ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ಜನಪರ ಬದ್ಧತೆ ಸಾಹೇಬರ ಆದ್ಯತೆ

ಜಮೀರ್ ಅಹ್ಮದ್ ಖಾನ್ ವಸತಿ ಸಚಿವ ಸಿದ್ದರಾಮಯ್ಯ ಅವರಿಗೆ ಎಲ್ಲಾ ಜಾತಿಯ ಬಡವರ ಬಗ್ಗೆ ವಿಶೇಷ ಕಾಳಜಿ ಅದೇ ಕಾರಣಕ್ಕೆ ಅವರ ಯೋಜನೆಗಳು ಬಡವರ ಪರ ಇರುತ್ತವೆ. ವಸತಿ ಇಲಾಖೆಯಲ್ಲಿ ಸ್ಲಂ ಬೋರ್ಡ್ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬಡವರಿಗೆ ಸೂರು ಕಲ್ಪಿಸುವ ಯೋಜನೆ ಹತ್ತು ವರ್ಷ ಗಳಿಂದ ನೆನೆಗುದಿಗೆ ಬಿದ್ದಿತ್ತು.

Siddaramaiah Record: ಜನಪರ ಬದ್ಧತೆ ಸಾಹೇಬರ ಆದ್ಯತೆ

-

Ashok Nayak
Ashok Nayak Jan 6, 2026 8:55 AM

ಸಿದ್ದರಾಮಯ್ಯ ಅವರು ಜಾತ್ಯತೀತ ಹಾಗೂ ಸಮಾಜವಾದಿ ಸಿದ್ಧಾಂತ ಹೊಂದಿದ ಜನಪರ ಬದ್ಧತೆಯಿರುವ ನಾಯಕ. ಇಂದು ಭಾರತದಲ್ಲಿ ವರ್ಚಸ್ಸು, ಅನುಭವ ಇರುವ ರಾಜಕೀಯ ನಾಯಕರ ಸಾಲಿನಲ್ಲಿ ನಿಲ್ಲುತ್ತಾರೆ. ಸಿದ್ದರಾಮಯ್ಯ ಅವರು ಜನತಾದಳ ಪಕ್ಷದಲ್ಲಿ ಇದ್ದಾಗಿ ನಿಂದ ನಾವು ಜತೆಗೆ ಕೆಲಸ ಮಾಡಿದ್ದೆವು. ನಾನು ರಾಜಕೀಯವಾಗಿ ಬೆಳೆಯಲು ಅವರೂ ಕಾರಣ. ನನ್ನನ್ನೂ ಸೇರಿದಂತೆ ಎರಡನೇ ಹಂತದ ರಾಜಕೀಯ ನಾಯಕರನ್ನು ಬೆಳೆಸುವಲ್ಲಿ ಸಿದ್ದರಾ ಮಯ್ಯ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಪ್ಪು ಚುಕ್ಕೆ ಇಲ್ಲದಂತೆ ಶುದ್ಧ ರಾಜಕಾರಣ: ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯ ಸೇರಿ ಎಲ್ಲ ಸಮಾಜದವರು ಸಿದ್ದರಾಮಯ್ಯ ಅವರನ್ನು ಒಪ್ಪುತ್ತಾರೆ. ಏಕೆಂದರೆ ಅವರಿಗೆ ಜನಪರ ಇರುವ ಕಾಳಜಿ ಮತ್ತು ಬದ್ಧತೆ ನೋಡಿ. ಸಿದ್ದರಾಮಯ್ಯ ಅವರು 45 ವರ್ಷ ಗಳ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಶುದ್ಧ ರಾಜಕಾರಣ ಮಾಡಿದ್ದಾರೆ.

ಬಡವರ ಪಾಲಿನ ಭಾಗ್ಯ ವಿದಾತ: ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರು ಅಪಾರವಾಗಿ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆ ಅನುಷ್ಠಾನ ಸಿದ್ದರಾಮಯ್ಯ ಅವರ ಸಮರ್ಥ ನಾಯಕತ್ವದಿಂದ ಮಾತ್ರ ಸಾಧ್ಯವಾಗುತ್ತಿದೆ.

ಇದನ್ನೂ ಓದಿ: Siddaramaiah Record: ದೀನ-ದಲಿತರ ಆಶಾಕಿರಣ, ʼಅರ್ಥʼಶಿಸ್ತಿನ ಧುರೀಣ

ಒಂದು ರೀತಿಯಲ್ಲಿ ಅವರು ಬಡವರ ಪಾಲಿನ ಭಾಗ್ಯ ವಿದಾತ ಎಂದೇ ಹೇಳಬಹುದು. ಹದಿನಾರು ಬಾರಿ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಇಡೀ ದೇಶದ ಉತ್ತಮ ಕೆಲಸ ಮಾಡಿದ್ದಾರೆ.

ಜಮೀರ್ ಅಹ್ಮದ್ ಖಾನ್ ವಸತಿ ಸಚಿವ ಸಿದ್ದರಾಮಯ್ಯ ಅವರಿಗೆ ಎಲ್ಲಾ ಜಾತಿಯ ಬಡವರ ಬಗ್ಗೆ ವಿಶೇಷ ಕಾಳಜಿ ಅದೇ ಕಾರಣಕ್ಕೆ ಅವರ ಯೋಜನೆಗಳು ಬಡವರ ಪರ ಇರುತ್ತವೆ. ವಸತಿ ಇಲಾಖೆಯಲ್ಲಿ ಸ್ಲಂ ಬೋರ್ಡ್ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬಡವರಿಗೆ ಸೂರು ಕಲ್ಪಿಸುವ ಯೋಜನೆ ಹತ್ತು ವರ್ಷ ಗಳಿಂದ ನೆನೆಗುದಿಗೆ ಬಿದ್ದಿತ್ತು.

ಬಡವರು ಬೀದಿಯಲ್ಲಿ ವಾಸಿಸುತ್ತಿರುವ ಬಗ್ಗೆ ನಾನು ಅವರಿಗೆ ಮನವರಿಕೆ ಮಾಡಿ ಕೊಟ್ಟ ನಂತರ ಆರ್ಥಿಕ ಸಂಕಷ್ಟದ ನಡುವೆಯೂ ಮನೆ ಪೂರ್ಣ ಗೊಳಿಸಲು ಒಪ್ಪಿಗೆ ನೀಡಿದರು. ಇದು ಅವರಿಗೆ ಬಡವರ ಪರ ಇರುವ ಕಾಳಜಿಗೆ ಸಾಕ್ಷಿ. ಅವರಿಂದಾಗಿ 2 ಲಕ್ಷ 30 ಸಾವಿರ ಕುಟುಂಬಗಳು ಸೂರು ಪಡೆಯುವಂತಾಗಿದೆ.

ಅಲ್ಪಸಂಖ್ಯಾತರ ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಒತ್ತು: ಅಲ್ಪಸಂಖ್ಯಾತರ ಸಮುದಾಯದ ಶಿಕ್ಷಣ ಕ್ಕೆ ಹೆಚ್ಚು ಒತ್ತು ಕೊಟ್ಟು ಬಜೆಟ್ ನಲ್ಲಿ ಹೆಚ್ಚು ಅನುದಾನ ಕೊಡುವ ಮೂಲಕ ಅಲ್ಪಸಂಖ್ಯಾತ ಸಮುದಾಯ ಉನ್ನತ ಶಿಕ್ಷಣ ಪಡೆದು ವಿದ್ಯಾವಂತ ರಾಗಲು ಅವಕಾಶ ಮಾಡಿಕೊಟ್ಟಿದ್ದಾರೆ.

ರಾಜ್ಯದಲ್ಲಿ ದೇವರಾಜ ಅರಸು ನಂತರ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ. ಕರ್ನಾಟಕ ಅಷ್ಟೇ ಅಲ್ಲದೆ ಇಡೀ ದೇಶದಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸು ಇದೆ. ಕಾಂಗ್ರೆಸ್ ಪಕ್ಷ ಕ್ಕೆ ಸಿದ್ದರಾಮಯ್ಯ ಅವರು ಬಹುದೊಡ್ಡ ಆಸ್ತಿ. ಸಿದ್ದರಾಮಯ್ಯ ಅವರಂತಹ ನಾಯಕರ ಸಂಪುಟದಲ್ಲಿ ನಾನು ಸಚಿವನಾಗಿ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ. ನನ್ನಂತಹ ನೂರಾರು ರಾಜಕಾರಣಿಗಳಿಗೆ ಸಿದ್ದರಾಮಯ್ಯ ಅವರೇ ಮಾದರಿ.