗತ
ಶ್ವೇತಭವನದ ಸಹಾಯಕ ಅಧ್ಯಕ್ಷರಾಗಿರುವ ಡಾನ್ ಸ್ಕ್ಯಾವಿನೊ ಹಾಗೂ ಉಪ ಮುಖ್ಯಸ್ಥರ ತಂಡದರು ಕಾಶ್ ಪಟೇಲ್ ಅವರನ್ನು ಬಾಲಿವುಡ್ ಸಿನೆಮಾದ ಮೂಲಕ ಶ್ವೇತಭವನಕ್ಕೆ ವೆಲ್ ಕಮ್ ಮಾಡಿದ್ದು, ನಟ ರಣವೀರ್ ಸಿಂಗ್ ಅಭಿನಯದ 'ಬಾಜಿರಾವ್ ಮಸ್ತಾನಿ' ಚಿತ್ರದ 'ಮಲ್ಹಾರಿ' ಹಾಡನ್ನು ಎಡಿಟ್ ಮಾಡಿ ರಣವೀರ್ ಸಿಂಗ್ ಮುಖದ ಜಾಗದಲ್ಲಿ ಪಟೇಲ್ ಅವರ ಫೇಸ್ ಅನ್ನು ಎಡಿಟ್ ಮಾಡಿದ್ದಾರೆ.

ಅಮೆರಿಕದ ಎಫ್‌ಬಿಐ ನಿರ್ದೇಶಕರಾಗಿ ನೇಮಕಗೊಂಡ ಕಾಶ್ ಪಟೇಲ್

ವಾಷಿಂಗ್ಟನ್: ಅಮೆರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಪ್ತ ಕಾಶ್ ಪಟೇಲ್(Kash Patel) ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ನಿರ್ದೇಶಕರ ಪ್ರಬಲ ಸ್ಥಾನಕ್ಕೆ ನೇಮಿಸಿದ್ದು, ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಮುಖ ತನಿಖಾ ಸಂಸ್ಥೆ ಆಗಿರುವ ಎಫ್‌ಬಿಐ ನ ನಿರ್ದೇಶಕ ಸ್ಥಾನ ಭಾರತೀಯನಿಗೆ ಒಲಿದಿದ್ದು, ಎಫ್‌ಬಿಐ ನಿರ್ದೇಶಕರನ್ನಾಗಿ (FBI director) ಕಾಶ್ ಪಟೇಲ್ ಅವರನ್ನು ದೃಢೀಕರಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅಮೆರಿಕದ ಸೆನೆಟ್ ಮತದಾನ ನಡೆಸಿತ್ತು. 51-49 ಮತಗಳ ಅಂತರದಲ್ಲಿ ಕಾಶ್ ಪಟೇಲ್ ಎಫ್‌ಬಿಐ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಕಾಶ್ ಪಟೇಲ್ ಭಾರತೀ ಮೂಲದ ಇವರು ಅಮೆರಿಕದ ಪ್ರತಿಷ್ಠಿತ ಎಫ್‌ಬಿಐನ ಮೊದಲ ಭಾರತೀಯ ಮೂಲದ ನಿರ್ದೇಶಕರಾಗಿ ಆಯ್ಕೆಗೊಂಡಿದ್ದು, ಮೊದಲ ಏಷ್ಯನ್ ಮೂಲದ ನಾಯಕರಾಗುತ್ತಾರೆ. ವಿಶೇಷವೆಂದರೆ ಕಾಶ್ ಪಟೇಲ್ ಅವರಿಗೆ ಸ್ಪೆಷಲ್ ಆಗಿ ಟ್ರಂಪ್ ತಂಡ ಅಭಿನಂದನೆ ಸಲ್ಲಿಸಿದ್ದು, ಶ್ವೇತ ಭವನಕ್ಕೆ ಆಗಮಿಸಿದ ಅವರಿಗೆ ಬಾಲಿವುಡ್ ಸ್ಟೈಲ್ ನಲ್ಲಿ ಸ್ವಾಗತ ಕೊರಲಾಗಿದೆ.
ಹೌದು ಶ್ವೇತಭವನದ ಸಹಾಯಕ ಅಧ್ಯಕ್ಷರಾಗಿರುವ ಡಾನ್ ಸ್ಕ್ಯಾವಿನೊ ಹಾಗೂ ಉಪ ಮುಖ್ಯಸ್ಥರ ತಂಡದರು ಪಟೇಲ್ ಅವರನ್ನು ಬಾಲಿವುಡ್ ಸಿನೆಮಾದ ಮೂಲಕ ಶ್ವೇತಭವನಕ್ಕೆ ವೆಲ್ ಕಮ್ ಮಾಡಿದ್ದು, ನಟ ರಣವೀರ್ ಸಿಂಗ್ ಅಭಿನಯದ 'ಬಾಜಿರಾವ್ ಮಸ್ತಾನಿ' ಚಿತ್ರದ 'ಮಲ್ಹಾರಿ' ಹಾಡನ್ನು ಎಡಿಟ್ ಮಾಡಿ ರಣವೀರ್ ಸಿಂಗ್ ಮುಖದ ಜಾಗದಲ್ಲಿ ಪಟೇಲ್ ಅವರ ಫೇಸ್ ಅನ್ನು ಎಡಿಟ್ ಮಾಡಿದ್ದಾರೆ. ಜೊತೆಗೆ ಆಡೀಯೋ ಕ್ಲಿಪ್ ಅನ್ನು ಎಡಿಟ್ ಮಾಡಿದ್ದು, ನಮ್ಮ ಶತ್ರುಗಳನ್ನು ಮಟ್ಟ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ, ಬನ್ನಿ ಈ ಸಂತೋಷದ ಕ್ಷಣಗಳನ್ನು ಸಂಭ್ರಮಿಸೋಣ ಎಂಬ ಹಾಡನ್ನು ಹಾಕಲಾಗಿದೆ.
