ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಜಾಬ್ ವಿವಾದದ 23 ದಿನಗಳ ನಂತರ ಸೇವೆಗೆ ಸೇರ್ಪಡೆಯಾದ ಬಿಹಾರದ ವೈದ್ಯೆ ನುಸ್ರತ್ ಪರ್ವೀನ್

hijab controversy: ಡಿಸೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಹಿಜಾಬ್ ತೆಗೆಯಲ್ಪಟ್ಟ ಘಟನೆ ವಿವಾದಕ್ಕೆ ಕಾರಣವಾಗಿದ್ದ ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಅವರು, ಆ ಘಟನೆಯ 23 ದಿನಗಳ ನಂತರ ಬುಧವಾರ ಬಿಹಾರದಲ್ಲಿ ತಮ್ಮ ಹುದ್ದೆಗೆ ಸೇರ್ಪಡೆಗೊಂಡಿದ್ದಾರೆ.

ಹಿಜಾಬ್ ವಿವಾದದ 23 ದಿನಗಳ ನಂತರ ಸೇವೆಗೆ ಸೇರ್ಪಡೆಯಾದ ವೈದ್ಯೆ

ಸಾಂದರ್ಭಿಕ ಚಿತ್ರ -

Priyanka P
Priyanka P Jan 8, 2026 2:22 PM

ಪಟನಾ, ಜ.08: ಡಿಸೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಅವರಿಂದ ಹಿಜಾಬ್ ತೆಗೆಯಲ್ಪಟ್ಟ ಆಯುಷ್ ವೈದ್ಯೆ ನುಸ್ರತ್ ಪರ್ವೀನ್, ವಿವಾದಾತ್ಮಕ ಘಟನೆಯ 23 ದಿನಗಳ ನಂತರ ಬುಧವಾರ ಬಿಹಾರದಲ್ಲಿ ತಮ್ಮ ಹುದ್ದೆಗೆ ಸೇರ್ಪಡೆಗೊಂಡರು. ಅವರು ಸಿವಿಲ್ ಸರ್ಜನ್ ಕಚೇರಿಗೆ ಹಾಜರಾಗದೆ ನೇರವಾಗಿ ಇಲಾಖೆಗೆ ವರದಿ ಮಾಡಿದ್ದು, ವಿಸ್ತರಿಸಲಾಗಿದ್ದ ಕೊನೆಯ ಗಡುವಿನ ದಿನವೇ ಸೇರ್ಪಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು (hijab controversy).

ಪರ್ವೀನ್ ಅವರನ್ನು ಮೂಲತಃ ಡಿಸೆಂಬರ್ 20 ರಂದು ಕರ್ತವ್ಯಕ್ಕೆ ಹಾಜರಾಗುವಂತೆ ಕೇಳಲಾಗಿತ್ತು. ಆದರೆ ಅವರು ಅದನ್ನು ಪಾಲಿಸಲಿಲ್ಲ. ರಾಜ್ಯ ಸರ್ಕಾರವು ಸೇರ್ಪಡೆ ದಿನಾಂಕವನ್ನು ಮೊದಲು ಡಿಸೆಂಬರ್ 31 ಕ್ಕೆ ಮತ್ತು ನಂತರ ಜನವರಿ 7 ಕ್ಕೆ ವಿಸ್ತರಿಸಿತು. ಅವರು ಅಂತಿಮವಾಗಿ ಬುಧವಾರ ವರದಿ ಮಾಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದರು.

ನಿತೀಶ್ ಕುಮಾರ್ ವೈದ್ಯೆಯ ಹಿಜಾಬ್‌ ಎಳೆದ ಪ್ರಕರಣ ಇನ್ನೂ ನಿಗಿನಿಗಿ ಕೆಂಡ; ಕರ್ತವ್ಯಕ್ಕೆ ಹಾಜರಾಗದ ವೈದ್ಯೆ

ಈ ಹಿಂದೆ ಎಚ್ಚರಿಕೆ ನೀಡಿದ್ದಂತೆ, ನಿಗದಿತ ಸಮಯದಲ್ಲಿ ಹಾಜರಾಗದಿದ್ದರೆ ಅವರ ನೇಮಕಾತಿ ರದ್ದಾಗುವ ಸಾಧ್ಯತೆ ಇತ್ತು. ಡಾ. ಪರ್ವೀನ್ ಅವರು ಪಟನಾ ಸದರ್‌ನ ಸಬಲ್‌ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರ್ಪಡೆಯಾಗಬೇಕೆಂದು ನಿರೀಕ್ಷಿಸಲಾಗಿತ್ತು. ಆದರೆ ಪಿಎಚ್‌ಸಿ ಶಸ್ತ್ರಚಿಕಿತ್ಸಕ ವಿಜಯ್ ಕುಮಾರ್ ಅವರು, ಡಾ. ಪರ್ವೀನ್ ಅಲ್ಲಿ ಹಾಜರಾಗಿಲ್ಲ ಎಂದು ದೃಢಪಡಿಸಿದ್ದು, ಅವರು ನೇರವಾಗಿ ಇಲಾಖೆಯಲ್ಲೇ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಳಿಸಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹಿಜಾಬ್ ಘಟನೆ

