Siddaramaiah Record: ಸಿದ್ಧರಾಮನ ಹುಂಡಿಯಿಂದ ವಿಧಾನಸಭೆಗೆ
ಸಿದ್ದರಾಮಯ್ಯ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಹುಟ್ಟೂರಿ ನಲ್ಲೇ ಪೂರೈಸಿದರು. ಪಿಯುಸಿಯನ್ನು ಮೈಸೂರಿನಲ್ಲಿ, ಬಿಎಸ್‌ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ಆದ ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.
-
2 ಬಾರಿ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಜೀವನವೊಂದು ವಿಶೇಷ. ಹಳ್ಳಿಯಲ್ಲಿ ಹುಟ್ಟಿ, ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದು, ರಾಜ್ಯಕ್ಕೆ ಎರಡು ಬಾರಿ ಸಿಎಂ ಆಗುವ ಮೂಲಕ ಹಲವು ಸ್ಪೂರ್ತಿಗಳಿಗೆ ಕಾರಣವಾಗಿದ್ದಾರೆ. ಹಳ್ಳಿ ಮಕ್ಕಳು, ಸರಕಾರಿ ಶಾಲೆಗಳಲ್ಲಿ ಓದಿದವರು ಭರವಸೆಯಿಂದ ಮುಂದಡಿಯಿಡಲು ಕಾರಣವಾಗಿದ್ದಾರೆ. ಅವರ ಕುರಿತ ಕಿರು ಜೀವನಚಿತ್ರಣ ಇಲ್ಲಿದೆ...
ನೇರವಾಗಿ 5ನೇ ತರಗತಿ ಪ್ರವೇಶ ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನ ಹುಂಡಿಯ ಸಿದ್ದರಾಮಯ್ಯ ಅವರದ್ದು ತುಂಬು ಕುಟುಂಬ. ಚಿಕ್ಕಂದಿನ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯದಲ್ಲಿ ಪರಣಿತರಾಗಿದ್ದರು. ಹತ್ತನೇ ವರ್ಷ ದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರಿಸಿದರು. ಅಪ್ಪ ಅಮ್ಮ ಅಂದುಕೊಂಡಿದ್ದು ವೈದ್ಯ ನಾಗಲಿ ಅಂತ...
ಸಿದ್ದರಾಮಯ್ಯ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಹುಟ್ಟೂರಿ ನಲ್ಲೇ ಪೂರೈಸಿದರು. ಪಿಯುಸಿಯನ್ನು ಮೈಸೂರಿನಲ್ಲಿ, ಬಿಎಸ್‌ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ಆದ ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು. ಮಗ ವೈದ್ಯ ಆಗಲಿ ಎಂದು ಪಾಲಕರು ಬಯಸಿದ್ದರು. ಆದರೆ ಸಿದ್ದರಾಮಯ್ಯನವರು ವಕೀಲರಾಗಿ, ಮುಖ್ಯಮಂತ್ರಿಯೇ ಆದರು.
ವೈಯಕ್ತಿಕ ಜೀವನ
ಪೂರ್ಣ ಹೆಸರು: ಸಿದ್ದರಾಮಯ್ಯ
ಜನ್ಮದಿನಾಂಕ: 12 ಆಗಸ್ಟ್ 1948
ಹುಟ್ಟಿದ ಸ್ಥಳ: ಸಿದ್ಧರಾಮನ ಹುಂಡಿ, ಮೈಸೂರು
ವಿದ್ಯಾರ್ಹತೆ: ಬಿಎಸ್‌ಸಿ, ಕಾನೂನು ಪದವೀಧರ
ತಂದೆಯ ಹೆಸರು: ಸಿದ್ದರಾಮೇಗೌಡ
ತಾಯಿಯ ಹೆಸರು: ಬೋರಮ್ಮ
ಪತ್ನಿ: ಪಾರ್ವತಿ
ಮಕ್ಕಳು: ಇಬ್ಬರು ಪುತ್ರರು
ಇದನ್ನೂ ಓದಿ: Siddaramaiah Record: ಟೀಕೆಗಳನ್ನು ಮೀರಿ ಗೆದ್ದ ಪಂಚ ಗ್ಯಾರಂಟಿ
ಗಣಿಧಣಿಗಳ ವಿರುದ್ಧ ರಣಕಹಳೆ
2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಆಯಿತು. ಆಗ ವರುಣಾ ಕ್ಷೇತ್ರ ಹೊಸ ದಾಗಿ ರಚನೆ ಆಯಿತು. ಆ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ವಿಧಾನಸಭೆ ಪ್ರವೇಶಿಸಿ ದರು. ಬಳಿಕ ಅವರು ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಈ ಸಂದರ್ಭದಲ್ಲಿ ಸಿದ್ದರಾ ಮಯ್ಯ ಅವರು ಬಳ್ಳಾರಿಯ ಗಣಿಧಣಿಗಳ ವಿರುದ್ಧ ರಣಕಹಳೆ ಮೊಳಗಿಸಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಉಂಟುಮಾಡಿದರು.
*
ಬೆಂಗಳೂರಿನಿಂದ ಬಳ್ಳಾರಿಗೆ 320 ಕಿ.ಮೀ. ಪಾದಯಾತ್ರೆ
ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ಸಮರ ಸಾರಿದ ಇವರು 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ 320 ಕಿಮೀ ಪಾದಯಾತ್ರೆ ಮಾಡಿದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗಿದೆ.
2013ರಲ್ಲಿ ಮೊದಲ ಬಾರಿ ಸಿಎಂ
2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಮಾತ್ರ ಶ್ರಮಿಸದೇ ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರಿ ಗೆಲುವಿಗೆ ಕಾರಣರಾದರು. ಇದರಿಂದಾಗಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿ, ಸಂಪೂರ್ಣ ಬಲದೊಂದಿಗೆ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರ ನಂತರ ಮತ್ತೊಮ್ಮೆ ಅಧಿಕಾರಕ್ಕೆ ಬಂತು. ಐದೂ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿದ್ದರು.
ಭಾಗ್ಯಗಳ ಸರದಾರ
ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆ ತಂದರು, ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಿದ್ದು ಆ ವರ್ಗಕ್ಕೆ ಬಹಳ ನೆರವು ನೀಡಿದೆ. ಇದು ವಿದ್ಯಾರ್ಥಿಗಳು, ಅವರ ಪೋಷಕರಿಗೆ ಆರ್ಥಿಕ ನೆಮ್ಮದಿ ನೀಡಿದೆ.
ಗ್ರಾಮೀಣ ಶೈಲಿಯ ಒರಟು ಮಾತಿನಿಂದಲೇ ಮನ ಗೆದ್ದವರು
ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಮಾತಿಗೆ ನಿಂತರೆ ಅಪ್ಪಟ ಮೈಸೂರು ಸೀಮೆಯ ಗ್ರಾಮೀಣಭಾಷೆ ಹೊರಹೊಮ್ಮುತ್ತದೆ. ಆ ಶೈಲಿಯಲ್ಲಿಯೇ ಭಾಷಣ ಮಾಡಿ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದೆ. ಅವರ ಮಾತು ಒರಟಾ ದರೂ ಮನಸ್ಸು ಮಾತ್ರ ಮೃದು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಮೊದಲ ಆದೇಶವೇ ಅನ್ನಭಾಗ್ಯ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು ಆಗಲೇ ನುಡಿ ದಂತೆ ‘ನಡೆಯಬೇಕು’ ಎಂಬ ಸಂಕಲ್ಪ ಮಾಡಿದ್ದರು. ಪಕ್ಷ ಪ್ರಕಟಿಸುವ ಪ್ರಣಾಳಿಕೆ ಕೇವಲ ಕಾಗದಗಳ ಕಂತೆಯಾಗಿ ಕಳೆದು ಹೋಗಲು ಬಿಡಬಾರದು, ಅದು ಅಧಿಕಾರದ ದಿನಗಳಲ್ಲಿ ಸರಕಾರಕ್ಕೆ ಮಾರ್ಗದರ್ಶಿ ಆಗಬೇಕು ಎಂದವರು ನಿರ್ಧರಿಸಿದ್ದರು. ಅದರ ಫಲವಾಗಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯೇ ಅನ್ನಭಾಗ್ಯ, ಕ್ಷೀರ ಭಾಗ್ಯ ಮತ್ತು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಾಲ ಮನ್ನಾ ಕಾರ್ಯ ಕ್ರಮಗಳನ್ನು ಘೋಷಿಸಿದ್ದರು.