ಈ ಸುದ್ದಿಯನ್ನು ಓದಿ: Donald Trump : ವಿದೇಶಗಳಿಗೆ ನೀಡುತ್ತಿದ್ದ ನೆರವು ಹಣಕ್ಕೆ ಬಿತ್ತು ಬ್ರೇಕ್ ; ಡೊನಾಲ್ಡ್ ಟ್ರಂಪ್ ಮಹತ್ವದ ಆದೇಶ
ಸದ್ಯ ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಟ್ಟು 47 ಸೆಕೆಂಡುಗಳ ಈ ವಿಡೀಯೋ ಇದುವರೆಗೆ ಮೂರು ಮಿಲಿಯನ್ ವ್ಯೂವ್ ಮತ್ತು 10,000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದುಕೊಂಡಿದೆ.
Congratulations to the new Director of the FBI, @Kash_Patel! pic.twitter.com/JsANV0s9cP
— Dan Scavino (@Scavino47) February 20, 2025
ಕಾಶ್ ಪಟೇಲ್ ಯಾರು?
ಕಾಶ್ ಪಟೇಲ್ ನಿಜವಾದ ಹೆಸರು ಕಶ್ಯಪ್ ಪ್ರಮೋದ್ ವಿನೋದ್ ಪಟೇಲ್. ಮಾಜಿ ಸಾರ್ವಜನಿಕ ವಕೀಲ ಕಾಶ್ ಪಟೇಲ್, ವಾಷಿಂಗ್ಟನ್, ಡಿಸಿಯ ಅಧಿಕಾರ ವಲಯಗಳಲ್ಲಿ ಭಾರೀ ಪ್ರಭಾವಿ. ಅವರು ಈ ಹಿಂದೆ ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಮುಖ್ಯಸ್ಥರಾಗಿ ಮತ್ತು ರಾಷ್ಟ್ರೀಯ ಗುಪ್ತಚರ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಪಟೇಲ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರಲ್ಲಿ ಒಬ್ಬರಾಗಿದ್ದು, ಈಗ, ಅವರು ಎಫ್‌ಬಿಐ ಅನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ನ್ಯೂಯಾರ್ಕ್ ಮೂಲದ ಪಟೇಲ್ ಅವರು ಮೂಲತಃ ಭಾರತದ ಗುಜರಾತಿನವರು. ಅವರ ಪೋಷಕರು ಪೂರ್ವ ಆಫ್ರಿಕಾದ ತಾಯಿ ತಾಂಜಾನಿಯಾದಿಂದ ಮತ್ತು ತಂದೆ ಉಗಾಂಡಾದಿಂದ ಬಂದವರು. 1970 ರ ದಶಕದಲ್ಲಿ ಕೆನಡಾದಿಂದ ಅಮೆರಿಕಾಕ್ಕೆ ಬಂದರು. 70 ರ ದಶಕದ ಉತ್ತರಾರ್ಧದಲ್ಲಿ ಕುಟುಂಬವು ನ್ಯೂಯಾರ್ಕ್‌ನ ಬಂದು ನೆಲೆಸಿತು. ಕಾಶ್ ಪಟೇಲ್ ಜನಿಸಿದ್ದು ಅಲ್ಲಿಯೇ. ಪಟೇಲ್ ಅವರ ಪೋಷಕರು ಈಗ ನಿವೃತ್ತರಾಗಿ ಯುಎಸ್ ಮತ್ತು ಗುಜರಾತ್ ಎರಡರಲ್ಲೂ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.
ಟ್ರಂಪ್ ವಿರುದ್ಧ ಆರೋಪ ಮಾಡಿದ್ದ ಸಂಸ್ಥೆಗೆ ಕಾಶ್ ಮುಖ್ಯಸ್ಥ
2021 ರ ನಂತರ ಟ್ರಂಪ್ ಅವರನ್ನು ವರ್ಗೀಕೃತ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಮತ್ತು ಅಂದಿನ ಅಧ್ಯಕ್ಷ ಜೋ ಬಿಡನ್ ವಿರುದ್ಧ 2020 ರ ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಲು ಅವರು ಮಾಡಿದ ಪ್ರಯತ್ನಗಳ ಬಗ್ಗೆ ತನಿಖೆ ನಡೆಸಿದ ಸಂಸ್ಥೆ. ಅದಕ್ಕೆ ಈಗ ಕಾಶ್ ಪಟೇಲ್ ನೀರ್ದೇಶಕಾರಾಗುತ್ತಿದ್ದಾರೆ.