26ನೇ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ವಿಜಯಪುರದ ಬಿ.ಎಲ್.ಡಿ.ಇ.ಎ.ಯ ವಿ.ಪಿ. ಡಾ.ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಜೊತೆಗೆ ಎಂಓಯುಗೆ ಸಹಿ ಹಾಕಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ಎಂಜಿನ್ ಗಳು, ಪವರ್‌ಟ್ರೇನ್ ಗಳು ಮತ್ತು ಅವುಗಳ ಕಾರ್ಯಾ ಚರಣೆಯಲ್ಲಿ ಸಂಸ್ಥೆಯು ಹೊಂದಿರುವ ಪ್ರಾಯೋಗಿಕ ಜ್ಞಾನ ಮತ್ತು ತಾಂತ್ರಿಕ ಪರಿಣತಿಯನ್ನು ಬಳಸಿ ಕೊಂಡು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯವನ್ನು ಸಂಸ್ಥೆ ಮಾಡಲಿದೆ


ವಿಜಯಪುರ: ಔದ್ಯಮಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಲು ನಿರಂತವಾಗಿ ಶ್ರಮಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಆ ಪ್ರಯತ್ನಗಳ ಭಾಗವಾಗಿಯೇ ಬಿ.ಎಲ್.ಡಿ.ಇ.ಎಯ ವಿ.ಪಿ. ಡಾ.ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕ್ಯಾಂಪಸ್ ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಓಇ) ಅನ್ನು ಸ್ಥಾಪಿಸಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ಎಂಜಿನ್ ಗಳು, ಪವರ್‌ಟ್ರೇನ್ ಗಳು ಮತ್ತು ಅವುಗಳ ಕಾರ್ಯಾಚರಣೆಯಲ್ಲಿ ಸಂಸ್ಥೆಯು ಹೊಂದಿರುವ ಪ್ರಾಯೋಗಿಕ ಜ್ಞಾನ ಮತ್ತು ತಾಂತ್ರಿಕ ಪರಿಣತಿ ಯನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯವನ್ನು ಸಂಸ್ಥೆ ಮಾಡಲಿದೆ. ವಾಸ್ತಪ ಪ್ರಪಂಚದ ಉದ್ಯಮದ ಬೇಡಿಕೆಗಳನ್ನು ಪೂರೈಸುವಂತಹ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವ ಮೂಲಕ ಟಿಕೆಎಂ ಸಂಸ್ಥೆಯು ಹೊಸ ಆವಿಷ್ಕಾರ ನಡೆಸಲು ಉತ್ತೇಜನ ಒದಗಿಸುವ, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಮತ್ತು ಬೆಳೆಯುತ್ತಿರುವ ಆಟೋಮೋಟಿವ್ ವಲಯದ ಅಗತ್ಯಗಳನ್ನು ಪೂರಾಸಲು ಸಮರ್ಥವಾಗಿರುವ ಭವಿಷ್ಯ ಸಿದ್ಧ ಕಾರ್ಯಪಡೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Roopa Gururaj Column: ತಾಯಿಗಾಗಿ ಮಿಡಿದ ಮಗನ ಹೃದಯ
