Siddaramaiah Record: ಸ್ನೇಹಜೀವಿ ಸಿಎಂ ಸಿದ್ದರಾಮಯ್ಯ
ನಾನು ಕಂಡಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ನೇಹಜೀವಿ. ಸ್ನೇಹಕ್ಕೆ ತುಂಬಾ ಬೆಲೆ ಕೊಡುವ ವ್ಯಕ್ತಿ. ಸ್ನೇಹಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸುವ ವ್ಯಕ್ತಿತ್ವ ಅವರದು. ಅವರ ಒಡನಾಟಕ್ಕೆ ಬಂದು ದಶಕಗಳೇ ಕಳೆದಿವೆ. ಆದರೆ ಈಗಲೂ ನನಗೆ ಅವರೊಬ್ಬ ಅಚ್ಚರಿಯ ವ್ಯಕ್ತಿತ್ವ. ಅಪಾರ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಇವರು ಅಳವಡಿಸಿಕೊಂಡ ರೀತಿ ನನಗೆ ಸದಾಕಾಲವೂ ಪ್ರೇರಣೆ.
-
ಅಶೋಕ ಪಟ್ಟಣ,
ಸರಕಾರಿ ಮುಖ್ಯ ಸಚೇತಕರು,
ವಿಧಾನಸಭೆ, ಬೆಂಗಳೂರು
ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕ ವಾಗಿ ಅನುಷ್ಠಾನಗೊಂಡಿರುವುದರ ಹಿಂದೆ ಹಣಕಾಸು ಇಲಾಖೆಯ ಕುರಿತು ಅದ್ಭುತ ಜ್ಞಾನ, ಅನುಭವ ಹೊಂದಿರುವ ಸಿದ್ದರಾಮಯ್ಯ ಎಂಬ ಶಕ್ತಿಯೇ ಕಾರಣ.
ನಾನು ಕಂಡಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ನೇಹಜೀವಿ. ಸ್ನೇಹಕ್ಕೆ ತುಂಬಾ ಬೆಲೆ ಕೊಡುವ ವ್ಯಕ್ತಿ. ಸ್ನೇಹಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸುವ ವ್ಯಕ್ತಿತ್ವ ಅವರದು. ಅವರ ಒಡನಾಟಕ್ಕೆ ಬಂದು ದಶಕಗಳೇ ಕಳೆದಿವೆ. ಆದರೆ ಈಗಲೂ ನನಗೆ ಅವರೊಬ್ಬ ಅಚ್ಚರಿಯ ವ್ಯಕ್ತಿತ್ವ. ಅಪಾರ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಇವರು ಅಳವಡಿಸಿಕೊಂಡ ರೀತಿ ನನಗೆ ಸದಾಕಾಲವೂ ಪ್ರೇರಣೆ. ಯಾವತ್ತೂ ಮನಸ್ಸಿನಲ್ಲಿ ಕೆಟ್ಟದ್ದನ್ನು ಸುಳಿಯಲು ಬಿಡದ ಕಾರಣಕ್ಕೆ ಇವರು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ನಾನು ಕಂಡಂತೆ ಸಿಎಂ ಸಿದ್ದರಾಮಯ್ಯ ಅಪರೂಪದ ರಾಜಕಾರಣಿ.
70-80ರ ದಶಕದಲ್ಲಿ ದೇವರಾಜ ಅರಸರು ಮಾಡಿರುವ ಅಭಿವೃದ್ಧಿಪರ ಹಾಗೂ ಬಡವರ ಪರ ಕೆಲಸವನ್ನು ಇಂದಿಗೂ ಈ ನಾಡು ನೆನಪಿಸಿಕೊಳ್ಳುತ್ತದೆ. ಇದಕ್ಕೆ ಮೂಲ ಕಾರಣವೇ ನಾಯಕತ್ವ ಗುಣ. ಇಂತಹುದೆ ನಾಯಕತ್ವ ಗುಣ ಬೆಳೆಸಿಕೊಂಡು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುವುದರ ಜತೆಗೆ ನಾಡಿನ ಬಡವರು, ಹಿಂದುಳಿದ ವರ್ಗದವರು ಹಾಗೆಯೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ಹಾಗೂ ಸಮಗ್ರ ಅಭಿವೃದ್ಧಿ ಕನಸು ಹೊಂದಿರುವ ಅಪರೂಪದ ನಾಯಕ ಸಿದ್ದರಾಮಯ್ಯ.
