Christopher Luxon: ಹೋಳಿ ಬಣ್ಣಗಳೊಂದಿಗೆ ಆಡಿದ ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್; ವಿಡಿಯೊ ವೈರಲ್
Christopher Luxon: ಭಾರತದ ದೊಡ್ಡ ಅಭಿಮಾನಿಯಾಗಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಇಸ್ಕಾನ್ ಆಕ್ಲೆಂಡ್‍ನಲ್ಲಿ ದೊಡ್ಡ ಜನಸಮೂಹದೊಂದಿಗೆ ಹೋಳಿ ಆಚರಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಫೆಬ್ರವರಿಯಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.


ವೆಲ್ಲಿಂಗ್ಟನ್: ಹೋಳಿ (Holi) ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಶ್ರೀಕೃಷ್ಣನಿಂದ ಪ್ರೇರಣೆ ಪಡೆದ ಈ ಬಣ್ಣಗಳ ಹಬ್ಬವನ್ನು ಇಂದಿಗೂ ಭಾರತೀಯರು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೋಳಿ ಹಬ್ಬವನ್ನು ಭಾರತ ಮಾತ್ರವಲ್ಲ ವಿಶ್ವದ ನಾನಾ ಕಡೆಗಳಲ್ಲಿಯೂ ಆಚರಿಸಲಾಗುತ್ತಿದೆ. ಭಾರತದ ದೊಡ್ಡ ಅಭಿಮಾನಿಯಾಗಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ (Christopher Luxon) ಆಕ್ಲೆಂಡ್‍ನಲ್ಲಿ ಇಸ್ಕಾನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ದೊಡ್ಡ ಜನಸಮೂಹದೊಂದಿಗೆ ಬಣ್ಣಗಳೊಂದಿಗೆ ಆಟವಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್(Viral Video) ಆಗಿದೆ. ಪಿಎಂ ಲಕ್ಸನ್ ಕ್ಲೌಡ್ ಗುಲಾಲ್ ಸಿಲಿಂಡರ್ ಬಳಸಿ ಜನಸಮೂಹಕ್ಕೆ ಸಂತೋಷದಿಂದ ಬಣ್ಣಗಳನ್ನು ಎರಚುವುದು ಸೆರೆಯಾಗಿದೆ.
"ನಾನು ಭಾರತದ ದೊಡ್ಡ ಅಭಿಮಾನಿ... ಭಾರತ ನಾನು ಪ್ರೀತಿಸುವ, ಅಪಾರವಾಗಿ ಮೆಚ್ಚುವ ದೇಶ” ಎಂದು ಲಕ್ಸನ್ ಆಗಾಗ ಹೇಳುತ್ತಿರುತ್ತಾರೆ. ಲಕ್ಸನ್ ಈ ಹಿಂದೆ ಭಾರತದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಧಾನಿಯ ಹೋಳಿ ಸಂಭ್ರಮದ ವಿಡಿಯೊ ಇಲ್ಲಿದೆ ನೋಡಿ
Prime Minister of New Zealand playing Holi 🔥#HappyHoli pic.twitter.com/ZBKX6i4pJz
— Sunanda Roy 👑 (@SaffronSunanda) March 13, 2025
ಈ ನಡುವೆ ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಲಕ್ಸನ್ ಮಾರ್ಚ್ 16ರಿಂದ ಮಾರ್ಚ್ 20ರವರೆಗೆ ಭಾರತ ಪ್ರವಾಸ ಮಾಡಲಿದ್ದಾರೆ. ಪ್ರಧಾನಮಂತ್ರಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಲಿದೆ. ವ್ಯಾಪಾರ, ರಕ್ಷಣಾ ಸಹಕಾರ ಮತ್ತು 2 ದೇಶಗಳ ನಡುವಿನ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ಚರ್ಚಿಸಲು ಲಕ್ಸನ್ ಮಾರ್ಚ್ 17ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ನ್ಯೂಜಿಲೆಂಡ್ ಪ್ರಧಾನಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಹಾಗೇ ಅವರೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಮಾಧ್ಯಮಗಳು ಮತ್ತು ಭಾರತೀಯ ವಲಸಿಗ ಸಮುದಾಯದ ಸದಸ್ಯರು ಸೇರಿದಂತೆ ಉನ್ನತ ಮಟ್ಟದ ನಿಯೋಗ ಇರಲಿದೆ. ವೆಲ್ಲಿಂಗ್ಟನ್‍ಗೆ ಮರಳುವ ಮೊದಲು ಲಕ್ಸನ್ ಮಾರ್ಚ್ 19ರಿಂದ 20ರವರೆಗೆ ಮುಂಬೈಗೆ ಭೇಟಿ ನೀಡಲಿದ್ದಾರೆ.
ಲಕ್ಸನ್ ಅವರ ಭೇಟಿಯು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದೀರ್ಘಕಾಲದ ಮತ್ತು ಶಾಶ್ವತ ಸಂಬಂಧವನ್ನು ಒತ್ತಿಹೇಳುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. "ಇದು ಎಲ್ಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತು ದೇಶಗಳ ನಡುವಿನ ನಿಕಟ ಸಂಬಂಧಗಳನ್ನು ಇನ್ನಷ್ಟು ವೃದ್ಧಿಸಲು ಎರಡೂ ದೇಶಗಳ ನಿರಂತರ ಬದ್ಧತೆಯನ್ನು ಪುನರುಚ್ಚರಿಸುತ್ತದೆ" ಎಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ:Farah Khan: ಹೋಳಿ ಛಪ್ರಿಗಳ ಹಬ್ಬ ಎಂದು ವಿವಾದ ಸೃಷ್ಟಿಸಿದ ಫರಾ ಖಾನ್ ವಿರುದ್ಧ ಪ್ರಕರಣ ದಾಖಲು
ಹೋಳಿ ಹೇಳಿಕೆ: ಫರಾ ಖಾನ್ ವಿರುದ್ಧ ದೂರು
ಇತ್ತೀಚೆಗೆ ಹೋಳಿ ಹಬ್ಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಾಲಿವುಡ್ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂಸ್ತಾನಿ ಭಾವೂ ಎಂದೇ ಜನಪ್ರಿಯರಾಗಿರುವ ವಿಕಾಶ್ ಪಾಠಕ್ ಅವರು ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ಫರಾ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಟೆಲಿವಿಷನ್ ಅಡುಗೆ ರಿಯಾಲಿಟಿ ಶೋ ಮಾಸ್ಟರ್‌ಶೆಫ್‌ನ ಸಂಚಿಕೆಯಲ್ಲಿ ಫರಾ ನೀಡಿದ ವಿವಾದಾತ್ಮಕ ಹೇಳಿಕೆಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ದೂರಿನಲ್ಲಿ, ಹೋಳಿ ಹಬ್ಬವನ್ನು ಫರಾ, ಛಪ್ರಿಗಳ ಹಬ್ಬ ಎಂದು ಕರೆದಿದ್ದಾರೆ ಎಂದು ತಿಳಿಸಲಾಗಿದೆ.