ಮಹಿಳೆಯರ ಕ್ಯಾನ್ಸರ್‌ಗೆ ಲಸಿಕೆ ಸಿದ್ಧ:ಇನ್ನು ಆರು ತಿಂಗಳಲ್ಲಿ ಲಭ್ಯ!
ಮಹಿಳೆಯರನ್ನು ಬಾಧಿಸುತ್ತಿರುವ ಕ್ಯಾನ್ಸರ್‌ಗೆ ಲಸಿಕೆ ಸಿದ್ಧವಾಗಿದ್ದು, ಐದರಿಂದ ಆರು ತಿಂಗಳಲ್ಲಿ ಅದು ಲಭ್ಯವಾಗಲಿದೆ. 9 ರಿಂದ 16 ವರ್ಷ ವಯಸ್ಸಿನವರು ಲಸಿಕೆಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸಚಿವ ಪ್ರತಾಪ್‌ರಾವ್ ಜಾಧವ್ ಮಂಗಳವಾರ(ಫೆ.18) ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಸಿಕೆ ಕುರಿತಾದ ಸಂಶೋಧನೆ ಬಹುತೇಕ ಪೂರ್ಣಗೊಂಡಿದೆ. ಮತ್ತಷ್ಟು ಪ್ರಯೋಗಗಳು ಕೂಡ ನಡೆಯುತ್ತಿವೆ ಎಂದು ಹೇಳಿದರು.