ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ದೀನ-ದಲಿತರ ಆಶಾಕಿರಣ, ʼಅರ್ಥʼಶಿಸ್ತಿನ ಧುರೀಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀನ ದಲಿತರ, ದುರ್ಬಲರ, ನೊಂದವರ ಪರವಾಗಿ ಸಾಮಾಜಿಕ ನ್ಯಾಯ ಒದಗಿಸುವ ಧೀಮಂತ ರಾಜಕಾರಣಿ.ರಾಜ್ಯದಲ್ಲಿ ಹಿಂದುಳಿದ ವರ್ಗದವರ ಆಶಾಕಿರಣ ದೇವರಾಜ ಅರಸು ನಂತರ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಸಿದ್ದರಾಮಯ್ಯ ಅವರ ಜತೆ ನಾನು ಸದಾ ನಿಲ್ಲುತ್ತೇನೆ.

ದೀನ-ದಲಿತರ ಆಶಾಕಿರಣ, ʼಅರ್ಥʼಶಿಸ್ತಿನ ಧುರೀಣ

-

Ashok Nayak
Ashok Nayak Jan 6, 2026 8:15 AM

ಕೆ.ಎನ್.ರಾಜಣ್ಣ

ಮಾಜಿ ಸಚಿವ ಮತ್ತು ಶಾಸಕ,

ಮಧುಗಿರಿ ವಿಧಾನಸಭಾ ಕ್ಷೇತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಮಾಡಿರುವ ಸಾಧನೆ ಹತ್ತು ಹಲವು. ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ ಮತ್ತು ಇಲಾಖಾವಾರು ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ವಿತ್ತೀಯ ಶಿಸ್ತು ಕಾಪಾಡಿಕೊಂಡು ಬರುತ್ತಿರುವುದೇ ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು ನಿಜಕ್ಕೂ ಮಾದರಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀನ ದಲಿತರ, ದುರ್ಬಲರ, ನೊಂದವರ ಪರವಾಗಿ ಸಾಮಾಜಿಕ ನ್ಯಾಯ ಒದಗಿಸುವ ಧೀಮಂತ ರಾಜಕಾರಣಿ.ರಾಜ್ಯದಲ್ಲಿ ಹಿಂದುಳಿದ ವರ್ಗದವರ ಆಶಾಕಿರಣ ದೇವರಾಜ ಅರಸು ನಂತರ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಸಿದ್ದರಾಮಯ್ಯ ಅವರ ಜತೆ ನಾನು ಸದಾ ನಿಲ್ಲುತ್ತೇನೆ. ದೇವರಾಜ ಅರಸು ನಂತರ ನಾನು ಇಷ್ಟ ಪಡುವ ಅಹಿಂದ ನಾಯಕ ಸಿದ್ದರಾಮಯ್ಯ. ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಸಮಾನತೆ ಕಲ್ಪಿಸುವ ಕ್ರಿಯಾಶೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ. ಅವರೊಂದು ಅದ್ಭುತ ಶಕ್ತಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಮತ್ತು ನುಡಿದಂತೆ ನಡೆಯುತ್ತೇವೆ ಎನ್ನುವುದನ್ನೇ ಧ್ಯೇಯವಾಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಮಾಡಿರುವ ಸಾಧನೆ ಹತ್ತು ಹಲವು. ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ ಮತ್ತು ಇಲಾಖಾವಾರು ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ವಿತ್ತೀಯ ಶಿಸ್ತು ಕಾಪಾಡಿಕೊಂಡು ಬರುತ್ತಿರುವುದೇ ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತು ನಿಜಕ್ಕೂ ಮಾದರಿಯಾಗಿದೆ.

