3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್ ಸ್ಟಾಪ್ ಅಲ್ಲ!
ಡೊನಾಲ್ಡ್ ಟ್ರಂಪ್ ಎಂಬ ‘ಸುಂಕದ ಸರದಾರ’ ಕಳೆದ ಕೆಲ ದಿನಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಮೆರಿಕದಿಂದ ಅತಿರೇಕದ ಸುಂಕ ಹೇರಿಕೆಯ ಪ್ರಸ್ತಾವ ಹೊರಬೀಳುತ್ತಲೇ ಜಗತ್ತು ತಲ್ಲಣಗೊಂಡಿತು. ನಂತರದಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧೆಡೆಯ ಷೇರು ಮಾರುಕಟ್ಟೆಗಳು ಕುಸಿದಿದ್ದೂ ಆಯಿತು, ಸರಕು ಮಾರುಕಟ್ಟೆಗಳಲ್ಲೂ ಅನಿಶ್ಚಿತತೆ ತಲೆದೋರುವಂತಾಯಿತು.