2006ರಲ್ಲಿ ಕಾಂಗ್ರೆಸ್ ಸೇರ್ಪಡೆ
ಜೆಡಿಎಸ್‌ನಿಂದ ಹೊರಬಂದ ಸಿದ್ದರಾಮಯ್ಯ ಅವರು ಬೆಂಗಳೂರಿನ ಅರಮನೆ ಮೈದಾನ ದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 2006ರ ಜುಲೈ 22ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಬೆಳವಣಿಗೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವು ನೀಡಿತು. ಬಳಿಕ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರೋಚಕ ಗೆಲುವು ಸಾಧಿಸಿದರು.
ಹುಟ್ಟೂರೆಂದರೆ ಅಭಿಮಾನ
ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದರೂ ಸಿದ್ದರಾಮಯ್ಯನವರ ಆಂತರ್ಯದಲ್ಲಿ ಸಿದ್ದರಾಮನ ಹುಂಡಿಗೆ ವಿಶೇಷ ಸ್ಥಾನವಿದೆ. ವೀರಗಾಸೆ ಕುಣಿತ ಎಂದರೆ ಈಗಲೂ ಸಿದ್ದರಾ ಮಯ್ಯ ಅವರಿಗೆ ಬಲು ಇಷ್ಟ, ಗ್ರಾಮದಲ್ಲಿ ನಡೆಯುವ ಉತ್ಸವಕ್ಕೆ ಪ್ರತಿ ವರ್ಷ ಭೇಟಿ ನೀಡುವ ಸಿದ್ದರಾಮಯ್ಯ ಅವರು ಗ್ರಾಮಸ್ಥರೊಂದಿಗೆ ಸೇರಿ ಹೆಜ್ಜೆ ಹಾಕುತ್ತಾರೆ.
ಗ್ಯಾರಂಟಿ ಮುಖ್ಯಮಂತ್ರಿ
2023ರ ಮೇ 20ರಂದು ಸಿದ್ದರಾಮಯ್ಯ 2ನೇ ಬಾರಿಗೆ ಕರ್ನಾಟಕಕ್ಕೆ ಮುಖ್ಯಮಂತ್ರಿ. ಚುನಾ ವಣೆಯಲ್ಲಿ ಭರವಸೆ ನೀಡಿದಂತೆ ಕೂಡಲೇ ಗೃಹಲಕ್ಷ್ಮೀ, ಶಕ್ತಿ ಯೋಜನೆ, ಉಚಿತ ವಿದ್ಯುತ್ ಗ್ಯಾರಂಟಿಗಳ ಜಾರಿ. ಮಾತುಕೊಟ್ಟಂತೆಯೇ ಯೋಜನೆ ಜಾರಿ ಮಾಡಿ, ಗ್ಯಾರಂಟಿ ಮುಖ್ಯ ಮಂತ್ರಿಯೆನಿಸಿಕೊಂಡರು.
*
ಹಿಂದುಳಿದ ನಾಯಕರಾದ ಡಿ. ದೇವರಾಜ ಅರಸು ಅವರು ತಮ್ಮ ಸುದೀರ್ಘ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದಾಖಲೆ ಸೃಷ್ಟಿಸಿದ್ದರು. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಹಾದಿಯಲ್ಲಿ ನಡೆದು ಡಿ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ, ಇವರು ಕೂಡ ಬಡವರ, ದೀನ ದಲಿತರ, ಹಿಂದುಳಿದವರ ಪರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯನ್ನು ಇಡಿ ದೇಶವೇ ಒಪ್ಪಿಕೊಂಡಿದೆ ಭವಿಷ್ಯ ದಲ್ಲಿ ಸಿದ್ದರಾಮಯ್ಯನವರು ಇನ್ನೂ ಹೆಚ್ಚಿನ ಜನರ ಸೇವೆ ಮಾಡುವಂತಾಗಲಿ.
