ಭಾರತದಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಹೃದಯ ವೈಫಲ್ಯ ಹೆಚ್ಚಳ
ಹೃದಯ ವೈಫಲ್ಯದ ಪ್ರಕರಣಗಳು ಭಾರತದಲ್ಲಿ ಪ್ರತಿ ವರ್ಷ 5 ಲಕ್ಷದಿಂದ 18 ಲಕ್ಷದವರೆಗೆ ವರದಿ ಯಾಗುತ್ತಿವೆ. ಹೃದಯ ವೈಫಲ್ಯಕ್ಕೆ ತುತ್ತಾಗುತ್ತಿರುವ ಜನ ಅತಿಹೆಚ್ಚಿನ ಸಂಖ್ಯೆಯಲ್ಲಿ ಇರುವ ದೇಶಗಳ ಸಾಲಿನಲ್ಲಿ ಭಾರತ ಕೂಡ ಒಂದು. ಹೃದಯ ವೈಫಲ್ಯದ ಪ್ರಕರಣಗಳು ಈ ರೀತಿ ಹೆಚ್ಚಾಗು ತ್ತಿರುವುದಕ್ಕೂ ಕಳೆದ ಕೆಲವು ದಶಕಗಳಲ್ಲಿ ನಮ್ಮ ಜೀವನ ಶೈಲಿಯು ಬದಲಾವಣೆ ಕಂಡಿರುವ ಬಗೆಗೂ ನೇರವಾದ ಸಂಬಂಧ ಇದೆ.