Siddaramaiah Record: ಅರಸು ಚಿಂತನೆ ನನಸಾಗಿಸಿದ ಸಿದ್ದರಾಮಯ್ಯ
ರಾಜ್ಯದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಮಾಡಿದ ಕೀರ್ತಿಗೆ ಸಿದ್ದರಾಮಯ್ಯ ಅವರು ಪಾತ್ರರಾಗಿದ್ದಾರೆ. ಆಡಳಿತದ ಅಂಕಿ ಸಂಖ್ಯೆಗಿಂತ ಈ ಧೀಮಂತ ನಾಯಕರ ಬಡ ಪರ ಚಿಂತನೆ, ನಾಡಿನ ಅಭಿವೃದ್ಧಿ ಮಾದರಿಯಾಗಿದೆ. ದೇವರಾಜ್ ಅರಸು ಕರ್ನಾಟಕದ ಒಬ್ಬ ಪ್ರಮುಖ ರಾಜಕಾರಣಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು.
-
ವಾಟಾಳ್ ನಾಗರಾಜ್,
ಕನ್ನಡಪರ ಹೋರಾಟಗಾರ
ಸಿದ್ದರಾಮಯ್ಯ ಅವರು ಅರಸರಂತೆಯೇ ಮೊದಲ ಅವಧಿಯಲ್ಲಿ ಐದು ವರ್ಷ (2013-2018) ಪೂರ್ಣಾವಧಿ ಆಡಳಿತ ನಡೆಸಿದರು. ಅರಸು ಅವರ ನಂತರ ಪೂರ್ಣಾ ವಧಿ ಆಡಳಿತ ನಡೆಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆ ಅವರದು. 2023ರಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಹುದ್ದೆಗೇರಿದ್ದಾರೆ.
ರಾಜ್ಯದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಮಾಡಿದ ಕೀರ್ತಿಗೆ ಸಿದ್ದರಾಮಯ್ಯ ಅವರು ಪಾತ್ರರಾಗಿದ್ದಾರೆ. ಆಡಳಿತದ ಅಂಕಿ ಸಂಖ್ಯೆಗಿಂತ ಈ ಧೀಮಂತ ನಾಯಕರ ಬಡ ಪರ ಚಿಂತನೆ, ನಾಡಿನ ಅಭಿವೃದ್ಧಿ ಮಾದರಿಯಾಗಿದೆ. ದೇವರಾಜ್ ಅರಸು ಕರ್ನಾಟಕದ ಒಬ್ಬ ಪ್ರಮುಖ ರಾಜಕಾರಣಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಹಿಂದುಳಿದ ವರ್ಗಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ದೇವರಾಜ ಅರಸು ನೇರ, ಸರಳ, ನಿರ್ದಾಕ್ಷಿಣ್ಯ ಪರರಾಗಿದ್ದರು.
ನಿರ್ಭೀತ ಪ್ರಾಮಾಣಿಕತೆ ಇವರ ಮುಖ್ಯ ಗುಣಗಳಾಗಿದ್ದವು. ಇವರು ಆಡುತ್ತಿದ್ದುದು ಸಾಮಾನ್ಯನ ಭಾಷೆ. ಅವರ ಒಳಿತಿನ ಬಗ್ಗೆ ಇವರಿಗೆ ವಿಶೇಷ ಕಾಳಜಿಯಿತ್ತು. ಜತೆಯವರಿಗೆಲ್ಲ ಚೈತನ್ಯ ತುಂಬುವ, ದೃಢ ಆತ್ಮವಿಶ್ವಾಸದಿಂದ ಕೂಡಿದ ರಚನಾತ್ಮಕ ಆಶಾವಾದ ಇವರ ದಾಗಿತ್ತು. ಕಷ್ಟಗಳಿಗೆ ತಲೆಬಾಗುವುದು ಇವರ ಜಾಯಮಾನವಾಗಿರಲಿಲ್ಲ. ಪರಿವರ್ತನೆ ಯ ಸಮಾಜದಲ್ಲಿ ಕಷ್ಟ , ಅನಿವಾರ್ಯ ಕ್ರಿಯೆಗಳು, ಅವನ್ನು ಎದುರಿಸಲೇಬೇಕು ಎನ್ನುವುದು ಇವರ ನಿಲುವಾಗಿತ್ತು.
ಅರಸು, ಸಿದ್ದು ಕಾಲಘಟಕ್ಕೂ ವ್ಯತ್ಯಾಸ: ಸಿದ್ದರಾಮಯ್ಯ ಅವರು ಅರಸರಂತೆಯೇ ಮೊದಲ ಅವಧಿಯಲ್ಲಿ ಐದು ವರ್ಷ (2013-2018) ಪೂರ್ಣಾವಧಿ ಆಡಳಿತ ನಡೆಸಿದರು. ಅರಸು ಅವರ ನಂತರ ಪೂರ್ಣಾವಧಿ ಆಡಳಿತ ನಡೆಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆ ಅವರದು. 2023ರಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಹುದ್ದೆಗೇರಿದ್ದಾರೆ.