-ಡಾ.ಎಂ.ಬಿ.ಪಾಟೀಲ, ಸಚಿವ
ಕರ್ನಾಟಕದ ರಾಜಕೀಯ ಇತಿಹಾಸದ ಸನ್ಮಾನ್ಯ ಸಿದ್ದರಾಮಯ್ಯನವರು ಹೊಸದೊಂದು ಇತಿಹಾಸ ಬರೆದಿದ್ದಾರೆ. ದೇವರಾಜ ಅರಸು ಅವರ ನಂತರ ಅತಿ ಹೆಚ್ಚು ಕಾಲ ಈ ರಾಜ್ಯದ ಮುಖ್ಯಮಂತ್ರಿಯಾಗಿ, ರಾಜ್ಯದ ಚುಕ್ಕಾಣಿ ಹಿಡಿದ ಏಕೈಕ ನಾಯಕ ನಮ್ಮ ಹೆಮ್ಮೆಯ ಸಿದ್ದರಾಮಯ್ಯನವರು. ಕುರಿ ಮೇಯಿಸುವ ಹಳ್ಳಿಯ ಹಿನ್ನೆಲೆಯಿಂದ ಬಂದು, ಇಂದು ‘ಬಜೆಟ್ ಬ್ರಹ್ಮ’ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದ ಅವರ ವ್ಯಕ್ತಿತ್ವ ಇಂದಿನ ಯುವಪೀಳಿಗೆಗೆ ದೊಡ್ಡ ಮಾದರಿ. ಅವರ ಆಡಳಿತದಲ್ಲಿನ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ನಿಜಕ್ಕೂ ಅದ್ಭುತ. ಅಧಿಕಾರ ಎನ್ನುವುದು ಅವರಿಗೆ ಭೋಗದ ವಸ್ತುವಾಗದೆ, ಅಹಿಂದ ಮತ್ತು ಶೋಷಿತ ಸಮುದಾಯಗಳ ಕಣ್ಣೀರು ಒರೆಸುವ ಸಾಧನವಾಗಿದೆ.
-ಡಾ.ಎನ್.ಟಿ. ಶ್ರೀನಿವಾಸ, ಶಾಸಕರು
ರಾಜಕೀಯ ಹೋರಾಟ ಮಾಡಿಕೊಂಡು ಬಂದಿರುವ ಶ್ರೀ ಸಿದ್ದರಾಮಯ್ಯನವರು ಸುದೀರ್ಘ ಮುಖ್ಯಮಂತ್ರಿಯಾಗಿ ಹೊರಹೊಮ್ಮಿzರೆ. ವಿರೋಧ ಪಕ್ಷದಲ್ಲಿ ಇದ್ದಾಗಲೂ ಹಾಗೂ ಮುಖ್ಯಮಂತ್ರಿಯಾದರೂ ಕೂಡಾ ಹೋರಾಟ ನಿಲ್ಲಲಿಲ್ಲ. ರಾಜ್ಯದ ಅಭಿವೃದ್ಧಿಗೆ ತುಂಬಾ ಶ್ರಮ ಪಡುತ್ತಿದ್ದಾರೆ. ಅಪರೂಪದ ರಾಜಕಾರಣಿಯಾಗಿರುವ ಅವರು, ನ್ಯಾಯ ಕೊಡಿಸು ವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಸಂಕಲ್ಪ ದೊಂದಿಗೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಯಾರು ಕೂಡಾ ಹೊಟ್ಟೆ ಹಸಿವಿನಿಂದ ಇರಬಾರದು ಎನ್ನುವ ಮಹತ್ವಾಕಾಂಕ್ಷಿಯಾದ, ಅತ್ಯಂತ ಪ್ರೀಯವಾದ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಪಂಚ ಯೋಜನೆಗಳು ಸಹ ಜಾರಿಗೆ ತಂದು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕರ್ನಾಟಕದ ಸುದೀರ್ಘ ಮುಖ್ಯಮಂತ್ರಿ ಎನ್ನುವ ದಾಖಲೆ ಬರೆದಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು.