ಶಿಸ್ತುಬದ್ಧ ಜೀವನ ಶೈಲಿ: ಸಿದ್ದರಾಮಯ್ಯ ನವರಿಗೆ ದೇವರ ಅನುಗ್ರಹವಿದೆ. ಜನರೇ ಅವರ ಶಕ್ತಿ. ಶಿಸ್ತುಬದ್ಧ ಜೀವನ ಶೈಲಿಯಿಂದಲೇ ಅವರು ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ. ನನ್ನ ಪ್ರಕಾರ ಅರಸು ಅವರ ದಾಖಲೆ ಇವರಾಗಿಯೇ ಮುರಿಯುತ್ತಿಲ್ಲ. ಇದು ಭಗವಂತನೇ ಸೃಷ್ಟಿಸಿದ ಅವಕಾಶ ಎಂದರೆ ತಪ್ಪಾಗಲಾರದು. ಆ ಕಾಲಘಟ್ಟಕ್ಕೆ ದೇವರಾಜ ಅರಸರು ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಮಾಡಿರುವ ಕಾರ್ಯಗಳು ತುಂಬಾ ಉಪಯುಕ್ತ ಹಾಗೂ ಅವಶ್ಯವಾದವು.
ಅದೇ ರೀತಿಯಲ್ಲಿ ಇಂದಿನ ಕಾಲಘಟ್ಟಕ್ಕೆ ಸಿದ್ದರಾಮಯ್ಯನವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ರಾಜ್ಯದ ಬಡವರ ಹಿತದೃಷ್ಟಿಯಿಂದ ತುಂಬಾ ಪ್ರಮುಖವಾಗಿವೆ.
ಇದನ್ನೂ ಓದಿ: CM Siddaramaiah: ಮೈಸೂರು ಹೀಲಿಯಂ ಸ್ಫೋಟದಲ್ಲಿ ಮೃತರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ 5 ಲಕ್ಷ ರೂ. ಪರಿಹಾರ ಘೋಷಣೆ
ಸಿಎಂರನ್ನು ಹತ್ತಿರದಿಂದ ಕಾಣುವ ಅವಕಾಶ: ಸಿದ್ದರಾಮಯ್ಯನವರು ಮೊದಲ ಅವಧಿ ಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನಗೆ ಸರಕಾರದ ಮುಖ್ಯ ಸಚೇತಕ ಹುದ್ದೆ ಸ್ವೀಕರಿಸುವಂತೆ ಹೇಳಿದರು. ಇದಾದ ನಂತರದಲ್ಲಿ ನಮ್ಮಿಬ್ಬರ ಒಡನಾಟ ಹೆಚ್ಚಾಯಿತು. ಸಭೆ ನಡೆಸುವುದು, ವಿಧೇಯಕ ತರಲು ತಯಾರಿ ನಡೆಸುವುದು ಸೇರಿದಂತೆ ಅವರ ಜತೆ ಸಾಕಷ್ಟು ಕೆಲಸ ಮಾಡಿದೆ. ಜತೆಗೆ ಹಣಕಾಸು ವಿಷಯದಲ್ಲಿ ಅವರ ಅಪಾರ ಅನುಭವ ಮತ್ತು ಜ್ಞಾನವನ್ನು ಹತ್ತಿರದಿಂದ ಗಮನಿಸಿರುವ ನನಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಅಷ್ಟೇ ಅಲ್ಲದೆ ತಮ್ಮ ನಿರಂತರ ಕೆಲಸದ ಮಧ್ಯೆಯೂ ಅವರು ತಮ್ಮ ಸ್ನೇಹ ಬಳಗಕ್ಕೆ ಸಮಯ ನೀಡುವ ವ್ಯಕ್ತಿತ್ವ ತುಂಬಾ ಇಷ್ಟ.