ಜನಸಾಮಾನ್ಯರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಮಾತಿಗೆ ನಿಂತರೆ ಅಪ್ಪಟ ಮೈಸೂರು ಸೀಮೆಯ ಗ್ರಾಮ ಭಾಷೆ ಹೊರಹೊಮ್ಮುತ್ತದೆ. ಆ ಶೈಲಿಯಲ್ಲಿಯೇ ಭಾಷಣ ಮಾಡಿ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಅವರಲ್ಲಿದೆ. ಅವರ ಮಾತು ಒರಟು, ಆದರೆ ಮನಸ್ಸು ಮಾತ್ರ ಮೃದು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ನಾಡಿನ ಜನತೆಯ ಒಳಿತನ್ನೇ ಉಸಿರಾಗಿಸಿಕೊಂಡಿರುವ ಸಿದ್ದರಾಮಯ್ಯ ಮಾತೃ ಹೃದಯ ದಿಂದ ಬಡ ಜನತೆಯ ಮೇಲೆ ಅಪಾರ ಮಮತೆ ಹೊಂದಿದ್ದಾರೆ.

ಇದನ್ನೂ ಓದಿ: KN Rajanna: ಸಿದ್ದರಾಮಯ್ಯ ಇರುವವರೆಗೂ ನಾನು ಕಾಂಗ್ರೆಸ್‌ನಲ್ಲೇ: ಕೆಎನ್‌ ರಾಜಣ್ಣ

ಬಡಜನರ ಸಂಕಷ್ಟ ನಿವಾರಿಸುವ ದಿಟ್ಟ ನಿರ್ಧಾರಗಳನ್ನು ಕೈಗೊಂಡು ನಾಡಿನ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ, ವಸತಿ ಭಾಗ್ಯ ಸೇರಿದಂತೆ ಇತ್ಯಾದಿ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಪರವಾಗಿ ಆಡಳಿತ ನಡೆಸಿ ಜನಸಾಮಾನ್ಯರ ಹೃದಯದಲ್ಲಿ ಅಜರಾಮರವಾಗಿ ಮನೆ ಮಾಡಿದ್ದಾರೆ.

ಅನುಭವಿ ರಾಜಕಾರಣಿ, ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯ ಅವರು, ಎಸ್.ನಿಜಲಿಂಗಪ್ಪ ಹಾಗೂ ಡಿ.ದೇವರಾಜ ಅರಸು ನಂತರ ಪೂರ್ಣಾವಧಿ ಆಡಳಿತ ನಡೆಸಿದ ಅರಸು ಅವರ ಆಡಳಿತದ ದಾಖಲೆ ಮುರಿದು ರಾಜ್ಯ ದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಮಾದರಿ ವ್ಯಕ್ತಿತ್ವ

ಸಿದ್ದರಾಮಯ್ಯ ಮತ್ತು ನನ್ನ ನಡುವೆ ಬಹಳ ಆತ್ಮೀಯ ಬಾಂಧವ್ಯವಿದೆ. ಅವರು ನನ್ನೊಂದಿಗೆ ಸದಾ ಇರುತ್ತಾರೆ. ರಾಜಕೀಯ ನಿಂತ ನೀರಲ್ಲ, ಅಧಿಕಾರ ಬರುತ್ತದೆ, ಹೋಗುತ್ತದೆ. ಅಧಿಕಾರ ಇರಲಿ, ಇಲ್ಲದಿರಲಿ ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಬಾಂಧವ್ಯಕ್ಕೆ ಯಾವುದೇ ಕುತ್ತು ಬರುವುದಿಲ್ಲ. ಬಡವರ ಕಲ್ಯಾಣಕ್ಕಾಗಿ ಸದಾ ಚಿಂತಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ, ವ್ಯಕ್ತಿತ್ವ ಮಾದರಿಯಾಗಿದೆ.