ದೇವರಾಜ ಅರಸು ಅವರದ್ದು 1973 ಕಾಲಘಟ್ಟಕ್ಕೂ ಪ್ರಸ್ತುತ ಸಿದ್ದರಾಮಯ್ಯ ಅವರದ್ದು ಆಡಳಿತ ಅವಧಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಅರಸು ಅವರ 1973ರ ಆಡಳಿತದ ಕಾಲಘಟ್ಟದಲ್ಲಿ ಆಗಿನ ಶಾಸಕರು ಪ್ರಾಮಾಣಿಕರಿದ್ದರು. ಸ್ಪೀಕರ್ ನಾಗರತ್ಮಮ್ಮ ಇದ್ದರು.
ನಾನು ಸೇರಿದಂತೆ ಬಂಗಾರಪ್ಪ ಅವರಂತಹ ಜನಪ್ರತಿನಿಧಿಗಳನ್ನು ಇಂದು ಕಾಣಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಮೈಲುಗಲ್ಲು ಸಾಧಿಸಿದ್ದಾರೆ. ಸಿದ್ದರಾಮಯ್ಯ ಸುತ್ತಲೂ ಭ್ರಷ್ಟರು ಇದ್ದಾರೆ. ಜೆಡಿಎಸ್, ಬಿಜೆಪಿಯಲ್ಲೂ ಭ್ರಷ್ಟರಿದ್ದಾರೆ. ಇರುವುದರಲ್ಲಿ ಆಶಾವಾದಿ ಸಿದ್ದರಾಮಯ್ಯ ಅವರು. ಇವರಂತಹ ಇನ್ನೊಬ್ಬ ರಾಜಕಾರಣಿಯನ್ನು ಕಾಣಲು ಸಾಧ್ಯವಿಲ್ಲ.
ಕಲಿ ಪುರುಷ ಎಂದಿದ್ದ ಅರಸು: ಡಿ.ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ನನ್ನನ್ನು ಮಂತ್ರಿ ಮಾಡಲು ಬಹಳ ಪ್ರಯತ್ನ ಮಾಡಿದ್ದರು. ಆದರೆ ಸಚಿವನಾದರೆ ಹೋರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅರಿತೆ. ನಾನು ಯೋಚನೆ ಮಾಡಿ ಒಂದು ದಿನ ಅರಸು ಮನೆಗೆ ಹೋದೆ. ಆಗ ಅವರು ನೀವು ಏನು ನಿಶ್ಚಿಯಿಸಿದ್ದೀರಿ ಎಂದರು.
ನಾನು ಸಚಿವನಾಗಿ ಚಳವಳಿ ಮಾಡಬಹುದೆ ಎಂದೆ. ಆಗ ಅರಸು ಅವರು ಇದು ಕಷ್ಟ. ನನ್ನ ಕೊನೆಯ ಉಸಿರು ತನಕ ಕನ್ನಡ ಹೋರಾಟ ನಿಲ್ಲಿಸುವುದಿಲ್ಲ ಎಂದಾಗ ಅರಸು ಅವರು ನನ್ನನ್ನು ಕಲಿ ಪುರುಷ ಎಂದು ಕರೆದರು. ಚುನಾವಣೆಯಲ್ಲಿ ನನಗೆ ಆರು ಸೀಟು ಸಿಪಿಐ ಪಕ್ಷದ ಸದಸ್ಯ ಎಂ.ಎಸ್.ಕೃಷ್ಣನ್ ಅವರಿಗೆ 6 ಸೀಟು ಬಿಟ್ಟುಕೊಡುವೆ ಅವರನ್ನು ಗೆಲ್ಲಿಸಿಕೊಂಡು ಬಂದು ಬಿಡಿ ಎಂದರು.