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಕೈಗಾರಿಕಾ ಸಚಿವರಾದ ಡಾ.ಎಂ.ಬಿ. ಪಾಟೀಲ್, ಬಿ.ಎಲ್.ಡಿ.ಇ.ಎ.ಯ ವಿ.ಪಿ. ಡಾ.ಪಿ.ಜಿ. ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ.ವಿ.ಜಿ.ಸಂಗಮ್, ಟಿಕೆಎಂನ ರಾಜ್ಯ ವ್ಯವಹಾರಗಳ ಮುಖ್ಯಸ್ಥರು, ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷರಾದ ಶ್ರೀ ಸುದೀಪ್ ಎಸ್ ದಳವಿ ಹಾಜರಿದ್ದರು. ಸಂಸ್ಥೆಯ ಇನ್ನಿತರ ಹಿರಿಯ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ಟೊಯೋಟಾದ ಶ್ರೇಷ್ಠತೆಯ ಫಿಲಾಸಫಿಯಿಂದ ನಡೆಯಲ್ಪಡುವ ಸಿಓಇ ಅನ್ನು ವಿದ್ಯಾರ್ಥಿಗಳಿಗೆ ಆಟೋಮೋಟಿವ್ ತಂತ್ರಜ್ಞಾನದಲ್ಲಿನ ಸಂಪೂರ್ಣ, ಪ್ರಾಯೋಗಿಕ ತರಬೇತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಸಿಓಇ ಟೊಯೋಟಾ ಎಂಜಿನ್ ಗಳು, ಟ್ರಾನ್ಸ್ ಮಿಷನ್ ಗಳು ಮತ್ತು ಪವರ್ ಟ್ರೇನ್ ಘಟಕಗಳ ಕಟ್- ಸೆಕ್ಷನ್ ಮಾಡೆಲ್‌ಗಳನ್ನು ಒಳಗೊಂಡಿರುತ್ತದೆ. ಅವುಗಳ ಜೊತೆಗೆ ಡೂ-ಇಟ್-ಯುವರ್ ಸೆಲ್ಫ್ ಸೆಟಪ್ ಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದ್ದು, ಆಟೋಮೋಟಿವ್ ಕಾರ್ಯವಿಧಾನಗಳ ಕುರಿತ ಜ್ಞಾನವನ್ನು ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ವ್ಯವಸ್ಥೆ ಗಳನ್ನು ಅಸೆಂಬಲ್ ಮಾಡುವ ಮತ್ತು ಡಿಸ್ ಅಸೆಂಬಲ್ ಮಾಡುವ ಅವಕಾಶ ಗಳಿಸುತ್ತಾರೆ. ಶೈಕ್ಷಣಿಕ ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆಯನ್ನು ಹೆಚ್ಚು ಮಾಡಲು ಟಿಕೆಎಂ ಅತ್ಯಾಧುನಿಕ ಎಂಜಿನ್, ಟ್ರಾನ್ಸ್ ಮಿಷನ್ ಮತ್ತು ಪವರ್ ಟ್ರೇನ್ ಕಟ್ ಸೆಕ್ಷನ್ ಸೌಲಭ್ಯವನ್ನು ಒದಗಿಸುತ್ತಿದೆ.
ಹೆಚ್ಚುವರಿಯಾಗಿ ಟಿಕೆಎಂ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರಿಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆಟೋಮೋಟಿವ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಜ್ಞಾನ ಮತ್ತು ಕೌಶಲ್ಯ ಗಳನ್ನು ಅವರಿಗೆ ಒದಗಿಸಲಾಗುತ್ತದೆ. ಸೆಂಟರ್ ಆಫ್ ಎಕ್ಸಲೆನ್ಸ್ (ಸಿಓಇ) ಪರಿಣಿತ ತರಬೇತುದಾರರು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಕೌಶಲ್ಯ ತರಬೇತಿ ನೀಡಲು ಅತ್ಯಾಧುನಿಕ ಸಾಧನಗಳನ್ನು ಹೊಂದಿದ್ದು, ಜೊತೆಗೆ ನಿಖರವಾಗಿ ವಿನ್ಯಾಸಗೊಳಿಸಿದ ಪಠ್ಯಕ್ರಮವನ್ನು ಹೊಂದಿದೆ. ಕಲಿಕೆಯನ್ನು ಮತ್ತಷ್ಟು ತೀವ್ರಗೊಳಿಸಲು, ಸಂಕೀರ್ಣ ಪರಿಕಲ್ಪನೆಗಳ ಕುರಿತು ಸ್ಪಷ್ಟತೆ ಮತ್ತು ಗಾಢ ತಿಳುವಳಿಕೆ ಹೊಂದಲು ಸಮಗ್ರ ಕೈಪಿಡಿಗಳನ್ನು ಒದಗಿಸಲಾಗುತ್ತದೆ.