ಹಣಕಾಸು ಇಲಾಖೆ ಬಗ್ಗೆ ಅದ್ಭುತ ಜ್ಞಾನ
ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವುದರ ಹಿಂದೆ ಹಣಕಾಸು ಇಲಾಖೆಯ ಕುರಿತು ಅದ್ಭುತ ಜ್ಞಾನ, ಅನುಭವ ಹೊಂದಿರುವ ಸಿದ್ದರಾಮಯ್ಯ ಎಂಬ ಶಕ್ತಿಯೇ ಕಾರಣ. ಅವರ ಶಿಸ್ತುಬದ್ಧ ಆರ್ಥಿಕ ನೀತಿಯ ಫಲವಾಗಿ ರಾಜ್ಯದ ಮಹಿಳೆಯರು, ಬಡವರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ಸಮುದಾಯದ ಜನರಿಗೆ ಸರಕಾರ ಸಾಮಾಜಿಕ ನ್ಯಾಕ ದೊರಕಿಸಿ ಕೊಡುತ್ತಿದೆ. ಗ್ರಾಮೀಣ ಭಾಗದ ಬಡಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಿದ್ದರಾಮಯ್ಯ ನವರು ಜಾರಿಗೆ ತಂದ ಯೋಜನೆಗಳು ಸಾರ್ವಕಾಲಿಕವಾಗಿ ಅವರ ವ್ಯಕ್ತಿತ್ವವನ್ನು ಈ ನಾಡು ನೆನಪಿಟ್ಟುಕೊಳ್ಳುವಲ್ಲಿ ಸಂಶಯವಿಲ್ಲ.
ಸಿದ್ದರಾಮಯ್ಯನವರು ಜಾತ್ಯಾತೀತ ನಾಯಕ. ಬಸವಣ್ಣನವರ ತತ್ವವನ್ನು ಅನುಸರಿಸಿ ಕೊಂಡು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಪ್ರತಿ ಯೊಂದು ಜಾತಿ, ಮತ ಹಾಗೂ ಪಂಥಗಳನ್ನು ಗೌರವಿಸುವುದರ ಜತೆಗೆ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುವ ಮೂಲಕ ಜನಪ್ರಿಯ ನಾಯಕರಾಗಿ ಬೆಳೆದಿದ್ದಾರೆ.
ಮೊಬೈಲ್, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳ ಕಾಲಘಟ್ಟದಲ್ಲಿ ಜನ ನಾಯಕರಾಗಿ ಬೆಳೆದು ಅದನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ತುಂಬಾ ಕಷ್ಟ. ಇದೆಲ್ಲದರ ಮಧ್ಯೆ ಯೂ ಸಿದ್ದರಾಮಯ್ಯನವರು ಒಬ್ಬ ಮಾಸ್ ಲೀಡರ್ ಆಗಿ ಬೆಳೆದ ಪರಿ ನಿಜಕ್ಕೂ ಅದ್ಭುತ.
ಮುಖ್ಯಮಂತ್ರಿಗಳ ಸಾಮಾನ್ಯ ಜ್ಞಾನ ಎಂತವರನ್ನು ನಿಬ್ಬೆರಗು ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಚಹಾ ಜತೆ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಚಿಕ್ಕಂದಿನಿಂದಲೇ ಬೆಳೆಸಿ ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ವಿಷಯಗಳ ಬಗ್ಗೆ ಸಮಗ್ರ ಜ್ಞಾನ ಹೊಂದಿರುವ ಇವರು, ಪ್ರತಿ ಸಭೆಯಗಳ ಮುಂಚೆ ಪೂರ್ವ ಸಿದ್ಧತೆಗಳನ್ನು ಅಚ್ಚುಕ್ಕಟ್ಟಾಗಿ ಮಾಡಿಕೊಳ್ಳು ತ್ತಾರೆ.
ಅಷ್ಟೇ ಅಲ್ಲದೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಉಪಯುಕ್ತ ಭಾಷಣದ ಮೂಲಕವೇ ಜನರಿಗೆ ಮತ್ತಷ್ಟು ಹತ್ತಿರವಾಗುವ ಕಲೆ ಹೊಂದಿರುವ ಬೆರಳೆಣಿಕೆಯಷ್ಟು ರಾಜಕಾರಣಿಗಳ ಪೈಕಿ ಸಿದ್ದರಾಮಯ್ಯನವರು ಒಬ್ಬರು.