ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಟೂರ್ನಿಯ 30ನೇ ಪಂದ್ಯಕ್ಕೆ CSK vs LSG ಸಂಭಾವ್ಯ ಪ್ಲೇಯಿಂಗ್‌ XI

CSK vs LSG Match Preview: ಲಖನೌ ಸೂಪರ್ ಜಯಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಏಪ್ರಿಲ್‌ 14 ರಂದು ಸೋಮವಾರ ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 30ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಉಭಯ ತಂಡಗಳ ಬಲಾಬಲ, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಬಲಿಷ್ಠ ಲಖನೌ ಸೂಪರ್‌ ಜಯಂಟ್ಸ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಸವಾಲು!

ಚೆನ್ನೈ ಸೂಪರ್‌ ಕಿಂಗ್ಸ್‌ vs ಲಖನೌ ಸೂಪರ್‌ ಜಯಂಟ್ಸ್‌

Profile Ramesh Kote Apr 13, 2025 5:28 PM

ಲಖನೌ: ಸತತ ಐದು ಪಂದ್ಯಗಳನ್ನು ಸೋತು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಆಘಾತಕ್ಕೆ ಒಳಗಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ನಾಳೆ (ಏಪ್ರಿಲ್‌ 14) ನಡೆಯಲಿರುವ 30ನೇ ಪಂದ್ಯದಲ್ಲಿ (CSK vs LSG) ಬಲಿಷ್ಠ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈ ಮಹತ್ವದ ಪಂದ್ಯಕ್ಕೆ ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. ಎಂಎಸ್‌ ಧೋನಿ (MS Dhoni) ನಾಯಕತ್ವದ ಸಿಎಸ್‌ಕೆ ತನ್ನ ಕೊನೆಯ ಪಂದ್ಯದಲ್ಲಿ ತವರು ಅಭಿಮಾನಿಗಳ ಎದುರು ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ 8 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆದರೆ, ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿ, ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.

ಲಖನೌ ಸೂಪರ್‌ ಜಯಂಟ್ಸ್‌ ತಂಡ ಇಲ್ಲಿಯವರೆಗೂ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಎರಡರಲ್ಲಿ ಸೋಲು ಅನುಭವಿಸಿದೆ. ಒಟ್ಟು 8 ಅಂಕಗಳೊಂದಿಗೆ ಎಲ್‌ಎಸ್‌ಜಿ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಲಖನೌ ಪರ ನಿಕೋಲಸ್‌ ಪೂರನ್‌, ಏಡೆನ್‌ ಮಾರ್ಕ್ರಮ್‌ ಹಾಗೂ ಮಿಚೆಲ್‌ ಮಾರ್ಷ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇದು ಲಖನೌ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಬೌಲಿಂಗ್‌ನಲ್ಲಿ ಶಾರ್ದುಲ್‌ ಠಾಕೂರ್‌,ದಿಗ್ವೇಷ್‌ ರಾಠಿ ಹಾಗೂ ರವಿ ಬಿಷ್ಣೋಯ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

IPL 2025: ಸೋಲಿಗೆ ಕಾರಣ ಕೇಳಿದರೆ ಜೋರಾಗಿ ನಕ್ಕ ನಾಯಕ ಅಯ್ಯರ್‌

ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪ್ರಸಕ್ತ ಟೂರ್ನಿಯಲ್ಲಿ ಹೀನಾಯ ಪ್ರದರ್ಶನವನ್ನು ತೋರುತ್ತಿದೆ. ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಗೆಲುವು ಪಡೆದ ಬಳಿಕ ನಂತರ ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಋತುರಾಜ್‌ ಗಾಯಕ್ವಾಡ್‌ ಗಾಯದ ಕಾರಣ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಸ್‌ ಧೋನಿ ಕಳೆದ ಪಂದ್ಯದ ಮೂಲಕ ಸಿಎಸ್‌ಕೆ ನಾಯಕತ್ವಕ್ಕೆ ಮರಳಿದ್ದಾರೆ. ಆದರೂ ಪ್ರಸಕ್ತ ಟೂರ್ನಿಯಲ್ಲಿ ಸಿಎಸ್‌ಕೆ ತಂಡದ ಹಣೆ ಬರಹ ಬದಲಾಗಲಿಲ್ಲ. ಹಾಗಾಗಿ ಕಳೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿತ್ತು.

ರಿಷಭ್‌ ಪಂತ್‌ ನಾಯಕತ್ವದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಪ್ರಸಕ್ತ ಟೂರ್ನಿಯಲ್ಲಿ ಅಪಾಯಕಾರಿ ಪ್ರದರ್ಶನವನ್ನು ತೋರುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಸ್ಪೋಟಕ ಆಟವನ್ನು ಹೊರ ತರುತ್ತಿದೆ. ನಿಕೋಲಸ್‌ ಪೂರನ್‌, ಏಡನ್‌ ಮಾರ್ಕ್ರಮ್‌ ಹಾಗೂ ಮಿಚೆಲ್‌ ಮಾರ್ಷ್‌ ಭಯಾನಕ ಪಾರ್ಮ್‌ನಲ್ಲಿದ್ದಾರೆ. ಸಿಎಸ್‌ಕೆ ತಂಡ ಬ್ಯಾಟಿಂಗ್‌ನಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಲಖನೌ ಹಾಗೂ ಚೆನ್ನೈ ನಡುವಣ ಪಂದ್ಯ ಏಕಪಕ್ಷೀಯವಾಗುವ ಸಾಧ್ಯತೆ ಇದೆ.

CSK vs KKR: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಸುಲಭವಾಗಿ ಶರಣಾದ ಚೆನ್ನೈ ಸೂಪರ್‌ ಕಿಂಗ್ಸ್‌!

ಪಿಚ್‌ ರಿಪೋರ್ಟ್‌

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ನಡುವಣ ಪಂದ್ಯ ನಡೆಯುವ ಏಕನಾ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಈ ಅಂಗಣದಲ್ಲಿ ಚೇಸಿಂಗ್‌ ಸುಲಭವಾಗಿದೆ. ಈ ಕಾರಣದಲ್ಲಿ ಟಾಸ್‌ ಗೆದ್ದ ತಂಡದ ನಾಯಕ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರಥಮ ಇನಿಂಗ್ಸ್‌ನಲ್ಲಿ 220ಕ್ಕೂ ಅಧಿಕ ಮೊತ್ತವನ್ನು ಕಲೆ ಹಾಕಿದರೆ ಉತ್ತಮ.

ಚೆನ್ನೈ vs ಲಖನೌ ಮುಖಾಮುಖಿ ದಾಖಲೆ

ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಒಟ್ಟು 5 ಪಂದ್ಯಗಳಲ್ಲಿ ಕಾದಾಟ ನಡೆಸಿವೆ. ಇದರಲ್ಲಿ ಲಖನೌ ತಂಡ ಮೂರು ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಚೆನ್ನೈ ತಂಡ ಕೇವಲ ಒಂದೇ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇನ್ನುಳಿದ ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿದೆ. 2024ರ ಐಪಿಎಲ್‌ ಟೂರ್ನಿಯಲ್ಲಿ ಕೊನೆಯ ಬಾರಿ ಉಭಯ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯವನ್ನು ಎಲ್‌ಎಸ್‌ಜಿ ಗೆದ್ದುಕೊಂಡಿತ್ತು.

GT vs LSG: ಗುಜರಾತ್‌ ಟೈಟನ್ಸ್‌ಗೆ ಶಾಕ್‌ ನೀಡಿದ ಲಖನೌ ಸೂಪರ್‌ ಜಯಂಟ್ಸ್‌!

ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಲಖನೌ ಸೂಪರ್‌ ಜಯಂಟ್ಸ್‌: ಏಡೆನ್‌ ಮಾರ್ಕ್ರಮ್‌, ಮಿಚೆಲ್‌ ಮಾರ್ಷ್‌, ನಿಕೋಲಸ್‌ ಪೂರನ್‌, ರಿಷಭ್‌ ಪಂತ್‌ (ನಾಯಕ, ವಿಕೆಟ್‌ ಕೀಪರ್‌), ಡೇವಿಡ್‌ ಮಿಲ್ಲರ್‌, ಅದ್ಬುಲ್‌ ಸಮದ್‌, ಶಾರ್ದುಲ್‌ ಠಾಕೂರ್‌, ಆಕಾಶ ದೀಪ್‌, ದಿಗ್ವೇಶ ರಾಠಿ, ಆವೇಶ್‌ ಖಾನ್‌, ರವಿ ಬಿಷ್ಣೋಯ್‌

ಇಂಪ್ಯಾಕ್ಟ್‌ ಪ್ಲೇಯರ್‌: ಆಯುಷ್‌ ಬದೋನಿ

ಚೆನ್ನೈ ಸೂಪರ್‌ ಕಿಂಗ್ಸ್‌: ರಚಿನ್‌ ರವೀಂದ್ರ, ಡೆವೋನ್‌ ಕಾನ್ವೆ, ರಾಹುಲ್‌ ತ್ರಿಪಾಠಿ, ವಿಜಯ್‌ ಶಂಕರ್‌, ಶಿವಂ ದುಬೆ, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್)‌, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌, ನೂರ್‌ ಅಹ್ಮದ್‌, ಅನ್ಸುಲ್‌ ಕಾಂಬೋಜ್‌, ಖಲೀಲ್‌ ಅಹ್ಮದ್‌

ಇಂಪ್ಯಾಕ್ಟ್‌ ಪ್ಲೇಯರ್‌: ಮತೀಶ ಪತಿರಣ

IPL 2025: ಅರ್ಧಶತಕ ಸಿಡಿಸಿ ಗುಜರಾತ್‌ ಟೈಟನ್ಸ್‌ ಪರ ನೂತನ ದಾಖಲೆ ಬರೆದ ಶುಭಮನ್‌ ಗಿಲ್‌!

ಪಂದ್ಯದ ವಿವರ

2025ರ ಐಪಿಎಲ್‌ ಟೂರ್ನಿಯ 30ನೇ ಪಂದ್ಯ

ಲಖನೌ ಸೂಪರ್‌ ಜಯಂಟ್ಸ್‌ vs ಚೆನ್ನೈ ಸೂಪರ್‌ ಕಿಂಗ್ಸ್‌

ದಿನಾಂಕ: ಏಪ್ರಿಲ್‌ 14, 2025

ಸಮಯ: ಸಂಜೆ 07: 30ಕ್ಕೆ

ಸ್ಥಳ: ಏಕನಾ ಕ್ರೀಡಾಂಗಣ, ಲಖನೌ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಸಿನಿಮಾ, ಡಿಸ್ನಿ ಹಾಟ್‌ಸ್ಟಾರ್‌