ಪ್ರೇಯಸಿಯನ್ನು ಮೆಚ್ಚಿಸಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಯುವಕ
ಪ್ರತಿಯೊಬ್ಬ ಯುವತಿಯೂ ತನ್ನ ಪ್ರಿಯಕರ ವಿಶೇಷವಾಗಿ ಪ್ರಪೋಸ್ ಮಾಡಬೇಕು ಎನ್ನುವ ಕನಸು ಕಾಣುತ್ತಾಳೆ. ಈ ಆಸೆಯನ್ನು ಈಡೇರಿಸಲು ಹೋದ ಯುವಕನೊಬ್ಬ ಜಲಪಾತದ ತುತ್ತ ತುದಿಯಲ್ಲಿ ನಿಂತು ಸಿನಿಮೀಯ ರೀತಿಯಲ್ಲಿ ಪ್ರಪೋಸ್ ಮಾಡಲು ಯತ್ನಿಸಿ, ಜೀವಕ್ಕೆ ಕುತ್ತು ತಂದುಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆಯ ದೃಶ್ಯ

ನವದೆಹಲಿ: ಪ್ರತಿಯೊಬ್ಬ ಯುವತಿಯೂ ತನ್ನ ಪ್ರಿಯಕರ (Lover) ವಿಶೇಷವಾಗಿ ಪ್ರಪೋಸ್ (Propose) ಮಾಡಬೇಕು ಅಂತ ಕನಸು ಕಾಣುತ್ತಾಳೆ. ಇದೀಗ ಈ ಆಸೆಯನ್ನು ಈಡೇರಿಸಲು ಹೋದ ಯುವಕನೊಬ್ಬ ಜಲಪಾತದ (Waterfalls) ತುತ್ತ ತುದಿಯಲ್ಲಿ ನಿಂತು ಸಿನಿಮೀಯ ರೀತಿಯಲ್ಲಿ ಪ್ರಪೋಸ್ ಮಾಡಲು ಯತ್ನಿಸಿ, ಜೀವಕ್ಕೆ ಕುತ್ತು ತಂದುಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.
ವೈರಲ್ ವಿಡಿಯೊದಲ್ಲಿ ಯುವಕನೊಬ್ಬ ಜಲಪಾತದ ತುದಿಯಲ್ಲಿ ತನ್ನ ಪ್ರೇಯಸಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಲು ಮುಂದಾಗಿದ್ದಾನೆ. ಆಕೆಯನ್ನು ಮೊದಲು ಜಲಪಾತದ ಅಂಚಿಗೆ ಕಳುಹಿಸಿ, ಸುತ್ತಲಿನ ಸೌಂದರ್ಯವನ್ನು ಆಕೆ ವೀಕ್ಷಿಸುತ್ತಿರುವಾಗ, ಯುವಕ ಆಕೆಯನ್ನು ಕರೆದು ಜೇಬಿನಿಂದ ಉಂಗುರ ತೆಗೆದು ಬಂಡೆಯ ಮೇಲೆ ಮೊಣಕಾಲೂರಿ ಪ್ರಪೋಸ್ ಮಾಡಲು ಸಿದ್ಧನಾಗುತ್ತಾನೆ. ಆದರೆ ಈ ಸಂದರ್ಭದಲ್ಲಿ ಏಕಾಏಕಿ ಕಾಲು ಜಾರಿ ಯುವಕನ ನೀರಿಗೆ ಬೀಳುತ್ತಾನೆ.
ಈ ಸುದ್ದಿಯನ್ನು ಓದಿ: Viral Video: ಮಹಿಳೆ ಮೈಮೇಲೆ ಸಿಡಿದ ಪೆಟ್ರೋಲ್; ಅಷ್ಟಕ್ಕೂ ಆಗಿದ್ದೇನು?
ಮೊಣಕಾಲೂರಬೇಕೆಂಬ ಕ್ಷಣದಲ್ಲಿ ಯುವಕನ ಕಾಲು ಜಾರಿ ನೀರಿನ ರಭಸಕ್ಕೆ ಸಿಲುಕಿಕೊಂಡು ಬಿದ್ದಿದ್ದಾನೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಜನರಲ್ಲಿ ಆಘಾತ ಮೂಡಿಸಿದೆ. ಯುವಕನ ಸ್ಥಿತಿಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆತ ಬದುಕಿದ್ದಾನೋ ಅಥವಾ ಮೃತಪಟ್ಟಿದ್ದಾನೋ ಎಂಬುದು ತಿಳಿದುಬಂದಿಲ್ಲ.
A dude pops the question to his girl in a crazy dangerous spot...🥺 💔 pic.twitter.com/Gzdxfza5hD
— March (@MarchUnofficial) July 4, 2025
ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಯುವಕನ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಅಂತಹ ಅಪಾಯಕಾರಿ ಸ್ಥಳದಲ್ಲಿ ಈ ರೀತಿ ಪ್ರಪೋಸ್ ಮಾಡುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೊ ಜನರಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರೀತಿಯನ್ನು ವ್ಯಕ್ತಪಡಿಸುವಾಗ ಸುರಕ್ಷತೆಯ ಮಹತ್ವವನ್ನು ಎತ್ತಿ ತೋರಿಸಿದೆ. ಈ ಘಟನೆಯಿಂದ ಯುವಕರಿಗೆ, ರೊಮ್ಯಾಂಟಿಕ್ ಆಸೆಗಳನ್ನು ಈಡೇರಿಸುವ ಮೊದಲು ಸ್ಥಳದ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವ ಸಂದೇಶ ನೀಡಿದೆ.