ವಿಶೇಷವಾಗಿ ಈ ಯೋಜನೆಯು ಅಧ್ಯಾಪಕರ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವ ಕಡೆಗೆ ಗಮನ ಹರಿಸುತ್ತದೆ. ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಲು ಅಗತ್ಯವಾದ ಪರಿಕರಗಳು ಮತ್ತು ಪರಿಣತಿಯನ್ನು ಶಿಕ್ಷಕರಿಗೆ ನೀಡಲಾಗುತ್ತದೆ. ಹೊಸತನವನ್ನು ಹೊಂದಲು, ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಗಳಿಸಲು ವಿದ್ಯಾರ್ಥಿಗಳನ್ನು ನೆರವಾಗಲಿದ್ದು, ಈ ಯೋಜನೆಯು ನಿರಂತರವಾಗಿ ಬೆಳೆಯುತ್ತಿರುವ ಆಟೋಮೋಟಿವ್ ಉದ್ಯಮದ ಬೇಡಿಕೆಗಳನ್ನು ಪೂರೈಸಲು ಸಿದ್ಧವಾಗಿರುವ ನುರಿತ ಉದ್ಯೋಗಿಗಳ ಪಡೆಯನ್ನು ಸೃಷ್ಟಿಸುವ ಟಿಕೆಎಂನ ಬದ್ಧತೆಗೆ ಅತ್ಯುತ್ತಮ ಪುರಾವೆಯಾಗಿದೆ.
ಈ ಸಂದರ್ಭದಲ್ಲಿ ಹಾಜರಿದ್ದು ಮಾತನಾಡಿದ ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ್ ಅವರು, “ಅತ್ಯಾಧುನಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಉದ್ದೇಶ ದಿಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಬಿಎಲ್‌ಡಿಇಎಯ ವಿ.ಪಿ. ಡಾ.ಪಿ.ಜಿ. ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಹಭಾಗಿತ್ವ ಮಾಡಿಕೊಂಡಿ ರುವುದನ್ನು ನೋಡುವುದು ಬಹಳ ಸಂತೋಷದ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಕೌಶಲ್ಯ ಅಭಿವೃದ್ಧಿ ಮಾಡುವ ಮತ್ತು ಆ ಮೂಲಕ ಕರ್ನಾಟಕದ ಯುವಜನರನ್ನು ಸಬಲೀಕರಣಗೊಳಿ ಸುವ ಟೊಯೋಟಾದ ಬದ್ಧತೆಗೆ ಇದು ಉತ್ತಮ ಪುರಾವೆಯಾಗಿದೆ.
ತಳಮಟ್ಟದ ಪ್ರತಿಭೆಗಳನ್ನು ಬೆಳೆಸುವ ಮೂಲಕ ಈ ರೀತಿಯ ಯೋಜನೆಗಳು ಸಮಾಜವನ್ನು ಬೆಳೆಸುವುದರ ಜೊತೆಗೆ ಸುಸ್ಥಿರ ಮತ್ತು ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸಲು ಕೊಡುಗೆ ನೀಡು ತ್ತವೆ. ಅತ್ಯುತ್ತಮ ಕಲಿಕೆ ಸಾಧ್ಯವಾಗುವ ಮತ್ತು ಶ್ರೇಷ್ಠ ಕಲಿಕಾ ವಾತಾರವಣ ರಚಿಸುವ ಟೊಯೋ ಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಉದ್ದೇಶ, ಬದ್ಧೆತೆಗೆ ನಾವು ಅವರಿಗೆ ಮೆಚ್ಚುಗೆ ಸಲ್ಲಿಸು ತ್ತಿದ್ದೇನೆ. ಈ ಕೌಶಲ್ಯಾಭಿವೃದ್ಧಿ ಕೇಂದ್ರವು ವಿದ್ಯಾರ್ಥಿಗಳು ಮತ್ತು ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದನ್ನು ನೋಡಲು ಉತ್ಸುಕನಾಗಿದ್ದೇನೆ" ಎಂದು ಹೇಳಿದರು.