-ಸಲೀಂ ಅಹ್ಮದ್, ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ದೀರ್ಘಾವಧಿ ಆಡಳಿತ ನಡೆಸಿ ಮಾದರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಇಂತಹ ಕ್ಷಣವನ್ನು ಸಂಭ್ರಮಿಸಲಿದೆ. ಅಧಿಕಾರದ ಅವಧಿಯಲ್ಲಿ ಬಡವ ರಿಗೆ ಅನೇಕ ಯೋಜನೆಗಳನ್ನು ರೂಪಿಸಿ ಸರ್ವ ಜನಾಂಗಕ್ಕೂ ಸಮಾನ ಅವಕಾಶವನ್ನು ಕಲ್ಪಿಸಿ ಸಮಾನತೆಯನ್ನು ಸಾರಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಒಬ್ಬರು ಇಡೀ ದೇಶದಲ್ಲಿ ಅಧಿಕ ಅವಧಿ ಆಡಳಿತ ನಡೆಸಿ ಇತಿಹಾಸ ಸೃಷ್ಟಿಸಿರುವುದು ಹೆಮ್ಮೆಯ ಸಂಗತಿ.
-ಟಿ. ಬಿ. ಜಯಚಂದ್ರ, ಶಿರಾ ಶಾಸಕರು
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೊಬ್ಬರು ದೇವರಾಜ ಅರಸು ನಂತರ ಸುದೀರ್ಘ ಅವಧಿ ಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಆಡಳಿತ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದೊಂದು ಇತಿಹಾಸದ ಪುಟಗಳಲ್ಲಿ ಉಳಿಯಬಹುದಾದ ಅಭೂತ ಪೂರ್ವ ಕ್ಷಣ. ಕಾಂಗ್ರೆಸ್ ಪಕ್ಷ ಇರುವುದೇ ಇತಿಹಾಸವನ್ನು ಸೃಷ್ಟಿಸಲು ಎಂಬಂತೆ ಸಿದ್ದರಾ ಮಯ್ಯ ಅವರ ಅಧಿಕಾರದ ಅವಧಿ ಇಡೀ ದೇಶದಲ್ಲಿ ಅಪರೂಪವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅರಸು ಅವಧಿಯನ್ನು ಮೀರಿಸಿದ್ದು ಅಪರೂಪದ ಸಂಗತಿ.
-ಕೆ. ಷಡಕ್ಷರಿ, ತಿಪಟೂರು ಶಾಸಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.6ರಂದು ದೇವರಾಜ ಅರಸು ಅವರ ದಾಖಲೆ ಯನ್ನು ಸರಿಗಟ್ಟಲಿದ್ದು ಅತಿ ಹೆಚ್ಚು ಅವಽಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಇತಿಹಾಸ ಸೃಷ್ಟಿಸುವುದರೊಂದಿಗೆ ಸುವರ್ಣಯುಗ ಸ್ಥಾಪನೆಗೆ ಮುಂದಾಗಿರುವುದಕ್ಕೆ ಹಾರ್ದಿಕ ಶುಭಾಶಯಗಳು. ಪರಿಶ್ರಮ ಮತ್ತು ಜನರ ಸೇವೆಗೆ ದೇವರು ಕೊಟ್ಟ ಅವಕಾಶ ಇದಾಗಿದ್ದು ಜನರ ಮನಸು ಹಾಗೂ ಸದಾ ಸಾಮಾನ್ಯರ ಒಡನಾಟದಲ್ಲಿ ಇರುವ ಅಸಾ ಮಾನ್ಯ ಹಾಗೂ ಅಪರೂಪದ ವ್ಯಕ್ತಿತ್ವದವರಿಗೆ ಮಾತ್ರವೇ ಇಂತಹ ಸೌಭಾಗ್ಯ ದೊರಕುತ್ತದೆ.
- ರೂಪಕಲಾ, ಶಾಸಕರು