ಕರ್ನಾಟಕದಲ್ಲಿ ಇಲ್ಲಿಯವರೆಗೆ 23 ಮುಖ್ಯಮಂತ್ರಿಗಳಾಗಿದ್ದಾರೆ, ಆದರೆ ಬೆರಳೆಣಿಕೆಯಷ್ಟು ಮಾತ್ರ ಅಹಿಂದ ಸಮುದಾಯಗಳಿಂದ ಬಂದಿzರೆ. ಆ ಪೈಕಿ ಪ್ರಬಲ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಸಾಕಷ್ಟು ವಿರೋಧದ ನಡುವೆಯೂ ಜಾತಿಗಣತಿಯನ್ನು ಜಾರಿಗೊಳಿಸಿ ಸರ್ವ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಅಪಾರ ಶ್ರಮವಹಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ನಾಡಿನ ಬಡಜನರ ಹಸಿವನ್ನು ಹಿಂಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ ಅನ್ನರಾಮಯ್ಯ ಎನಿಸಿಕೊಂಡಿದ್ದಾರೆ. ಇಂತಹ ಅನೇಕ ಯೋಜನೆಗಳು ಬಡವರ ಪಾಲಿಗೆ ಆಸರೆಯಾಗಿ ಸರಿಗಟ್ಟಿದ ಸಾಧಕ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಅವರ ಆಡಳಿತ ಅವಧಿಯನ್ನು ಸರಿಗಟ್ಟಿದ ಮತ್ತೊಬ್ಬ ಅಹಿಂದ ನಾಯಕ ಸಿದ್ದರಾಮಯ್ಯ. ರಾಜಕೀಯವಾಗಿ ಎಷ್ಟೇ ಅಡೆತಡೆ ಬಂದರೂ ಕುಗ್ಗದೆ ಮುಖ್ಯಮಂತ್ರಿ ಹುದ್ದೆವರೆಗೂ ಬೆಳೆದು ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ ಅವರು ಅಪಾರ ಕೊಡುಗೆ ನೀಡಿದ್ದಾರೆ.

ಸಿದ್ದರಾಮಯ್ಯ ಜನಪ್ರಿಯತೆ ಕುಂದಿಸಲಾಗದು

ಸಿದ್ದರಾಮಯ್ಯ ನಾಡಿನ ದೊಡ್ಡ ಆಸ್ತಿ. ಜನರ ಬೆಂಬಲದಿಂದ ಹೆಮ್ಮರವಾಗಿ ಬೆಳೆದಿದ್ದಾರೆ, ಹಾಗಾಗಿ ಜನಸಾಮಾನ್ಯರ ಶ್ರೀರಕ್ಷೆ ಇರುವವರೆಗೂ ಸಿದ್ದರಾಮಯ್ಯ ಅವರನ್ನು ರಾಜಕೀಯ ಜನಪ್ರಿಯತೆ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರು ಬಹು ದೊಡ್ಡ ಶಕ್ತಿಯಾಗಿದ್ದು, ಪಕ್ಷಕ್ಕೆ ಬಲ ತುಂಬಿದ್ದಾರೆ. ಸಿದ್ದರಾಮಯ್ಯ ಬಡವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದಾರೆ.

ಸಂಪತ್ತು, ಅಧಿಕಾರ ಮತ್ತು ಜಾತಿಗೆ ಆದ್ಯತೆ ನೀಡುವ ಸಾಮಾಜಿಕ ಕಳಕಳಿ ಹೊಂದಿದ್ದಾರೆ. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿ ಸಾಮಾನ್ಯ ಜೀವನ ನಡೆಸುವ ಸಿದ್ದರಾಮಯ್ಯ ನುಡಿದಂತೆ ನಡೆಯುವ ವ್ಯಕ್ತಿತ್ವವನ್ನು ಹೊಂದಿದ್ದಾರೆ.

ರಾಜಕೀಯಕ್ಕೆ ಕುಟುಂಬದ ಸ್ಪರ್ಶವಿಲ್ಲದೆ ಪಾರದರ್ಶಕವಾಗಿ ಅಧಿಕಾರ ನಡೆಸಿ, ಕೌಟುಂಬಿಕ ರಾಜಕೀಯದಿಂದ ದೂರವಿದ್ದು ಆದರ್ಶವಾಗಿದ್ದಾರೆ. ಉಳಿದ ಅವಧಿಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು.