ಹಿರೆಕಲ್ಲು ಗುಡ್ಡದಲ್ಲಿ ಏಕಾಂಗಿ ಪಯಣಿಗ !
ಕವಿ ಹೃದಯದವರಿಗೆ ಕವನ ಬರೆಯುವ ಸ್ಫೂರ್ತಿಯನ್ನೂ, ಭಾವ ಜೀವಿಗಳಿಗೆ ರೆಕ್ಕೆಕಟ್ಟಿಕೊಂಡು ಹಾರುವ ಹುಮ್ಮಸ್ಸನ್ನೂ, ರಸಿಕರಿಗೆ ನಾನಾ ಕನಸಿನ ಮೋಹಕ ಲೋಕವನ್ನೂ ತೆರೆದುಕೊಡ ಬಲ್ಲದು, ಆ ಇಳಿಜಾರು. ಬಯಲು ಸೀಮೆಯ ಬೆಟ್ಟ ಗುಡ್ಡಗಳು, ಕುರುಚಲು ಪ್ರದೇಶಗಳು ಸಹ ಸಾಕಷ್ಟು ಹಸುರಿನಿಂದ ತುಂಬಿರುವ ಕಾಲವಿದು; ಸುಮಾರು ಜನವರಿಯ ನಂತರ, ಕಡಿಮೆ ಮಳೆಯಾಗುವ ಜಾಗಗಳಲ್ಲಿ ಹಸುರು ಕಡಿಮೆ ಯಾಗತೊಡಗುತ್ತದೆ, ಬಿಸಿಲಿನ ಝಳ ಆರಂಭವಾಗುತ್ತದೆ.