ನಿಲ್ಲದ ಮರಾಠಿ-ಹಿಂದಿ ಭಾಷಾ ಸಂಘರ್ಷ
ಅನುಮತಿ ಇಲ್ಲದೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ರ‍್ಯಾಲಿ ಆಯೋಜಿಸಿದ್ದು, ಇದರಿಂದ ಥಾಣೆ ಜಿಲ್ಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಗೊಂದಲ ಉಂಟಾಗಿದೆ. ರ‍್ಯಾಲಿಗೆ ಅನುಮತಿಯಿಲ್ಲದಿದ್ದರೂ, ಎಂಎನ್‌ಎಸ್ ಕಾರ್ಯಕರ್ತರು ಮುಂಬೈಗೆ ಮೆರವಣಿಗೆ ಮೂಲಕ ತೆರಳಲು ಮುಂದಾಗಿದ್ದರು. ಆದರೆ ಎಂಎನ್‌ಎಸ್‌ನ ಥಾಣೆ ಮತ್ತು ಪಾಲ್ಘರ್ ಮುಖ್ಯಸ್ಥ ಅವಿನಾಶ್ ಜಾಧವ್ ಸೇರಿದಂತೆ ಇತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.