ಡಿಸೆಂಬರ್ 15 ರಂದು ಪಟನಾದ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಈ ಘಟನೆ ನಡೆದಿದ್ದು, ಆಯುಷ್ ವೈದ್ಯರು ನೇಮಕಾತಿ ಪತ್ರಗಳನ್ನು ಸ್ವೀಕರಿಸಲು ಅಲ್ಲಿ ಸೇರಿದ್ದರು. ಹಿಜಾಬ್ ಧರಿಸಿದ್ದ ಪರ್ವೀನ್ ಮುಂದೆ ಬಂದಾಗ, ನಿತೀಶ್ ಕುಮಾರ್ ಅವರು ಇದು ಏನು? ಎಂದು ಪ್ರಶ್ನಿಸಿದರು. ನಂತರ ತಮ್ಮ ಕೈಯಾರೆ ಅವರ ಹಿಜಾಬ್ ಅನ್ನು ತೆಗೆದರು. ಈ ಘಟನೆಯ ವಿಡಿಯೊ ವೈರಲ್ ಆಗಿತ್ತು. ಇದು ರಾಷ್ಟ್ರವ್ಯಾಪಿ ರಾಜಕೀಯ ಚರ್ಚೆಗಳು ಮತ್ತು ಭಾರಿ ಟೀಕೆಗಳಿಗೆ ಗುರಿಯಾಗಿತ್ತು.

ಪರ್ವೀನ್ ಅವರ ನೇಮಕಾತಿ ಪತ್ರವನ್ನು ನೀಡಿದ ನಂತರ ಮುಖ್ಯಮಂತ್ರಿಯವರು ಅವರ ಹಿಜಾಬ್ ಕಡೆಗೆ ಸನ್ನೆ ಮಾಡಿ, ಅದರ ಬಗ್ಗೆ ಪ್ರಶ್ನಿಸಿದ್ದಾರೆ. ನಂತರ ಹಿಜಾಬ್ ಅನ್ನು ಕೆಳಕ್ಕೆ ಎಳೆದಿದ್ದಾರೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಘಟನೆಗೆ ರಾಜಕಾರಣಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಅಭಿವ್ಯಕ್ತಿಯ ಪ್ರಶ್ನೆಗಳನ್ನು ಇದು ಹುಟ್ಟುಹಾಕಿತ್ತು.

ಇಲ್ಲಿದೆ ವಿಡಿಯೊ:



ಈ ಹಿಂದೆ, ಡಾ. ಪರ್ವೀನ್ ಅವರು ಎರಡನೇ ವರ್ಷದ ವಿದ್ಯಾರ್ಥಿನಿಯಾಗಿರುವ ಸರ್ಕಾರಿ ಟಿಬ್ಬಿ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಮಹ್ಫೂಜುರ್ ರೆಹಮಾನ್ ಅವರು, ಇದು ವಿಶೇಷ ಪ್ರಕರಣವಾಗಿರುವುದರಿಂದ ಅವರ ಸೇರ್ಪಡೆಗೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ ಎಂದು ದೃಢಪಡಿಸಿದ್ದರು. ಡಿಸೆಂಬರ್ ಅಂತ್ಯದವರೆಗೂ ಡಾ. ಪರ್ವೀನ್ ಹುದ್ದೆಗೆ ಸೇರ್ಪಡೆಯಾಗಿರಲಿಲ್ಲ ಎಂದು ರೆಹಮಾನ್ ತಿಳಿಸಿದ್ದು, ಅವರು ಕರ್ತವ್ಯ ಸ್ವೀಕರಿಸುತ್ತಾರೋ ಅಥವಾ ಉನ್ನತ ಶಿಕ್ಷಣವನ್ನು ಮುಂದುವರಿಸುತ್ತಾರೋ ಎಂಬ ಕುರಿತು ಅಸ್ಪಷ್ಟತೆ ಮುಂದುವರಿದಿತ್ತು ರೆಹಮಾನ್ ಹೇಳಿದರು.

ಡಾ. ನುಸ್ರತ್ ಪರ್ವೀನ್ ಅವರು ಡಿಸೆಂಬರ್ 17 ಅಥವಾ 18ರಂದು ಕೊನೆಯದಾಗಿ ಕಾಲೇಜಿಗೆ ಹಾಜರಾಗಿದ್ದರು. ತಮ್ಮ ಹುದ್ದೆಗೆ ಸೇರ್ಪಡೆಯಾಗುವುದಾಗಲಿ ಅಥವಾ ಮುಂದಿನ ಉನ್ನತ ಶಿಕ್ಷಣವನ್ನು ಮುಂದುವರಿಸುವುದಾಗಲಿ, ಅವರಿಗೆ ಎರಡೂ ಆಯ್ಕೆಗಳು ಇತ್ತು ಎಂದು ಅವರು ಹೇಳಿದರು.