ಕೈ, ಕಾಲುಗಳ ಮೇಲೆ ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ!
ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ರಾಥೋಂಡ ಗ್ರಾಮದ 28 ವರ್ಷದ ಮನೀಷಾ, ವರದಕ್ಷಿಣೆ ಒತ್ತಡ ಮತ್ತು ಮಾನಸಿಕ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒತ್ತಡದಿಂದಾಗಿ ಆಕೆ ಹಲವು ತಿಂಗಳುಗಳಿಂದ ತಾಯಿಯ ಮನೆಗೆ ಮರಳಿದ್ದಳು. 2023ರಲ್ಲಿ ಗಾಜಿಯಾಬಾದ್‌ನ ಸಿದ್ಧಿಪುರ ಗ್ರಾಮದ ಕುಂದನ್‌ನನ್ನು ವಿವಾಹವಾದ ಬಳಿಕ, ಆಕೆಯ ಗಂಡನ ಮನೆಯವರು ಹೆಚ್ಚಿನ ವರದಕ್ಷಿಣೆಗಾಗಿ ಒತ್ತಾಯಿಸಿ ಕಿರುಕುಳ ನೀಡಿದ್ದರು.