ನಾನು ಇದಕ್ಕೆ ಒಪ್ಪಲಿಲ್ಲ. ಇಬ್ಬರನ್ನೂ ಎಂಎಲ್‌ಸಿ ಮಾಡುತ್ತೇನೆ ಎಂದು ಅರಸು ಅವರು ತಿಳಿಸಿದರು. ಅರಸು ಬಹಳ ವಿನಯ ದಯೆ, ಪ್ರೀತಿ ಅಭಿಮಾನ ಎಲ್ಲವೂ ಇತ್ತು. ಮುಖ್ಯ ಮಂತ್ರಿ ಎಂಬ ಅಹಂ ಇರಲಿಲ್ಲ. ಒಂದು ಕಾಲದಲ್ಲಿ ನಿಜಲಿಂಗಪ್ಪ ಅವರ ಬಲಗೈ ಬಂಟ ರಾಗಿದ್ದರು. ನಿಜಲಿಂಗಪ್ಪ ಅವರು ದೇವರಾಜ ಅರಸು ಅವರ ನಡುವೆ ಆಡಳಿತದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
ಗಂಧದ ಮರದಂತೆ ಸಿದ್ದರಾಮಯ್ಯ: ಇಂದಿನ ರಾಜಕಾರಣದಲ್ಲಿ ಶಾಸಕರು, ಸಂಸದರು ಕೆಟ್ಟ ನಾಮಧೇಯದಲ್ಲಿದ್ದಾರೆ. ಈ ಗುಂಪಿನಲ್ಲಿ ಸಿದ್ದರಾಮಯ್ಯ ಅವರು ಗಂಧದ ಮರದಂತೆ. ಆಡಳಿತ ಅಂಕಿ ಅಂಶ ಎಂಬುದು ಸಿದ್ದರಾಮಯ್ಯ ಅವರದ್ದು ಚಾಲೆಂಜ್ ಅಲ್ಲ. ದೇವರಾಜು ಅರಸು ಅವರ ಚಿಂತನೆ ಇಂದು ಪಾಲಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲೇ ಬೇಕು. ಸಿದ್ದರಾಮಯ್ಯ ಅವರ ಮುಖದಲ್ಲಿ ಸೌಜನ್ಯ ಪ್ರೀತಿಯ ಸಂಕೇತ ಕಾಣುತ್ತದೆ.
ಅವರ ನಡೆದುಕೊಂಡು ಹೋದಾಗ ದೇವರ ಮೆರವಣಿಗೆ ರೀತಿ ಇರುತ್ತದೆ. ನಾನು ಅವರು 50 ವರ್ಷದ ಸ್ನೇಹಿತರು.ನನ್ನ ವಯಸ್ಸಿಗಿಂತ ನನ್ನ ಹೋರಾಟ ಅವರಿಗೆ ಬೇಕು. ನನ್ನ ಬಾಣಗಳ ಬಿರುಸು ಅವರಿಗೆ ಬೇಕು.
ನಾಡು, ನುಡಿ, ಜಲ ಸಂರಕ್ಷಣೆಗೆ ಶ್ರಮ: ‘ನನ್ನನ್ನೂ ಸೇರಿದಂತೆ, ಕೆಂಗಲ್ ಹನುಮಂತ ಯ್ಯ, ವೀರೇಂದ್ರ ಪಾಟೀಲ, ದೇವರಾಜ ಅರಸು, ಗುಂಡೂರಾವ್ ಅವರು ಸೇರಿದಂತೆ ಹಲವು ರಾಜಕೀಯ ಧುರೀಣರಿಗೆ ಆಪ್ತರಾಗಿದ್ದರೂ, ಎಂದಿಗೂ ವಾಟಾಳ್ ನಾಗರಾಜ್ ಅವರು ಅಧಿಕಾರಕ್ಕೆ ಹಪಹಪಿಸಿದವರಲ್ಲ. ಕನ್ನಡಪರ ಹೋರಾಟಗಾರರಾದ ಇವರು ದೀರ್ಘ ಕಾಲದಿಂದ ಕನ್ನಡ ನಾಡು, ನುಡಿ, ನೆಲ,ಜಲಗಳ ಸಂರಕ್ಷಣೆಗೆ ಶ್ರಮಿಸಿದ್ದಾರೆ.
ರಾಜಕೀಯವಾಗಿ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದ್ದರೂ, ಕನ್ನಡ ಚಳವಳಿ ಪಕ್ಷ ಬಿಟ್ಟು ಬೇರೆಡೆಗೆ ಅವರು ಮುಖ ಮಾಡಲಿಲ್ಲ. ಮಾತೃಭಾಷೆ, ನೆಲ ಜಲದ ಬಗ್ಗೆ ಬದ್ಧತೆಯಿರುವ ವಾಟಾಳ್ ನಾಗರಾಜ್ ಅವರ ಬಗ್ಗೆ ಅಪಾರ ಗೌರವಾದರವಿದೆ. ನನ್ನ ವಿದ್ಯಾರ್ಥಿ ದೆಸೆ ಯಿಂದಲೂ ಅವರ ಭಾಷೆಯನ್ನು ಕೇಳುತ್ತಾ ಬಂದಿದ್ದೇನೆ ಎಂದು ಸ್ಮರಿಸಿದರು. ವಾಟಾಳ್ ನಾಗರಾಜ್ ಅವರನ್ನು ‘ನಾಯಕರು’ ಎಂದು ತಾನು ಸಂಭೋದಿಸುತ್ತಿದ್ದು, ಜನ ಅವರನ್ನು ನಾಯಕರಾಗಿ ಕಂಡಿದ್ದಾರೆ’ ಎಂದು ಇತ್ತೀಚಿಗೆ ನನ್ನ ಬಗ್ಗೆ ಹೊಗಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ಅರ್ಥ ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಕಾಳಜಿ.